ಕೊನೆ ಆಸೆಯಂತೆ ದುಬಾರಿ ಬೆಲೆ ಕಾರಿನಲ್ಲಿ ಸಮಾಧಿಯಾದ ರಾಜಕಾರಣಿ!

ಇತ್ತೀಚಿಗೆ ಮೃತಪಟ್ಟ ರಾಜಕಾರಣಿಯೊಬ್ಬರ ಅಂತ್ಯಕ್ರಿಯೆಯನ್ನು ಬಹಳ ವಿಭಿನ್ನವಾಗಿ ಮಾಡಲಾದ ಘಟನೆ ದಕ್ಷಿಣ ಆಫ್ರಿಕಾದಲ್ಲಿ ನಡೆದಿದೆ. ದಕ್ಷಿಣ ಆಫ್ರಿಕಾದ ಜನಪ್ರಿಯ ರಾಜಕಾರಣಿ ತ್ಸೆಕೆಡೆ ಬಫ್ಟನ್ ಪಿಟ್ಸೊ ಅವರ ಅಂತ್ಯಕ್ರಿಯೆಯನ್ನು ದುಬಾರಿ ಬೆಲೆಯ ಬೆಂಝ್ ಕಾರಿನಲ್ಲಿ ಮಾಡಲಾಗಿದೆ.

ಹೌದು… ವೃದ್ಧಾಪ್ಯದಿಂದಾಗಿ ಅವರು ಇತ್ತೀಚಿಗೆ ನಿಧನರಾದರು. ಅವರ ಅಂತ್ಯಕ್ರಿಯೆಯ ವೀಡಿಯೋ ಈಗ ಇಂಟರ್‌ನೆಟ್‌ನಲ್ಲಿ ವೈರಲ್ ಆಗುತ್ತಿದೆ. ದುಬಾರಿ ಬೆಲೆಯ ಬೆಂಝ್ ಕಾರಿನೊಂದಿಗೆ ಅವರ ಮೃತ ದೇಹವನ್ನು ಸಮಾಧಿ ಮಾಡಲಾಗಿದೆ.

ಹೀಗೊಂದು ಕೊನೆಯ ಆಸೆಯನ್ನು ತ್ಸೆಕೆಡೆ ಬಫ್ಟನ್ ಪಿಟ್ಸೊ ಅವರು ಹೊಂದಿದ್ದರು. ಇವರ ಈ ಆಸೆಯನ್ನು ಅವರ ಸಹಾಯಕರು ಹಾಗೂ ಕುಟುಂಬದವರ ಬಳಿ ತಿಳಿಸಿದ್ದರು. ಅವರ ಕೊನೆಯ ಆಸೆಯಂತೆ ಈ ತಿಂಗಳ ಆರಂಭದಲ್ಲಿ ನಡೆದ ಅಂತ್ಯಕ್ರಿಯೆಯಲ್ಲಿ ಅವರ ನೆಚ್ಚಿನ ಕಾರಿನೊಂದಿಗೆ ಸಮಾಧಿ ಮಾಡಲಾಯಿತು.ದಕ್ಷಿಣ ಆಫ್ರಿಕಾ ಆರ್ಥಿಕ ಕುಸಿತವನ್ನು ಎದುರಿಸುತ್ತಿದ್ದ ಕಾರಣ ಅವರು ತಮ್ಮ ಬಳಿಯಿದ್ದ ಎಲ್ಲಾ ದುಬಾರಿ ಬೆಲೆಯ ಕಾರುಗಳನ್ನು ಮಾರಾಟ ಮಾಡಿದ್ದರು ಎಂದು ಹೇಳಲಾಗಿದೆ.ಕೊನೆಗೆ ಅವರ ಬಳಿ ಮರ್ಸಿಡಿಸ್ ಬೆಂಜ್ ಇ -500 ಕಾರು ಮಾತ್ರ ಉಳಿದಿತ್ತು. ಈ ದುಬಾರಿ ಕಾರಿನಲ್ಲಿ ತ್ಸೆಕೆಡೆ ಬಫ್ಟನ್ ಪಿಟ್ಸೊ ಅವರ ದೇಹವನ್ನಿಟ್ಟು ಅಂತ್ಯಕ್ರಿಯೆ ನಡೆಸಲಾಯಿತು. ಸಾಮಾನ್ಯವಾಗಿ ಯಾರಾದರೂ ಗಣ್ಯ ವ್ಯಕ್ತಿಗಳು ಮೃತರಾದರೆ ಮರದ ಬಾಕ್ಸ್‌ನಲ್ಲಿಟ್ಟು ಅಂತ್ಯಕ್ರಿಯೆ ನಡೆಸಲಾಗುತ್ತದೆ.ತ್ಸೆಕೆಡೆ ಬಫ್ಟನ್ ಪಿಟ್ಸೊ ಅವರು ಈ ಕಾರ್ ಅನ್ನು 1990ರಲ್ಲಿ ಖರೀದಿಸಿದ್ದರು. ಅದೂ ಸಹ ಸೆಕೆಂಡ್ ಹ್ಯಾಂಡ್‌ ಕಾರ್ ಆಗಿತ್ತು ಎಂಬುದು ವಿಶೇಷ. ಮನುಷ್ಯನಿಗೆ ಎಂಥೆಂತ ಆಸೆಗಳಿರುತ್ತವೆ ಅನ್ನೋದಕ್ಕೆ ಈ ರಾಜಕಾರಣಿ ಒಂದು ನಿದರ್ಶನ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights