ಏಸುಪ್ರತಿಮೆ ನಿರ್ಮಾಣ ವಿವಾದ : ಇಂದು “ಕನಕಪುರ ಚಲೋ” ಹೋರಾಟ..!

ಕನಕಪುರದ ಹಾರೋಬೆಲೆಯ ಕಪಾಲಬೆಟ್ಟದಲ್ಲಿ ಏಸುಪ್ರತಿಮೆ ನಿರ್ಮಾಣ ವಿವಾದಕ್ಕೆ ಹಿಂದೂ ಜಾಗರಣ ವೇದಿಕೆಯಿಂದ ” ಕನಕಪುರ ಚಲೋ ” ಹೋರಾಟ ಕೈಗೊಳ್ಳಲಾಗಿದೆ.

ಹಿಂದೂ ಜಾಗರಣ ವೇದಿಕೆ ಹಾಗೂ ಬಿಜೆಪಿ ಪ್ರತಿಮೆ ನಿರ್ಮಾಣ ವಿರೋಧಿಸಿ ಬೀದಿಗಿಳಿದಿದ್ದಾರೆ. ಕ್ಷೇತ್ರದ ಶಾಸಕ, ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಮತ್ತು 5 ಸಾವಿರಕ್ಕೂ ಹೆಚ್ಚು ಬೆಂಬಲಿಗರು , ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಗೆ ಎಚ್ಚರಿಕೆ ಕೊಡಲು ಇಂದು ಕನಕಪುರ ಚಲೋಗೆ ಚಾಲನೆ ನೀಡಿದ್ದಾರೆ.

ಕನಕಪುರ ನಗರದ ಅಯ್ಯಪ್ಪಸ್ವಾಮಿ ದೇವಸ್ಥಾನದ ಸರ್ಕಲ್ ನಿಂದ 11 ಗಂಟೆಗೆ ಜಾಥ ಶುರುಮಾಡಲಾಗುವುದು. ಮಿನಿವಿಧಾನಸೌಧದವರೆಗೆ ಕಾಲ್ನಡಿಗೆಯಲ್ಲಿ ಹೊರಟು ತಹಶೀಲ್ದಾರ್ ಗೆ ಮನವಿ ಮಾಡಲಾಗುವುದು. ಹಿಂದೂ ಮುಖಂಡ ಕಲ್ಲಡಕ ಪ್ರಭಾಕರ್ ಭಟ್ ಹೋರಾಟದಲ್ಲಿ ಭಾಗಿಯಾಗಲಿದ್ದಾರೆ. ಮಿನಿವಿಧಾನಸೌಧದಲ್ಲಿ ಕಲ್ಲಡಕ ಪ್ರಭಾಕರ್ ರಿಂದ ಮುಖ್ಯ ಭಾಷಣ ಮಾಡಲಿದ್ದಾರೆ.

ಕನಕಪುರ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, 1 ಸಾವಿರಕ್ಕೂ ಹೆಚ್ಚು ಪೊಲೀಸರಿಂದ ಟೈಟ್ ಸೆಕ್ಯೂರಿಟಿ ಮಾಡಲಾಗಿದೆ. ಏಸು ಪ್ರತಿಮೆ ನಿರ್ಮಾಣವಾಗಬಾರದು ಎಂದು ಸ್ಪಷ್ಟ ಸಂದೇಶ ಕೊಡಲು  ರಾಮನಗರ ಜಿಲ್ಲೆ ಹಾಗೂ ಬೆಂಗಳೂರು, ಮಂಡ್ಯ, ಮೈಸೂರು, ತುಮಕೂರಿನಿಂದ ಜನರು ಆಗಮಿಸಲಿದ್ದು, ಪ್ರತಿಭಟನೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಸ್ಪಿ ಅನೂಪ್ ಎ ಶೆಟ್ಟಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಈಗಾಗಲೇ ತಿಳಿಸಲಾಗಿದೆ. ಕನಕಪುರ ಚಲೋ ಇರುವ ಹಿನ್ನೆಲೆ ಬೆಟ್ಟಕ್ಕೆ ನೋ ಎಂಟ್ರಿ ಬೋರ್ಡ್ ಹಾಕಲಾಗಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights