‘ನಾವು ಕೊರೊನಾ ವೈರಸ್‌ನೊಂದಿಗೆ ಬದುಕಲು ಕಲಿಯಬೇಕು’ – ಕೇಂದ್ರ ಆರೋಗ್ಯ ಇಲಾಖೆ ಸೂಚನೆ

ಕೊರೊನಾ ಲಾಕ್ ಡೌನ್ ನಿಂದಾಗಿ ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿರುವ ದೇಶದಲ್ಲಿ ಲಾಕ್ ಡೌನ್ ನನ್ನು ಹೆಚ್ಚು ವಿಸ್ತರಿಸಲು ಆಗಲ್ಲ. ಹೀಗಾಗಿ ನಾವೆಲ್ಲಾ ಬದುಕಲು ಕಲಿಯಬೇಕು ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಂಟಿ ಕಾರ್ಯದರ್ಶಿ ಲವ್ ಅಗರ್​ವಾಲ್ ಹೇಳಿದ್ದಾರೆ.

ಹೌದು… ನಿನ್ನೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೈರಸ್ ತಡೆಗೆ ನೀಡಿರುವ ಸಲಹೆ-ಸೂಚನೆಗಳನ್ನು ಬದುಕಿನ ವಿಧಾನವನ್ನಾಗಿ ಬದಲಿಸಿಕೊಳ್ಳಬೇಕು. ನಾವು ಕೊರೊನಾ ವೈರಸ್ ಸಂದರ್ಭದೊಂದಿಗೆ ಬದುಕಲು ಕಲಿಯಬೇಕು ಅಂತಾ ಹಸಿಗೋಡೆಗೆ ಕಲ್ಲು ಹೊಡೆದಂತೆ ಸ್ಪಷ್ಟವಾಗಿ ಹೇಳಿದ್ದಾರೆ.

ದೇಶವನ್ನು ಕೊರೊನಾ ಮುಕ್ತವಾಗಿಸಬೇಕಾದರೆ ಲಸಿಕೆ ಕಂಡು ಹಿಡಿಯಬೇಕು. ಅಲ್ಲಿಯವರೆಗೂ ಭಾರತದಲ್ಲಿ ಕೊರೊನಾ ಪೀಕ್ ಲೇವಲ್ ಗೆ ಮುಟ್ಟುವ ಸಾಧ್ಯತೆ ಇಲ್ಲ. ಇದಕ್ಕೆ ಸರ್ಕಾರ ಸೂಚಿಸಿದ ಮಾರ್ಗ ಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗಿದೆ. ಲಾಕ್ ಡೌನ್ ಸಡಲಿಕೆ ಮತ್ತು ವಲಸೆ ಕಾರ್ಮಿಕರ ಮರಳುವಿಕೆ ಬಗ್ಗೆ ಮಾತಾನಡುತ್ತಿರುವ ನಾವು ವೈರಸ್ ನೊಂದಿಗೆ ಬದುಕಬೇಕು ಅನ್ನೋ ವಿಷಯವನ್ನು ತಿಳಿಯಬೇಕು.

ಈ ನಿಯಮ ಪಾಲಿಸದೇ ಇದ್ದರೆ, ಕೊರೊನಾ ಸೋಂಕು ಗಣನೀಯವಾಗಿ ಹೆಚ್ಚುವ ಸಾಧ್ಯತೆ ಇಲ್ಲದೇ ಇಲ್ಲ ಅಂತಾ ಕೂಡ ತಿಳಿಸಿದ್ದಾರೆ. ಒಟ್ಟಿನಲ್ಲಿ ಈ ಕೋರೊನಾ ಸೋಂಕು ಅಂತೂ ಅಷ್ಟು ಬೇಗ ನಾಶವಾಗುವ ಲಕ್ಷಣಗಳಂತೂ ತೋರುತ್ತಿಲ್ಲ. ವಿಶ್ವಾದ್ಯಂತ ಿದು ಅಳಿಯಬೇಕಿದ್ದರೆ ಅದು ಕೊರೊನಾ ನಾಶ ಮಾಡುವ ಲಸಿಕೆಯನ್ನು ಪತ್ತೆಹಚ್ಚಬೇಕಿದೆ. ಹೀಗಾಗಿ, ಇನ್ನೂ ಸ್ಪಲ್ಪದಿನೀ ವೈರಸ್ ನೊಂದಿಗೆ ಸಹಬಾಳ್ವೆ ಮಾಡಬೇಕಿರೋದಂತೂ ಸದ್ಯದ ಕಹಿ ಸತ್ಯ.

ಶನಿವಾರ ಬೆಳಿಗ್ಗೆಯವರೆಗೆ, ಭಾರತದಲ್ಲಿ 59,662 ವೈರಸ್ ಪ್ರಕರಣಗಳು ಇದ್ದು, 1,981 ಜನರು ಈವರೆಗೆ ಸಾವನ್ನಪ್ಪಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights