ಮನ್‌ ಕಿ ಬಾತ್‌ಗಾಗಿ ದೇಶದ ಜನರಲ್ಲಿ ಸಲಹೆ ಕೇಳಿದ ಪ್ರಧಾನಿ ಮೋದಿ!

ಪ್ರಧಾನಿ ನರೇಂದ್ರ ಮೋದಿಯವರು ಜೂನ್‌ 28ರಂದು ದೇಶದ ಜನರನ್ನು ಉದ್ದೇಶಿಸಿ ಮನ್‌ ಕಿ ಬಾತ್‌ನಲ್ಲಿ ಮಾತನಾಡಲಿದ್ದಾರೆ. ಅದಕ್ಕಾಗಿ ಜನರು ತಮ್ಮ ಸಲಹೆಗಳನ್ನು ಕಳಿಸಿಕೊಡುವಂತೆ ದೇಶದ ಪ್ರಜೆಗಳಲ್ಲಿ ಮನವಿ ಮಾಡಿದ್ದಾರೆ.

ಜನರಲ್ಲಿ ಮನವಿ ಮಾಡಿರುವ ಪ್ರಧಾನಿ ಮೋದಿ, ಮನ್ ಕಿ ಬಾತ್ ಕಾರ್ಯಕ್ರಮಕ್ಕೆ ಇನ್ನೂ ಎರಡು ವಾರಗಳು ಬಾಕಿಯಿದ್ದು, ಈಗಿನಿಂದಲೇ ನಿಮ್ಮ ಐಡಿಯಾಗಳನ್ನು ನನಗೆ ಕಳುಹಿಸಿ ಎಂದು ಟ್ವೀಟ್‌ ಮಾಡಿದ್ದಾರೆ.

ದೇಶವು ಸದ್ಯ ಕೊರೊನಾ ವೈರಸ್ ಹಾವಳಿಯನ್ನು ಎದುರಿಸುತ್ತಿದ್ದು, ತಮ್ಮ ಮುಂದಿನ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಈ ವಿಷಯದ ಕುರಿತಾಗಿಯೇ ಹೆಚ್ಚಿನ ಚರ್ಚೆ ನಡೆಯಲಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ಕೊರೊನಾ ವೈರಸ್ ವಿರುದ್ಧ ಹೋರಾಟ ಮುಂದುವರೆದಿದ್ದು, ಇದನ್ನು ಮತ್ತಷ್ಟು ಕ್ರಿಯಾಶೀಲವನ್ನಾಗಿ ಮಾಡಲು ನನಗೆ ದೇಶದ ಜನರ ಅಭಿಪ್ರಾಯದ ಅವಶ್ಯಕತೆ ಇದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

Leave a Reply

Your email address will not be published. Required fields are marked *