ದಿನಪತ್ರಿಕೆ ಮತ್ತು ಕೊರೊನ ವೈರಸ್ ಸುದ್ದಿ: ದ ಪ್ರಿಂಟ್ ಗೆ ನೋಟಿಸ್ ಕಳುಹಿಸಿದ ಟೈಮ್ಸ್ ಸಮೂಹ ಸಂಸ್ಥೆ

ದ ಪ್ರಿಂಟ್ ಅಂತರ್ಜಾಲ ಪತ್ರಿಕೆ, ದಿನಪತ್ರಿಕೆಗಳು ಮತ್ತು ನೋಟುಗಳಿಂದ ಕೊರೊನ ವೈರಸ್ ಹರಡುವ ಸಾಧ್ಯತೆ ಇದೆ ಎಂದು ಸುದ್ದಿ ಪ್ರಕಟಿಸಿದ ಕೆಲವೇ ದಿನಗಳಲ್ಲಿ ಬೆನೆಟ್ ಕೋಲ್ಮನ್ & ಕೊ ಲಿಮಿಟೆಡ್ (ಟೈಮ್ಸ್ ಸಮೂಹ ಸಂಸ್ಥೆ) ಈಗ ದ ಪ್ರಿಂಟ್ ಗೆ ಕಾನೂನು ನೋಟಿಸ್ ಕಳುಹಿಸಿದೆ. ದಿನಪತ್ರಿಕೆಗಳು ಮತ್ತು ಅವುಗಳ ಕಾರ್ಯದ ವಿರುದ್ಧ ದುರುದ್ದೇಶಪೂರಿತವಾಗಿ ಈ ಲೇಖನ ಬರೆದಿದ್ದು, ಅಂತರ್ಜಾಲದಿಂದ ಲೇಖನವನ್ನು ತೆಗೆಯುವಂತೆ ನೋಟಿಸ್ ನಲ್ಲಿ ತಿಳಿಸಲಾಗಿದೆ ಎಂದು ದ ವೈರ್ ವರದಿ ಮಾಡಿದೆ.

ದಿನಪತ್ರಿಕೆಗಳು ಮತ್ತು ನೋಟುಗಳಿಂದ ಕೊರೊನ ಹರಡುವ ಸಾಧ್ಯತೆ ಇದೆ ಆದರೆ ಅದು ವಿರಳ ಎಂಬ ಶೀರ್ಷಿಕೆಯಡಿ ಹಲವು ತಜ್ಞರ ಜೊತೆಗೆ ಮಾತನಾಡಿ ದಿನಪತ್ರಿಕೆಗಳ ಮೇಲೆ ವೈರಸ್ ಉಳಿದು ಮನೆಗಳಿಗೆ ತಲುಪ ಸಾಧ್ಯತೆ ಬಗ್ಗೆ ಆ ಲೇಖನದಲ್ಲಿ ಚರ್ಚೆ ಮಾಡಲಾಗಿತ್ತು.

ದ ಪ್ರಿಂಟ್ ಲೇಖನದಲ್ಲಿ ಹೇಳಿದಂತೆಯೇ, ಅಂತರಾಷ್ಟ್ರೀಯ ಸುದ್ದಿ ಮಾಧ್ಯಮ ಸಂಘ ಕೂಡ ದಿನಪತ್ರಿಕೆಗಳ ಮೇಲೆ ವೈರಾಣು ಉಳಿದು, ಅದನ್ನು ಮುಟ್ಟಿದರೆ, ಕೊರೊನ ಸೋಂಕು ತಗಲುವ ಸಾಧ್ಯತೆ ಇದೆ ಎಂದು ಹೇಳಿತ್ತು. ಆದರೆ ಇಂತಹ ಪ್ರಕರಣಗಳು ಇಲ್ಲಿಯವರೆಗೂ ದಾಖಲಾಗಿಲ್ಲ ಮತ್ತು ದಿನಪತ್ರಿಕೆಗಳ ಮೇಲ್ಮೈನಲ್ಲಿ ವೈರಾಣುಗಳು ಅತಿ ಕಡಿಮೆ ಸಮಯದವರೆಗೆ ಮಾತ್ರ ಬದುಕಬಲ್ಲವು ಎಂದು ತಿಳಿಸಿತ್ತು.

ದ ಪ್ರಿಂಟ್ ತಾನು ಹಾಕಿರುವ ಸುದ್ದಿಯನ್ನು ತೆಗೆಯದೆ ಹೋದರೆ ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸುವುದಾಗಿ ಟೈಮ್ಸ್ ಸಮೂಹ ಸಂಸ್ಥೆ ಬೆದರಿಸಿದೆ,.

ಸದ್ಯದ ಲಾಕ್ ಡೌನ್ ಪರಿಸ್ಥಿತಿಯಲ್ಲಿ ಹಲವು ರಾಜ್ಯಗಳಲ್ಲಿ ದಿನಪತ್ರಿಕೆ ವಿತರಣೆಯಲ್ಲಿ ಸಾಕಷ್ಟು ವ್ಯತ್ಯಯ ಆಗಿದೆ. ಮಹಾರಾಷ್ಟ್ರದಲ್ಲಿ ದಿನಪತ್ರಿಕೆ ವಿತರಕರು ಎಲ್ಲರೂ ಒಮ್ಮತವಾಗಿ ವಿತರಣೆಯನ್ನು ನಿಲ್ಲಿಸಲು ನಿರ್ಧರಿಸಿದ್ದಾರೆ. ಕರ್ನಾಟಕದಲ್ಲಿಯೂ ಹಲವು ಸ್ಥಳಗಳಲ್ಲಿ ದಿನಪತ್ರಿಕೆ ವಿತರಣೆ ಸ್ಥಗಿತಗೊಂಡಿದೆ. ಮಹಾರಾಷ್ಟ್ರದಲ್ಲಿ ಬಹುತೇಕ ಎಲ್ಲ ದಿನಪತ್ರಿಕೆಗಳು ಮುದ್ರಣವನ್ನು ನಿಲ್ಲಿಸಿ ಕೇವಲ ಇ-ಪತ್ರಿಕೆಗಳನ್ನು ಹೊರತರುತ್ತಿವೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights