ಜೈಪುರಕ್ಕೆ ಹರಿದು ಬಂದ ಮಿಡತೆಗಳ ಮಹಾಪೂರ; ದಾಳಿಯ ಭಯಾನಕ ವಿಡಿಯೋಗಳನ್ನ ಹಂಚಿಕೊಂಡ ಜನ

1990 ರ ನಂತರ ಮೊದಲ ಬಾರಿಗೆ ಸೋಮವಾರ ಪಶ್ಚಿಮ ರಾಜಸ್ಥಾನದಿಂದ ಜೈಪುರದೆಡೆಗೆ ಮಿಡತೆಗಳ ಮಹಾಪೂರ ಹರಿದುಬರುತ್ತಿದೆ. ವಾಯುವ್ಯ ಪಾಕಿಸ್ತಾನದ ಮೂಲದಿಂದ ಬಾರ್ಮರ್, ಜೈಸಾಲೇಮಾರ್ ಜಿಲ್ಲೆಗಳ ಮಾರ್ಗವಾಗಿ ಜೈಪುರಕ್ಕೆ ಹಾರಿ ಬಂದಿರುವ ಲಕ್ಷಾಂತರ ಸಂಖ್ಯೆಯ ಮಿಡತೆಗಳ ಸಮೂಹ ಅಲ್ಲಿನ ನಿವಾಸಿಗಳಿಗೆ ಆತಂಕವನ್ನು ತರಿಸಿದೆ.

ಬೆಳೆಗಳನ್ನು ನಾಶಪಡಿಸುವ ಈ ಕ್ರಿಮಿಕೀಟಗಳನ್ನು ನಿಯಂತ್ರಿಸಲು ಸರ್ಕಾರ ಹಲವು ತಂಡಗಳನ್ನು ನೇಮಿಸಿದೆ. ಹಲವರು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಮತ್ತು ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಕೋವಿಡ್ -19 ಸೋಂಕು ಹೆಚ್ಚಿನ ಸಂಖ್ಯೆಗಳಲ್ಲಿ ಇರುವ ರಾಜ್ಯವಾದ ರಾಜಸ್ಥಾನಕ್ಕೆ ಈಗ ಈ ಮಿಡತೆಗಳು ಬೆಳೆಗಳನ್ನು ನಾಶಪಡಿಸುವುದರಿಂದ ತಡೆಯುವ ಸಮಸ್ಯೆ ಕೂಡ ತಲೆದೋರಿದೆ.

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights