ಪರಿಷತ್‌ ಚುನಾವಣೆಯಲ್ಲಿ ಬಿಎಸ್‌ವೈಗೆ 04, ಹೈಕಮಾಂಡ್‌ಗೆ 05 ಸೀಟು: ಏನಿದು ಚುನಾವಣಾ ಟ್ವಿಸ್ಟ್‌?

ಕರ್ನಾಟಕ ವಿಧಾನ ಪರಿಷನ್‌ನಲ್ಲಿ ಖಾಲಿ ಆಗುವ 07 ಸ್ಥಾನಗಳಿಗೆ ಸದರಸ್ಯರನ್ನು ವಿಧಾನಸಭೆಯಿಂದ ಆಯ್ಕೆ ಮಾಡಲು ಜೂನ್ 29ರಂದು ಚುನಾವಣೆ ನಡೆಯಲಿದೆ. ಖಾಲಿಯಾಗಿರುವ 7 ಸದಸ್ಯರ ಪೈಕಿ ಬಿಜೆಪಿ 4 ಸ್ಥಾನಗಳಲ್ಲಿ ಸುಲಭವಾಗಿ ಜಯಗಳಿಸಲಿದೆ. ಕಾಂಗ್ರೆಸ್‌ 2, ಜೆಡಿಎಸ್‌ 1 ಸ್ಥಾನಗಳನ್ನು ಗೆಲ್ಲುವುದು ಖಚಿತ ಎಂದು ಹೇಳಲಾಗುತ್ತಿದೆ.

ವಿಧಾನ ಸಭೆಯಿಂದ ಪರಿಷತ್‌ಗೆ ಬಿಜೆಪಿ ನಾಲ್ವರನ್ನು ಆಯ್ಕೆ ಮಾಡುವುದರ ಜೊತೆಗೆ  ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ 5 ಗಣ್ಯರನ್ನು ಪರಿಷತ್‌ಗೆ ನಾಮ ನಿರ್ದೇಶನ ಮಾಡಲು ಬಿಜೆಪಿಗೆ ಅವಕಾಶ ಸಿಕ್ಕಿದೆ.

Karnataka at crossroads - where to next? | Deccan Herald

ಹೀಗಾಗಿ 4 ಸ್ಥಾನಗಳನ್ನು ಆಯ್ಕೆ ಮಾಡಲು ಸಿಎಂ ಯಡಿಯೂರಪ್ಪಗೆ ಅವಕಾಶ ನೀಡಲಾಗಿದ್ದು, ಉಳಿದ ಐದು ಸದಸ್ಯರ ಆಯ್ಕೆಯನ್ನು ಬಿಜೆಪಿ ಹೈಕಮಾಂಡ್ ಮಾಡಲಿದೆ ಎಂದು ಹೇಳಲಾಗಿದೆ. ನಾಮಪತ್ರಗಳನ್ನು ಸಲ್ಲಿಕೆ ಮಾಡಲು ಜೂನ್ 18 ಕೊನೆಯ ದಿನವಾಗಿದ್ದು, ಬಿಜೆಪಿ ಮುಂದಿನ ವಾರ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಿದೆ.

ಒಟ್ಟು 9 ಸದಸ್ಯರು ಬಿಜೆಪಿ ಮೂಲಕ ಪರಿಷತ್‌ಗೆ ಆಯ್ಕೆಯಾಗಲಿದ್ದಾರೆ. ಆದ್ದರಿಂದ, ಬಿಜೆಪಿಯಲ್ಲಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದೆ. ರಾಜ್ಯಸಭೆ ಚುನಾವಣೆಯಲ್ಲಿ ರಾಜ್ಯ ಬಿಜೆಪಿ ಶಾಕ್‌ ಕೊಟ್ಟ ಹೈಕಮಾಂಡ್‌ ಪರಿಷತ್‌ ಚುನಾವಣೆಯಲ್ಲಿಯೂ ಶಾಕ್‌ ಕೊಡುವ ಸಾಧ್ಯತೆಯಿದೆ. ಹಾಗಾಗಿ ಆಕಾಂಕ್ಷಿಗಳಲ್ಲಿ ಆತಂಕವೂ ಇದೆ.

ಸಾಧನೆ ಮಾಡಿರುವ ಐವರ ಹೆಸರನ್ನು ಶಾರ್ಟ್ ಲಿಸ್ಚ್ ಮಾಡಲಾಗಿದೆ. ಪಕ್ಷದ ತತ್ವ ಸಿದ್ಧಾಂತದ ಆಧಾರದ ಮೇಲೆ ನಾಮ ನಿರ್ದೇಶತ ಸದಸ್ಯರ ಆಯ್ಕೆ ನಡೆಯಲಿದೆ.  ನಾಮ ನಿರ್ದೇಶನವಾಗಬೇಕಾದ 5 ಅಭ್ಯರ್ಥಿಗಳ ಹೆಸರನ್ನು ಈಗಾಗಲೇ ಹೈಕಮಾಂಡ್ ಗೆ ರವಾನಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights