ಡಿಕೆಶಿ ಬಂಧನ‌ ಖಂಡಿಸಿ ಇಂದು ರಾಮನಗರ ಜಿಲ್ಲೆ ಬಂದ್ : ಬಿಗಿ ಪೊಲೀಸ್ ಭದ್ರತೆ

ಡಿಕೆಶಿ ಬಂಧನ‌ ಖಂಡಿಸಿ ಇಂದು ರಾಮನಗರ ಜಿಲ್ಲೆ ಬಂದ್ ಕರೆ ಹಿನ್ನೆಲೆಯಲ್ಲಿ  ಬಿಗಿ ಪೊಲೀಸ್ ಭದ್ರತೆ ನೀಡಲಾಗಿದೆ.

ಪ್ರಮುಖ ವೃತದ ಬಳಿ ಹೆಚ್ಚಿನ ಪೊಲೀಸ್ ಸಿಬ್ಬಂದಿಗಳ ಜಮಾವಣೆ ಮಾಡಲಾಗಿದೆ.  ಮುನ್ನೆಚ್ಚರಿಕೆ ಕ್ರಮವಾಗಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.

ಐಜೂರು ವೃತ್ತದ ಬಳಿ ೨ ಡಿಆರ್.ತುಕುಡಿ ಪೊಲೀಸರ ನಿಯೋಜನೆ‌ ಮಾಡಲಾಗಿದೆ. ಸ್ಥಳದಲ್ಲೇ ಅಗ್ನಿಶಾಮಕ ವಾಹನ ಬೀಡು ಬಿಟ್ಟಿದೆ. ಜೊತೆಗೆ ಮುನ್ನೆಚ್ಚರಿಕಾ ಕ್ರಮವಾಗಿ ರಾಮನಗರ ಜಿಲ್ಲಾ ವ್ಯಾಪ್ತಿಯ ಶಾಲಾ ಕಾಲೇಜಿಗೆ ರಜೆ ಘೋಷಣೆ ನೀಡಲಾಗಿದೆ.

ಮೈ-ಬೆಂ ಹೆದ್ದಾರಿಯಲ್ಲಿ ವಾಹನ ಸಂಚಾರ ಎಂದಿನಂತೆ ಇದ್ದು,  ಇಂದಿನ ರಾಮನಗರ ಬಂದ್ ಗೆ ಬೆಂಬಲ ಘೋಷಿಸಿರುವ ಜೆಡಿಎಸ್ ಮತ್ತು‌ ಕಾಂಗ್ರೆಸ್ ಪಕ್ಷ, ಬಂದ್ ಗೆ ಕರೆ ನೀಡಿದೆ. ಇದರ ಹಿನ್ನೆಲ್ಲೆಯಲ್ಲಿ ರಾಮನಗರದಲ್ಲಿ ಅಂಗಡಿ‌ ಮುಂಗ್ಗಟ್ಟುಗಳು ಮುಚ್ಚಲಾಗಿದೆ.

ಮುನ್ನೆಚ್ಚರಿಕೆ ಕ್ರಮವಾಗಿ ರಾಮನಗರದಲ್ಲಿ ksrtc ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ. ರಾಮನಗರದ ksrtc ಬಸ್ ನಿಲ್ದಾಣ ಬಿಕೊ ಎನ್ನುತ್ತಿದೆ. ಗ್ರಾಮೀಣ ಭಾಗಗಳಿಗೆ ಬಸ್ ಗಳಿಲ್ಲದೆ ಪ್ರಯಾಣಿಕರ ಪರದಾಟ ಶುರುವಾಗಿದೆ. ಸಿನಿಮಾ ಥಿಯೇಟರ್ , ಹೋಟೇಲ್ಗಳು ಈಗಾಗಲೇ ಬಾಗಿಲು ಮುಚ್ಚಿವೆ. ರಾಮನಗರ ಜಿಲ್ಲೆಯಲ್ಲಿ ವಾಣಿಜ್ಯ ವ್ಯಾಪಾರ ವಹಿವಾಟು ಸ್ಥಗಿತಗೊಂಡಿದೆ.

Leave a Reply

Your email address will not be published. Required fields are marked *