ಕೊರೊನಾ ಮಹಾಮಾರಿಗೆ ಏಮ್ಸ್ ಆಸ್ಪತ್ರೆಯ ಹಿರಿಯ ವೈದ್ಯ ಬಲಿ…!

ಕೊರೊನಾ ವೈರಸ್ ಯುದ್ಧದಲ್ಲಿ ಮುಂಚುಣಿಯಲ್ಲಿರುವ ವೈದ್ಯರ ಸಾಧನೆ ನಿಜಕ್ಕು ಮೆಚ್ಚಬೇಕಾಗಿದ್ದೇ. ಆದರೆ ನೋವಿನ ಸಂಂಗತಿ ಎಂದರೆ ನಾನಾ ಕೊರೊನಾ ಪೀಡಿತರಿಗೆ ಚಿಕಿತ್ಸೆ ನೀಡಿದ್ದ ವೈದ್ಯರೊಬ್ಬರು ಕೊರೊನಾ ಸೋಂಕಿನಿಂದ ಅಗಲಿದ್ದು ವಿಷಾದ ತಂದಿದೆ.

ಹೌದು… ಆಲ್ ಇಂಡಿಯಾ ಇನ್ಸಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ಏಮ್ಸ್) ಆಸ್ಪತ್ರೆಯ 78ವರ್ಷದ ನಿವೃತ್ತ ಹಿರಿಯ ವೈದ್ಯ ಜಿತೇಂದ್ರ ನಾಥ್ ಪಾಂಡೆ ಕೊರೊನಾ ವೈರಸ್ ನಿಂದಾಗಿ ಸಾವನ್ನಪ್ಪಿದ್ದಾರೆ.

ಮಂಗಳವಾರ ಇವರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ಕೊರೊನಾ ಧೃಡಪಟ್ಟ ಬಳಿಕ ಐಸೋಲೇಶನ್ ನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವನ್ನಪ್ಪಿದ್ದಾರೆ. ಸೋಂಕಿನಿಂದ ಚೇತರಿಸಿಕೊಂಡ ಅವರು ಶನಿವಾರ ಹೃದಯ ಸ್ತಂಭನದಿಂದ ಸಾವನ್ನಪ್ಪಿದ್ದಾರೆಂದು ಏಮ್ಸ್ ಡೈರೆಕ್ಟರ್ ಡಾ.ರಣ್ ದೀಪ್ ಗುಲೇರಿಯಾ ಪಿಟಿಐಗೆ ತಿಳಿಸಿದ್ದಾರೆ.

ಡಾ.ಪಾಂಡೆ ಅವರು ಪ್ರೀಮಿಯರ್ ಆಸ್ಪತ್ರೆಯ ಪಲ್ಮೋನೋಲಜಿ ವಿಭಾಗದ ಡೈರೆಕ್ಟರ್ ಆಗಿದ್ದು, ಕಳೆದ ಒಂದು ವಾರಗಳ ಕಾಲ ಕೋವಿಡ್ 19 ವೈರಸ್ ಪೀಡಿತ ರೋಗಿಗಳಿಗೆ ಚಿಕಿತ್ಸೆ ನೀಡಿದ್ದರು.

 

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights