‘ಏ.21 ರ ಮಧ್ಯರಾತ್ರಿಯವರೆಗೆ ಲಾಕ್‌ಡೌನ್‌ ನಿರ್ಬಂಧಗಳಲ್ಲಿ ಸಡಿಲಿಕೆ ಇರುವುದಿಲ್ಲ’ -ಸಿಎಂ

ಮೊನ್ನೆಯಷ್ಟೇ ಲಾಕ್ ಡೌನ್ ಸಡಿಲಿಕೆ ವಿಚಾರವನ್ನು ಪ್ರಸ್ತಾಪ ಮಾಡಿದ್ದ ಸಿಎಂ ಸದ್ಯ  ‘ಏ.21 ರ ಮಧ್ಯರಾತ್ರಿಯವರೆಗೆ ಲಾಕ್‌ಡೌನ್‌ ನಿರ್ಬಂಧಗಳಲ್ಲಿ ಸಡಿಲಿಕೆ ಇರುವುದಿಲ್ಲ’ ಎಂದು ಮುಖ್ಯಮಂತ್ರಿ ಕಚೇರಿ ಹೇಳಿಕೆ ನೀಡಿದೆ.

ಹೌದು… ಲಾಕ್ ಡೌನ್ ನನ್ನು ಏ 20 ರಿಂದ ಸಡಿಲಗೊಳಿಸುವುದಾಗಿ ಹೇಳಿಕೆ ನೀಡಿದ್ದ ಸಿಎಂ ಯಡಿಯುರಪ್ಪು ಹೇಳಿಕೆ ಹಿಂದಕ್ಕೆ ತೆಗೆದುಕೊಂಡು ಏ21ರ ವರೆಗೆ ಲಾಕ್ ಡೌನ್ ಏ14ರಿಂದ ಹೇಗಿತ್ತೋ ಹಾಗೇ ನಡೆಯಲಿದೆ ಎಂದಿದ್ದಾರೆ.

ಭಾನುವಾರ ಈ ಬಗ್ಗೆ ರಾತ್ರಿ ಎಲ್ಲ ಇಲಾಖೆಗೆಗಳ ಮುಖ್ಯಸ್ಥರು, ಡಿಸಿಗಳಿಗೆ ಸೂಚನೆ ನೀಡಲಾಗಿದ್ದು, ರಾಜ್ಯ ಸರ್ಕಾರ ಒಂದು ದಿನದ ಮಟ್ಟಿಗೆ ಲಾಕ್‌ಡೌನ್‌ ವಿಸ್ತರಿಸಿದೆ.

ಈ ಮಧ್ಯೆ, ಆರ್ಥಿಕ ಚಟುವಟಿಕೆಗಳಿಗೆ ಚಾಲನೆ ನೀಡಲು ಏ.21 ರ ಮಧ್ಯರಾತ್ರಿಯಿಂದ ಕೋವಿಡ್‌-19 ಲಾಕ್‌ಡೌನ್ ನಿರ್ಬಂಧಗಳನ್ನು ಸಡಿಲಿಸಲು ಸೋಮವಾರ ಸಚಿವ ಸಂಪುಟ ಸಭೆ ನಡೆಯಲಿದೆ. ಅಲ್ಲಿ ಮಹತ್ವದ ನಿರ್ಣಯ ತೆಗೆದುಕೊಳ್ಳುವ ಸಾಧ್ಯತೆ ಇದೆ.

ಕೋವಿಡ್‌-19 ಹಾಟ್‌ಸ್ಪಾಟ್‌/ ಕ್ಲಸ್ಟರ್‌/ ಕಂಟೇನ್ಮೆಂಟ್‌ ಝೋನ್‌ ವ್ಯಾಪ್ತಿಗೆ ಒಳಪಡದ ಪ್ರದೇಶಗಳು ಮತ್ತು ಕೊರೊನಾ ಬಾಧಿತವಲ್ಲದ ಜಿಲ್ಲೆಗಳಲ್ಲಿ ಏ.21 ರ ಬಳಿಕ ಲಾಕ್‌ಡೌನ್‌ನ ಕೆಲವು ನಿರ್ಬಂಧಗಳನ್ನು ಸಡಿಲಿಸಲು ಕೇಂದ್ರ ಸರ್ಕಾರ ಮಾರ್ಗಸೂಚಿ ಹೊರಡಿಸಿದೆ. ಈ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಮೂಲಗಳು ಹೇಳಿವೆ.

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights