ಚಲಿಸುತ್ತಿದ್ದ ಬಸ್‌ನಲ್ಲಿ ಮಹಿಳೆಯ ಮೇಲೆ ಅತ್ಯಾಚಾರ

ಚಲಿಸುತ್ತಿದ್ದ ಬಸ್‌ನಲ್ಲಿ 25 ವರ್ಷದ ಮಹಿಳೆಯ ಮೇಲೆ ಬಸ್‌ನ ಇಬ್ಬರು ಚಾಲಕರು ಅತ್ಯಾಚಾರ ಎಸಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಉತ್ತರ ಪ್ರದೇಶದ ಪ್ರತಾಪಗಡ್‌ ದಿಂದ ನೋಯ್ಡಾಕ್ಕೆ ಮಹಿಳೆಯೊಬ್ಬರು ತನ್ನ ಇಬ್ಬರು ಮಕ್ಕಳೊಂದಿಗೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಪ್ರಕರಣ ನಡೆದಿದೆ.

ಆರೋಪಿ ಪರಾರಿಯಾಗಿದ್ದಾನೆ. ಮಹಿಳೆಯನ್ನು ಬೆದರಿಸಿದ ಆರೋಪದ ಮೇಲೆ ಇತರ ಚಾಲಕನನ್ನು ಬಂಧಿಸಲಾಗಿದೆ. ಈ ಘಟನೆಯು ಲಕ್ನೋ ಮತ್ತು ಮಥುರಾ ನಡುವೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ನಡೆದಾಗ ಮಹಿಳೆ ತನ್ನ ಇಬ್ಬರು ಮಕ್ಕಳೊಂದಿಗೆ, ಸುಮಾರು 10 ಜನ ಸಹ ಪ್ರಯಾಣಿಕರಿದ್ದ ಖಾಸಗಿ ಬಸ್‌ನಲ್ಲಿ ದೂರದ ಪ್ರಯಾಣ ಹೊರಟಿದ್ದರು. ಬಸ್‌ ರಾತ್ರಿವೇಳೆಯಲ್ಲಿ ಸಂಚರಿಸುತ್ತಿದ್ದರಿಂದ ಸಹ ಪ್ರಯಾಣಿಕರು ನಿದ್ರಿಸುತ್ತಿದ್ದ ಸಂದರ್ಭದಲ್ಲಿ ಈ ಪ್ರಕರಣ ನಡೆಸಿದೆ.

ನೋಯ್ಡಾ ತಲುಪಿದ ನಂತರ ಮಹಿಳೆ ಪೊಲೀಸರಿಗೆ ದೂರು ನೀಡಿದ್ದು, ಭಾರತೀಯ ದಂಡ ಸಂಹಿತೆ ಸೆಕ್ಷನ್ 376 ಮತ್ತು 506 ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

“ಸಂತ್ರಸ್ತ ಮಹಿಳೆ ಪೊಲೀಸರಿಗೆ ನೀಡಿರುವ ಮಾಹಿತಿ ಪ್ರಕಾರ, ಆಕೆ ಪ್ರತಾಪಗಡದಿಂದ ನೋಯ್ಡಾಕ್ಕೆ ಎಸಿ ಸ್ಲೀಪರ್ ಬಸ್‌ನಲ್ಲಿ ಬರುತ್ತಿದ್ದರು. ಲಕ್ನೋ ಮತ್ತು ಮಥುರಾ ನಡುವೆ ಬಸ್ ಚಲಿಸುತ್ತಿದ್ದಾಗ ರಾತ್ರಿ ಈ ಘಟನೆ ನಡೆದಿದೆ”ಎಂದು ಡಿಎಸ್‌ಪಿ (ಮಹಿಳಾ ಸುರಕ್ಷತೆ) ವೃಂದಾ ಶುಕ್ಲಾ ಹೇಳಿದ್ದಾರೆ.

“ಮಹಿಳೆ ಇಲ್ಲಿಗೆ (ನೊಯ್ಡಾ) ತಲುಪಿದ ನಂತರ ದೂರು ನೀಡಿದ್ದು, ತಕ್ಷಣ ಎಫ್ಐಆರ್ ದಾಖಲಿಸಲಾಗಿದೆ” ಎಂದು ಶುಕ್ಲಾ ಹೇಳಿದರು.

ಇಬ್ಬರು ಚಾಲಕರಲ್ಲಿ ಒಬ್ಬನನ್ನು ಬಂಧಿಸಲಾಗಿದೆ ಮತ್ತು ಬಸ್ ಅನ್ನು ಸೀಜ್‌ ಮಾಡಲಾಗಿದೆ ಎಂದು ಅವರು ಹೇಳಿದರು. ಇತರ ಚಾಲಕ ಮತ್ತು ಬಸ್ ಮಾಲೀಕರನ್ನು ಶೀಘ್ರವಾಗಿ ಬಂಧಿಸಲು  ಪೊಲೀಸ್ ತಂಡಗಳನ್ನು ರಚಿಸಲಾಗಿದೆ ಎಂದು ಅವರು ಹೇಳಿದರು.

ಪ್ರಕರಣದ ಬಗ್ಗೆ ಹೆಚ್ಚಿನ ವಿಚಾರಣೆ ನಡೆಯುತ್ತಿದೆ ಮತ್ತು ದೂರುದಾರರನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಡಿಸಿಪಿ ತಿಳಿಸಿದ್ದಾರೆ.

“ಎಲ್ಲಾ ಸಹ-ಪ್ರಯಾಣಿಕರನ್ನು ಪತ್ತೆಹಚ್ಚಲಾಗುತ್ತಿದೆ ಮತ್ತು ಅವರ ಹೇಳಿಕೆಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಇದರಿಂದಾಗಿ ಪ್ರಕರಣದ ಚಾರ್ಜ್ ಶೀಟ್ ಅನ್ನು ಶೀಘ್ರದಲ್ಲೇ ಸಲ್ಲಿಸಬಹುದು” ಎಂದು ಅವರು ಹೇಳಿದರು.

ತನಿಖಾಧಿಕಾರಿಗಳ ಪ್ರಕಾರ, ಮಹಿಳೆಗೆ ಬಸ್‌ನಲ್ಲಿ ಕೊನೆಯ ಆಸನವನ್ನು ನೀಡಲಾಗಿದ್ದು, ಅಲ್ಲಿ ಆರೋಪಿಗಳು ಆಕೆಯ ಮೇಲೆ ಬಲವಂತಾಗಿ ಒತ್ತಾಯಿಸಿ ಕೃತ್ಯ ಎಸಗಿದ್ದಾರೆ. ಬಂಧಿತ ಚಾಲಕ ಮಹಿಳೆಗೆ ವಿರೋಧ ವ್ಯಕ್ತ ಪಡಿಸಿದರೆ ಭೀಕರ ಪರಿಣಾಮವನ್ನು ಎದುರಿಬೇಕಾಗುತ್ತೆದೆ ಎಂದು  ಬೆದರಿಕೆ ಒಡ್ಡಿದ್ದ ಎಂದು ಅಧಿಕಾರಗಳು ತಿಳಿಸಿದ್ದಾರೆ.

ಬೆಳಗ್ಗೆ ನೋಯ್ಡಾಗೆ ಬಂದಿಳಿದ ಮಹಿಳೆ, ತನ್ನನ್ನು ಕರೆದುಕೊಂಡು ಹೋಗಲು ಬಂದಿದ್ದ ತನ್ನ ಗಂಡನಿಗೆ ಬಸ್‌ನಲ್ಲಿ ಆಕೆ ಎದುರಿಸಿದ ಕೃತ್ಯವನ್ನು ಹೇಳಿಕೊಂಡಿದ್ದು, ನಂತರ ಪೊಲೀಸರಿಗೆ ದೂರು ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಸ್ ನೋಂದಣಿ ಕೋಡ್ ಯುಪಿ 17 (ಬಾಗಪತ್ ಜಿಲ್ಲೆ) ಯದ್ದಾಗಿದೆ. ಆದರೆ ಇದು ನೋಯ್ಡಾ ಮೂಲದ ಆಪರೇಟರ್ ಒಡೆತನದಲ್ಲಿದೆ ಎಂದು ಅವರು ಹೇಳಿದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights