ಯಾರಿಗೂ ಗೊತ್ತಾಗದಂತೆ ಕಳೆದ ತಡರಾತ್ರಿ ಬಿಡದಿ ಆಶ್ರಮಕ್ಕೆ ನಿತ್ಯನ ಶಿಷ್ಯರು ಆಗಮನ…

ಕಳೆದ ತಡರಾತ್ರಿ ಬಿಡದಿ ಆಶ್ರಮಕ್ಕೆ ನಿತ್ಯನ ಶಿಷ್ಯರು ಆಗಮಿಸಿದ್ದಾರೆ ಎನ್ನುವ ಮಾಹಿತಿ ಬಲ್ಲ ಮೂಲಗಳಿಂದ ತಿಳಿದು ಬಂದಿದೆ.

ರಾಮನಗರ ಜಿಲ್ಲೆ ಬಿಡದಿಯಲ್ಲಿರುವ ನಿತ್ಯಾನಂದ ನ ಆಶ್ರಮಕ್ಕೆ ಬಾಲಕರು, ಮಹಿಳೆಯರು ಸೇರಿ 35 ಕ್ಕೂ ಹೆಚ್ಚು ಜನರು ಬಿಡದಿ ಆಶ್ರಮಕ್ಕೆ ಬಂದಿದ್ದಾರೆ. ಯಾರಿಗೂ ಗೊತ್ತಾಗದಂತೆ ನಿತ್ಯನ ಭಕ್ತರು ತಡರಾತ್ರಿ ಆಶ್ರಮಕ್ಕೆ ಬಂದಿಳಿದಿರುವುದು ಭಾರೀ ಅನುಮಾನಕ್ಕೆ ಗುರಿಮಾಡಿದೆ.

ನಿತ್ಯಾನಂದ ಆಶ್ರಮ ಮುಖ್ಯಧ್ವಾರವೇ ಬಂದ್ ಮಾಡಲಾಗಿದೆ. ಜೊತೆಗೆ ಆಶ್ರಮದ ಒಳಗೆ ಸಂಬಂಧಪಟ್ಟವರಿಗೆ ಬಿಟ್ಟು ಬೇರ್ಯಾರಿಗೂ ಒಳಪ್ರವೇಶವಿಲ್ಲ. ಆಶ್ರಮದಲ್ಲಿರುವ ರಾಜ್ಯಸಭಾ, ಚಿಕ್ಕಸಭಾ ಎಂಬ ಕೊಠಡಿಗಳಲ್ಲಿ ನಿತ್ಯನ ಭಕ್ತರು ವಾಸವಾಗಿದ್ದಾರೆ ಎನ್ನಲಾಗಿದೆ.

Leave a Reply

Your email address will not be published. Required fields are marked *