ಚಂದನವನದ ಅಪ್ಪಾಜಿ : ಇಂದು ಕನ್ನಡ ಕಣ್ಮಣಿ ಡಾ.ರಾಜಕುಮಾರ್ 14ನೇ ಪುಣ್ಯ ಸ್ಮರಣೆ

ಇಂದು ಚಂದನವನದ ಅಪ್ಪಾಜಿ, ನಟಸಾರ್ವಭೌಮ ಡಾ.ರಾಜ್‍ಕುಮಾರ್ ಅವರ ಪುಣ್ಯಸ್ಮರಣೆ. ಇಂದಿಗೆ ಡಾ. ರಾಜ್‍ಕುಮಾರ್ ನಮ್ಮನ್ನು ಅಗಲಿ 14 ವರ್ಷಗಳು ಆಯ್ತು. ಪ್ರತಿವರ್ಷ ರಾಜ್‍ಕುಮಾರ್ ಅವರ ಅಭಿಮಾನಿಗಳು ಅನ್ನಸಂತರ್ಪಣೆ, ಬಟ್ಟೆ ದಾನ, ರಕ್ತದಾನ ಸೇರಿದಂತೆ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದರು. ಲಾಕ್‍ಡೌನ್ ಹಿನ್ನೆಲೆಯಲ್ಲಿ ಇಂದು ರಾಜ್ ಕುಟುಂಬಸ್ಥರು ಸಮಾಧಿ ಕಂಠೀರವ ಸ್ಟುಡಿಯೋದಲ್ಲಿರೋ ಸ್ಮಾರಕ ಸ್ಥಳಕ್ಕೆ ಆಗಮಿಸಿ ಪೂಜೆ ಸಲ್ಲಿಸಿದರು. ಬೆಳಗ್ಗೆಯೇ ಶಿವರಾಜ್ ಕುಮಾರ್ ಸ್ಮಾರಕ ಸ್ಥಳಕ್ಕೆ ಆಗಮಸಿ, ಅಪ್ಪಾಜಿಗಿ ನಮಿಸಿ, ಪೂಜೆ ಸಲ್ಲಿಸಿ ತೆರಳಿದ್ದರು‌. ಹಾಗೆ 11 ಗಂಟೆ ಸಮಯಕ್ಕೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಸೇರಿದಂತೆ ಇಡೀ ಕುಟುಂಬ ವರ್ಗದವರು ಬಂದು ಪೂಜೆ ಸಲ್ಲಿಸಿದರು.

ಅಭಿಮಾನಿಗಳೂ ಕೂಡ ಸ್ಮಾರಕ ಸ್ಥಳಕ್ಕೆ ಸಾವಿರಾರು ಅಭಿಮಾನಿಗಳು ದಾಂಗುಡಿ ಇಡುತ್ತಿದ್ದರು. ಆರಾಧ್ಯದೈವ ನಿಗೆ ನಮಿಸಿ, ಧನ್ಯರಾಗುತ್ತಿದ್ದರು. ಆದರೆ ಈ ಬಾರಿ ರಾಜ್ ಪುಣ್ಯ ಸ್ಮರಣೆಗೂ ಕೊರೋನಾ ಎಫೆಕ್ಟ್ ಆಗಿದೆ‌. ಹೀಗಾಗಿ ರಾಜ್ ಸ್ಮಾರಕ ಸ್ಥಳ ಬಿಕೋ ಎನ್ನುತ್ತಿತ್ತು. ದೇಶಕ್ಕೆ ದೇಶವೇ ಲಾಕ್ ಡೌನ್ ಆಗಿದೆ. ಎಲ್ಲೂ ಜನ ಸೇರುವ ಹಾಗಿಲ್ಲ. ಹಾಗೆ ತುಂಬಾ ಅಗತ್ಯ ಇರುವವರಷ್ಟೇ ರಸ್ತೆಲಿ ಓಡಾಡಬಹುದಾಗಿದೆ‌. ಹೀಗಾಗಿ ಅಭಿಮಾನಿಗಳು ರಾಜ್ ಸ್ಮಾರಕದತ್ತ ಸುಳಿಯಲಿಲ್ಲ. ಈ ವರ್ಷ ಬಹಳ ಸರಳವಾಗಿ ಕುಟುಂಬದವರು ಪುಣ್ಯ ಸ್ಮರಣೆಯನ್ನ ಆಚರಿಸಿದರು.

ಇಷ್ಟು ವರ್ಷಗಳ ಕಾಲ ಅಭಿಮಾನಿಗಳು ಸಾವಿರಾರು ಸಂಖ್ಯೆಯಲ್ಲಿ ಆಗಮಿಸುತ್ತಿದ್ದರು‌. ಜೊತೆಗೆ ರಾಜ್ ಅಭಿಮಾನಿ ಸಂಘಗಳು ಸಾಮಾಜಿಕ ಕಾರ್ಯಕ್ರಮಗಳನ್ನ ಸಹ ಹಮ್ಮಿಕೊಳ್ಳುತ್ತಿದ್ದವು. ರಕ್ತದಾನ, ಆರೋಗ್ಯ ತಪಾಸಣೆ ಮಾಡಿಸೋದಲ್ಲದೆ, ಸ್ಮಾರಕಕ್ಕೆ ಭೇಟಿ ನೀಡೋ ಎಲ್ಲಾ ಅಭಿಮಾನಿಗಳಿಗೆ ಬೆಳಗ್ಗೆ ತಿಂಡಿ, ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಈ ಎಲ್ಲದಕ್ಕೂ ಕೊರೊನಾ ಮಹಾಮಾರಿ ಕಡಿವಾಣ ಹಾಕಿದೆ.

ಈ ವೇಳೆ ಮಾತನಾಡಿದ ಪವರ್ ಸ್ಟಾರ್ ಪುನೀತ್ ರಾಜುಕುಮಾರ್, ಕೊರೊನಾ ವೈರಸ್ ಮಹಾಮಾರಿ ತಡೆಗೆ ಸಾಮಾಜಿಕ ಅಂತರವೇ ಮದ್ದು. ಯಾರು ಹೆಚ್ಚಾಗಿ ಸೇರಬೇಡಿ. ಜನರು ಸಹಕಾರ ಕೊಟ್ರೆ ಅದಷ್ಟು ಬೇಗ ಕೊರೊನಾ ಮಹಾಮಾರಿಯಿಂದ ಮುಕ್ತಿ ಪಡೆಯಬಹುದು. ಸಿನಿಮಾ ಇಂಡಸ್ಟ್ರಿಯಿಂದ ಯಾರು ಕೂಡ ಇಲ್ಲಿಯ ತನಕ ಕಷ್ಟ ಅಂತ ಸಂಪರ್ಕ ಮಾಡಿಲ್ಲ. ಲಾಕ್‍ಡೌನ್ ತಿಳಿಗೊಂಡ ನಂತರ ಸಿನಿಮಾ ಯೂನಿಟ್ ಅವರನ್ನ ಸಂಪರ್ಕ ಮಾಡಿ ಸಹಾಯ ಮಾಡುತ್ತೇವೆ ಎಂದು ಹೇಳಿದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights