ನಟಿ ರಮ್ಯಾ ಕೃಷ್ಣ ಕಾರಿನಲ್ಲಿ 104 ಮದ್ಯದ ಬಾಟಲಿಗಳು ಪತ್ತೆ! ಬಾಟಲಿಗಳು ಪೊಲೀಸರ ವಶಕ್ಕೆ!

ಬಹುಭಾಷಾ ನಟಿ ರಮ್ಯಾ ಕೃಷ್ಣ ಅವರ ಕಾರಿನಲ್ಲಿ 104 ಮದ್ಯ ಬಾಟಲಿಗಳು ಸಿಕ್ಕಿದ್ದು, ಬಾಟಲಿಗಳನ್ನು ತಮಿಳುನಾಡಿನ ಕಾನತ್ತೂರು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ರಮ್ಯಾ ಕೃಷ್ಣ ಮತ್ತು ಅವರ ತಂಗಿ ವಿನಯ​ ಕೃಷ್ಣ ಕಾರಿನಲ್ಲಿ ಮಹಾಬಲಿಪುರಂನಿಂದ ಹಿಂತಿರುಗುತ್ತಿದ್ದಾಗ  ಮುತ್ತುಕಾಡು ಚೆಕ್​ಪೋಸ್ಟ್​ನಲ್ಲಿ ಪೊಲೀಸರು ತಪಾಸಣೆ ಮಾಡಿದ್ದಾರೆ. ಈ ವೇಳೆ ಕಾರಿನಲ್ಲಿ 96 ಬಿಯರ್​ ಬಾಟಲ್ ಸೇರಿದಂತೆ 8 ಲಿಕ್ಕರ್​ ಬಾಟಲಿ ಸಿಕ್ಕಿದ್ದು, ಪೊಲೀಸರು ವಶಪಡಿಸಿಕೊಂಡಿದ್ದಾರೆ.

Too Many Beer & Liquor Bottles in Ramya Krishna's Car

ಇನ್ನೂ ಕಾರಿನಲ್ಲಿ ಮದ್ಯವನ್ನು ತೆಗೆದುಕೊಂಡು ಹೋಗುತ್ತಿದ್ದ ಕಾರಣಕ್ಕೆ ರಮ್ಯಾ ಕೃಷ್ಣ ಅವರ ಕಾರಿನ ಚಾಲಕ ಸೆಲ್ವಕುಮಾರ್​​ನನ್ನು ಪೊಲೀಸರು ಬಂಧಿಸಿದ್ದಾರೆ. ನಂತರ ಚಾಲಕನನ್ನು ರಮ್ಯಾಕೃಷ್ಣ ಅವರು ಜಾಮೀನಿನ ಮೇಲೆ ಬಿಡುಗಡೆ ಮಾಡಿಸಿ ಕರೆತಂದಿದ್ದಾರೆ ಎಂದು ತಿಳಿದುಬಂದಿದೆ.

ಕೊರೊನಾ ವೈರಸ್​ ನಿಯಂತ್ರಿಸುವ ದೃಷ್ಠಿಯಿಂದ ಚೆನ್ನೈ ಪೊಲೀಸರು ತಪಾಸಣೆಯನ್ನು ತೀವ್ರಗೊಳಿಸಿದ್ದಾರೆ. ಲಾಕ್​ಡೌನ್​ ಸಡಿಲಗೊಂಡಿದ್ದರು ಜನರು ಲಿಕ್ಕರ್​ಗಾಗಿ ಚೆನ್ನೈ ಸಿಟಿಗಳಿಗೆ ತೆರಳುತ್ತಿದ್ದಾರೆ. ಹಾಗಾಗಿ ಅಲ್ಲಿನ ಪೊಲೀಸರು ಟೋಲ್​ ಪ್ಲಾಜಾಗಳಲ್ಲಿ ವಾಹನಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ. ಹಾಗಾಗಿ ನಟಿ ರಮ್ಯಾ ಕೃಷ್ಣ ಅವರ ಕಾರನ್ನು ಪರಿಶೀಲಿಸಿದ್ದು, ಈ ವೇಳೆ ಮದ್ಯದ ಬಾಟಲಿಗಳು ದೊರೆತಿವೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights