ಕುಡಿದ ಮತ್ತಿನಲ್ಲಿ ಪೊಲೀಸರಿಗೆ ಬೈಗುಳ : ಲಾಟಿ ಹಿಡಿದ್ಮೇಲೆ ಕುಡುಕನ ಬಾಯಿಗೆ ಬಿತ್ತು ಬೀಗ..!

ಕುಡಿದ ಮತ್ತಿನಲ್ಲಿ ಪೊಲೀಸರಿಗೆ ಬಾಯಿಗೆ ಬಂದಂತೆ ಬೈದ ಕುಡುಕನೊಬ್ಬ ಲಾಟಿ ಹಿಡಿದ್ಮೇಲೆ ಬಾಯಿ ಮುಚ್ಚಿಕೊಂಡ ಹೈಡ್ರಾಮಾ ರಾಮನಗರದ ಸಂಚಾರಿ ಪೊಲೀಸ್ ಠಾಣೆ ಎದುರು ನಡೆದಿದೆ.

ಚನ್ನಪಟ್ಟಣ ತಾಲೂಕಿನ ಮಾಕಳಿ ಗ್ರಾಮದ ಗಿರೀಶ್ ಎಂಬಾತ ಫುಲ್ ಟೈಟ್ ಆಗಿ ಗಲಾಟೆ ಮಾಡಿದ ವ್ಯಕ್ತಿ. ರಸ್ತೆಯಲ್ಲಿ ಅಡ್ಡದಿಡ್ಡಿ ಟಾಟಾ ಎಸಿ ಓಡಿಸುತ್ತಿದ್ದ ಗಿರೀಶ್ ನಿಗೆ ಪ್ರಶ್ನಿಸಿದ ವಾಹನಸವಾರರಿಗೂ ಅವಾಚ್ಯಶಬ್ಧಗಳಿಂದ ಗಿರೀಶ್ ನಿಂದನೆ ಮಾಡಿದ್ದಾನೆ. ಅಲ್ಲದೇ ಚೇರ್ ಎಸೆದಾಡಿ ಹಲ್ಲೆಗೆ ಮುಂದಾಗಿದ್ದಾನೆ. ಬಾಯಿ ಮಾತಿಗೆ ಬಗ್ಗದ ಆತನನ್ನ ಪೊಲೀಸರು ಲಾಟಿ ತೋರಿಸಿ ಬಾಯಿ ಮುಚ್ಚಿಸಿದ್ದಾರೆ.

ಪೊಲೀಸರಿಗೂ ಬಾಯಿಗೆ ಬಂದಂತೆ ಬೈದ ಕುಡುಕ ಡ್ರೈವರ್ ನನ್ನು ಪೊಲೀಸರು ಹರಸಾಹಸಪಟ್ಟು ಆ್ಯಂಬುಲೆನ್ಸ್ ಗೆ ಹತ್ತಿಸಿದ್ದಾರೆ. ಮೆಡಿಕಲ್ ಚೆಕ್ ಮಾಡಿಸಿದ ನಂತರ ಸಂಚಾರಿ ಠಾಣೆ ಪೊಲೀಸರು ಈತನನ್ನ ವಶಕ್ಕೆ ಪಡೆದಿದ್ದಾರೆ.

ಕಳೆದ ರಾತ್ರಿ ನಡೆದಿರುವ ಘಟನೆ ವಿಡಿಯೋ ಸದ್ಯ ವೈರಲ್ ಆಗಿದೆ.

 

Leave a Reply

Your email address will not be published. Required fields are marked *