ಕೊರೊನಾ ಹರಡುವ ಭಯದಲ್ಲಿ ನೋಟನ್ನು ಸೋಪು ನೀರಿನಲ್ಲಿ ತೊಳೆದ ರೈತ..!

ಎಂಥಾ ಕಾಲ ಬಂತು ನೋಡಿ. ರೈತನೊಬ್ಬ ಕೊರೊನಾ ಸೋಂಕು ತಗಲುವ ಭಯದಲ್ಲಿ ನೋಟುಗಳನ್ನು ಸೋಪಿನ ನೀರಿನಲ್ಲಿ ಹಾಕಿ ತೊಳೆದ ಘಟನೆ ಮಂಡ್ಯ ತಾಲೂಕಿನ ಮಾರಚಾಕನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಹೌದು… ಮಂಡ್ಯದಲ್ಲಿ ಇದುವರೆಗೂ ಕೊರೊನಾ ಸೋಂಕಿತರು ಕಾಣಿಸಿಕೊಂಡಿರಲಿಲ್ಲ. ಆದರೆ ದೆಹಲಿಯ ನಿಜಾಮುದ್ದೀನ್ ಗೆ ಹೋಗಿ ಮಂಡ್ಯಕ್ಕೆ ಬಂದಿದ್ದ 7 ಜನರ ಪೈಕಿ ಮೂವರಲ್ಲಿ ಸೋಂಕು ಕಾಣಿಸಿಕೊಂಡಿದೆ. ಹೀಗಾಗಿ ನಿರಾಳವಾಗಿದ್ದ ಮಂಡ್ಯದ ಮಂದಿ ನಿದ್ದೆಗೆಟ್ಟಿದ್ದಾರೆ. ಮಂಡ್ಯದ ರೈತ ಬೆಳೆದ ರೇಷ್ಮೆಯನ್ನು ಮುಸ್ಲೀಂ ವ್ಯಕ್ತಿಯೊಬ್ಬ ಖರೀದಿ ಮಾಡಿ ಕೊಟ್ಟ ಹಣವನ್ನು ರೈತ ಸೋಪು ನೀರಿನಲ್ಲಿ ತೊಳೆದಿದ್ದಾನೆ.

ಇದರಲ್ಲಿ 2000, 500,100 ರ ನೋಟುಗಳಿದ್ದು ಎಲ್ಲವನ್ನೂ ರೈತ ತೊಳೆಯುತ್ತಿರುವ ದೃಶ್ಯವನ್ನು ಸೆರೆ ಹಿಡಿಯಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಹರಿದಾಡುತ್ತಿವೆ. ಅಷ್ಟಕ್ಕೂ ಮಂಡ್ಯದ ರೈತ ಮಾಡಿದ ಕೆಲಸವನ್ನ ಮೆಚ್ಚಿಕೊಳ್ಳಬೇಕು. ಯಾಕೆ ಗೊತ್ತಾ ಲಾಕ್ ಡೌನ್ ನಡುವೆಯೂ ಮನೆ ಬಿಟ್ಟು ಹೊರಬರುವ ಮಂದಿಗೆ ಈ ರೈತ ನಿಜವಾಗಲೂ ಮಾದರಿ. ಕೊರೊನಾ ಬಗ್ಗೆ ಈ ರೈತನಿಗಿರುವುದರಲ್ಲಿ ಕಾಲು ಭಾಗ ಭಯ ಸಿಟಿ ಪುಡಾರಿಗಳಿಗಿದ್ದಿದ್ದರೆ ರಾಜ್ಯದಲ್ಲಿ ಸೋಂಕು ಹರಡುತ್ತಿರಲಿಲ್ಲವೆನೋ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights