ಗಣೇಶ ಮೂರ್ತಿಯ ಬಳಿ ಕಾಣಿಸಿಕೊಂಡ ಮೂಷಕ : ಕಣ್ತುಂಬಿಕೊಂಡ ಜನ

ಇನ್ನೂ ಗಣೇಶನ ಹಬ್ಬದಲ್ಲೇ ಇರುವ ಜನರಿಗೆ ಹೀಗೊಂದು ದೃಶ್ಯ ಆಶ್ಚರ್ಯವನ್ನು ಮೂಡಿಸಿದೆ. ಹೌದು…ಗಣೇಶ ಮೂರ್ತಿಯ ಬಳಿ ಕಾಣಿಸಿಕೊಂಡ ಮೂಷಕನನ್ನು ನೋಡಿ ಜನ ಆಶ್ಚರ್ಯದೊಂದಿಗೆ ಖುಷಿಪಟ್ಟಿದ್ದಾರೆ.

ವಿಜಯಪುರ ಜಿಲ್ಲೆಯ ತಿಕೋಟಾ ಪಟ್ಟಣದ ಮೇನ್ ಬಜಾರ್ ನಲ್ಲಿ ವಿಘ್ನೇಶ್ವರನ ಮೂರ್ತಿ ಬಳಿ ಇಲಿರಾಯ ಆಟವಾಡಿದ ಘಟನೆ ನಡೆದಿದೆ. ಈ ಅದ್ಬುತ ದೃಶ್ಯಗಳನ್ನು ನೋಡಿದ ಜನ ಕಣ್ತುಂಬಿಕೊಂಡಿದ್ದಾರೆ. ಗಣೇಶ ಹಬ್ಬದಲ್ಲಿ ಆರಾಧನೆಯಲ್ಲಿ ಅಪರೂಪದ ಘಟನೆ ಕಂಡು ತಿಕೋಟಾ ಜನತೆ ನಿಬ್ಬೆರಗಾಗಿದ್ದಾರೆ.

ಸಾರ್ವಜನಿಕರು ಗಣೇಶ ಮೂರ್ತಿಯ ಪಾದದ ಬಳಿ ಆಟವಾಡಿದ ಇಲಿಯನ್ನು ಮೊಬೈಲಿನಲ್ಲಿ ಗಣೇಶ ಮೂರ್ತಿ, ಇಲಿಯ ವಿಡಿಯೋ ಸೆರೆ ಹಿಡಿದ್ದಾರೆ.

 

 

 

 

Leave a Reply

Your email address will not be published. Required fields are marked *