ಚಾರ್ಮಾಡಿಯಲ್ಲಿ ಅತ್ತಿಹಣ್ಣಿನ ಸುಗ್ಗಿ : ಅತ್ತಿಹಣ್ಣುಗಳನ್ನ ಚಪ್ಪರಿಸುತ್ತಾ ವಾನರು ಫುಲ್ ಹ್ಯಾಪಿ

ವಾನರ ಸೇನೆಗೆ ಆ ದಿನಗಳು ನಿಜವಾಗ್ಲೂ ಭಯಾನಕವಾಗಿದ್ವು.. ಮಹಾಮಳೆಯಿಂದ ಆ ಪ್ರದೇಶದಲ್ಲಿದ್ದ ಹಣ್ಣು ಹಂಪಲುಗಳೆಲ್ಲಾ ಕೊಚ್ಚಿಕೊಂಡು ಹೋಗಿದ್ವು.. ಕೊನೆಪಕ್ಷ ಚಾರ್ಮಾಡಿ ಘಾಟ್ನಲ್ಲಿ ಸಂಚರಿಸೋ ಪ್ರಯಾಣಿಕರಾದ್ರೂ ಏನಾದ್ರೂ ಕೊಡ್ತಾರ ಅನ್ನೋ ದೂರದ ಆಸೆ ಕೂಡ ಕೈಗೂಡಲಿಲ್ಲ. ರಣಭೀಕರ ಮಳೆಗೆ ಚಾರ್ಮಾಡಿ ಘಾಟ್ಗೇ ಘಾಟೇ ಅಲ್ಲೋಲ ಕಲ್ಲೋಲವಾಗಿತ್ತು.. ಆದ್ರೆ ಇದೀಗ ಆ ಪ್ರದೇಶ ಮತ್ತೆ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದು, ಮಂಗಗಳ ಹಸಿಯೂ ಮಾಯವಾಗಿದೆ.. ಹೇಗಂತೀರಾ..? ಇಲ್ಲಿದೆ ನೋಡಿ..!

    

ಎಲ್ಲಿ ನೋಡಿದರಲ್ಲಿ ಹಚ್ಚ ಹಸಿರಿನ ಸಿರಿ.. ಆ ಸಿರಿಯ ಮಧ್ಯೆದಲ್ಲಿ ಕಣ್ಣಿಗೆ ಕಾಣ್ತಿರೋ ಹಣ್ಣಿನ ಮರಗಳು.. ಆ ಹಣ್ಣುಗಳನ್ನ ಬಾಯಿ ಚಪ್ಪರಿಸಿಕೊಂಡು ತಿಂತಿರೋ ಮಂಗಗಳು.. ಮಂಗಗಳ್ಯಾಕೆ ನಾವು ಕೂಡ ತಿನ್ನಬಹುದು ಅಂತಾ ಟೇಸ್ಟ್ ಮಾಡ್ತಿರೊ ಪ್ರವಾಸಿಗರು.. ಅಂದಾಗೆ ಇವ್ರೆಲ್ಲಾ ತಿಂದು ಆಸ್ವಾಧಿಸುತ್ತಿರೋದು ಅತ್ತಿಹಣ್ಣು.. ಸದ್ಯ ಚಿಕ್ಕಮಗಳೂರಿನ ಚಾರ್ಮಾಡಿ ಘಾಟ್ನ ಸುಂದರ ಪರಿಸರದಲ್ಲಿ ಅತ್ತಿಹಣ್ಣಿನ ಸುಗ್ಗಿಯೇ ಸುಗ್ಗಿ.. ರಸ್ತೆಯ ಎರಡು ಬದಿ ಸೇರಿದಂತೆ ಚಾರ್ಮಾಡಿ ಘಾಟ್ನ ಎಲ್ಲೆಡೆ ಅತ್ತಿಹಣ್ಣಿನ ಪರಿಮಳ ಕೇವಲ ಮಂಗಗಳನ್ನ ಮಾತ್ರವಲ್ಲದೇ ಮಾನವರನ್ನ ತನ್ನತ್ತ ಸೆಳೆಯುತ್ತಿದೆ.

ಆಹಾರವಿಲ್ಲದೇ ಕಂಗೆಟ್ಟಿದ್ದ ವಾನರ ಸೇನೆ ಇದೀಗ ಅತ್ತಿಹಣ್ಣುಗಳನ್ನ ಚಪ್ಪರಿಸುತ್ತಾ ಫುಲ್ ಹ್ಯಾಪಿಯಾಗಿವೆ.. ಯಾಕೆಂದ್ರೆ ಕಳೆದ ಆಗಸ್ಟ್ನಲ್ಲಿ ಚಾರ್ಮಾಡಿ ಘಾಟ್ನಲ್ಲಿ ಸುರಿದ ಮಹಾಮಳೆಗೆ ಇಡೀ ಚಾರ್ಮಾಡಿ ಘಾಟೇ ಅಲ್ಲೋಲ ಕಲ್ಲೋಲವಾಗಿತ್ತು.. ಹೀಗಾಗಿ ಪ್ರಕೃತಿಯ ಮಡಿಲಲ್ಲಿ ದೊರೆಯುತ್ತಿದ್ದ ಯಾವುದೇ ಆಹಾರಗಳು ವಾನರ ಸೇನೆಗೆ ದೊರೆತಿರಲಿಲ್ಲ. ಇನ್ನೂ ಚಾರ್ಮಾಡಿ ಘಾಟ್ನಲ್ಲಿ ಎಲ್ಲೆಂದರಲ್ಲಿ ಗುಡ್ಡಗಳು ಕುಸಿದಿದ್ದರಿಂದ ಈ ಮಾರ್ಗದಲ್ಲಿ ವಾಹನಗಳ ಸಂಚಾರಕ್ಕೂ ಬ್ರೇಕ್ ಬಿದ್ದಿತ್ತು. ಹೀಗಾಗಿ ಪ್ರಯಾಣಿಕರು ನೀಡ್ತಿದ್ದ ತಿಂಡಿ ತಿನಿಸು ಸೇರಿದಂತೆ ಹಣ್ಣು ಹಂಪಲುಗಳಿಂದಲೂ ಕೂಡ ವಾನರಸೇನೆ ವಂಚಿತವಾದ್ವು. ಈ ವಿದ್ಯಮಾನಗಳಿಂದ ಚಾರ್ಮಾಡಿ ಘಾಟ್ನ ಅವಿಭಾಜ್ಯ ಅಂಗವೇ ಆಗಿ ಹೋಗಿದ್ದ ಕೋತಿಗಳಿಗೆ ಯಾವುದೇ ಆಹಾರ ಸಿಗದೇ ಒದ್ದಾಡೋ ಪರಿಸ್ಥಿತಿ ನಿರ್ಮಾಣವಾಗಿತ್ತು.. ಸದ್ಯ ಚಾರ್ಮಾಡಿ ಘಾಟ್ನಲ್ಲಿ ಅತ್ತಿಹಣ್ಣಿನ ಸುಗ್ಗಿ ಎಲ್ಲೆಂದರಲ್ಲಿ ಕಂಡುಬರುತ್ತಿದ್ದರಿಂದ ಮಂಗಗಳ ಆಹಾರಕ್ಕೆ ಯಾವುದೇ ಸಮಸ್ಯೆ ಇಲ್ಲದಂತಾಗಿದೆ..

ಈ ಹತ್ತಿಹಣ್ಣುಗಳು ನೋಡಲು ಚಿಕ್ಕ ಚಿಕ್ಕ ಆ್ಯಪಲ್ ನೋಡಿದ್ದಂಗೆ ಭಾಸವಾಗುತ್ತೆ. ಆದ್ರೆ ರುಚಿಯಲ್ಲಿ ಅಂಜೂರ ಹಣ್ಣಿನಷ್ಟೇ ಟೇಸ್ಟಿಯಾಗಿದ್ದು ಚಳಿಗಾಲದಲ್ಲಿ ಈ ಹಣ್ಣುಗಳು ಮಲೆನಾಡಿನಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಟೇಸ್ಟಿಯಾಗಿರೋ ಈ ಹಣ್ಣನ್ನ ಕೇವಲ ಮಂಗಗಳು ಮಾತ್ರವಲ್ಲದೇ ಈ ಪ್ರದೇಶದಲ್ಲಿ ಓಡಾಡೋ ಪ್ರವಾಸಿಗರು ಕೂಡ ಟೇಸ್ಟ್ ಮಾಡೋದು ಸಾಮಾನ್ಯವಾಗಿದೆ.. ಸದ್ಯ ಮಂಗಗಳು ಖುಷಿ .

ಆದ್ರೆ ಮಹಾಮಳೆಯ ಸಮಯದಲ್ಲಿ ಈ ವಾನರಸೇನೆ ಪಟ್ಟಿದ್ದ ಕಷ್ಟ ಅಷ್ಟಿಷ್ಟಲ್ಲ.. ಆ ಪ್ರಮಾಣದಲ್ಲಿ ಚಾರ್ಮಾಡಿ ಪರಿಸರದಲ್ಲಿ ಏನು ಅಂದ್ರೆ ಏನಿಲ್ಲದಂತೆ ಎಲ್ಲವೂ ತೊಳೆದುಕೊಂಡು ಹೋಗಿದ್ವು.. ಸದ್ಯ ಚಾರ್ಮಾಡಿ ಘಾಟೇ ಸಂಪೂರ್ಣ ಹಸಿರುಮಯವಾಗಿದ್ದು, ಒಂದೊಂದೇ ಹಣ್ಣುಗಳು ಬಿಡಲು ಶುರುಮಾಡಿದ್ದವೆ. ಅದರ ಮೊದಲ ಹಂತವಾಗಿ ಇದೀಗ ಚಾರ್ಮಾಡಿ ಘಾಟ್ನಲ್ಲಿ ಅತ್ತಿಹಣ್ಣಿನ ಸೀಸನ್ ಶುರುವಾಗಿದೆ.. ಒಟ್ಟಿನಲ್ಲಿ ಅತ್ತಿಹಣ್ಣಿನ ಸುಗ್ಗಿಯಿಂದ ಮಂಗಗಳು ಖುಷ್, ಮಾನವರು ಖುಷ್..

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights