ಪಾದರಾಯನಪುರದಲ್ಲಿ ಮತ್ತೆ ಗಲಾಟೆ : ಪೊಲೀಸರೊಂದಿಗೆ ವಾಗ್ವಾದಕ್ಕಿಳಿದ ಜನ!

ಪಾದರಾಯನಪುರದಲ್ಲಿ ಮತ್ತೆ ಪೊಲೀಸ್ ಹಾಗೂ ಜನರ ನಡುವೆ ಗಲಾಟೆ ನಡೆದಿದೆ.

ಹೌದು… ಲಾಕ್ ಡೌನ್ ಹಿನ್ನೆಲೆ ಜೊತೆಗೆ ಪಾದರಾಯನಪುರದಲ್ಲಿ ಕೊರೊನಾ ಸೋಂಕಿತರು ಪತ್ತೆಯಾಗಿದ್ದು ಸೀಲ್ಡೌನ್ ಮಾಡಲಾಗಿದೆ. ಹೀಗಾಗಿ ಅಲ್ಲಲ್ಲಿ ಬ್ಯಾರಿಕೇಡ್ ಗಳನ್ನು ಹಾಕಲಾಗಿದೆ. ಯಾವುದೇ ಕಾರಣಕ್ಕೂ ಒಳಗೆ, ಹೊರಗೆ ಹೋಗಲು ಬಿಡಲ್ಲ ಎಂದು ಪೊಲೀಸರು ಹೇಳಿದ್ದಾರೆ. ಈ ವೇಳೆ ಜನರು ಗುಂಪು ಗುಂಪಾಗಿ ಬ್ಯಾರಿಕೇಡ್ ಬಳಿ ಬಂದು ಗಲಾಟೆ ಮಾಡಿದ್ದಾರೆ.

ಈ ವೇಳೆ ಪೊಲೀಸ್ ಹಾಗೂ ಪಾದರಾಯನಪುರದ ಜನರ ನಡುವೆ ಮಾತಿನ ಚಕಮಕಿಯಾಗಿದೆ. ಯಾವುದೇ ಸಬೂಬು ಹೇಳಿದರೂ ಬಿಡದೇ ಎಲ್ಲರನ್ನೂ ಪೊಲೀಸರು ವಾಪಸ್ ಕಳುಹಿಸುತ್ತಿದ್ದಾರೆ.

ಇನ್ನೂ ಪಾದರಾಯಪುರದಲ್ಲಿ ಈ ಹಿಂದೆ ದೊಡ್ಡಮಟ್ಟದ ಗಲಾಟೆಯಾಗಿತ್ತು. ಇದರ ಬಗ್ಗೆ ಸಾಕಷ್ಟು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ ಕೂಡ. ಕೊರೊನಾ ವಾರಿಯರ್ಸ್ ಮೇಲೆ ಹಲ್ಲೆ ಮಾಡಲಾಗಿತ್ತು ಎನ್ನಲಾದ ಈ ಪ್ರದೇಶದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿತ್ತು. ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಇದರ ನಡುವೆ ಮತ್ತೆ ಗಲಾಟೆ ನಡೆದಿದೆ. ಯಾವುದೇ ಸಬೂಬು ಹೇಳಿದರೂ ಬಿಡದೇ ಎಲ್ಲರನ್ನೂ ಪೊಲೀಸರು ವಾಪಸ್ ಕಳುಹಿಸುತ್ತಿದ್ದಾರೆ.

ಈಗಾಗಲೇ ಇಲ್ಲಿ ಒಂದೇ ದಿನದಲ್ಲಿ ಏಳು ಸೋಂಕಿತರು ಪತ್ತೆಯಾದರೂ ಜನರು ಮಾತ್ರ ಕೇರ್ ಮಾಡದೆ ಸುಮ್ಮನೆ ಓಡಾಡುತ್ತಿದ್ದಾರೆ. ಸೀಲ್‍ಡೌನ್ ಅಂತ ಆರೋಗ್ಯ ಇಲಾಖೆ ಹೇಳಿದರೂ ಬೇಕಾಬಿಟ್ಟಿಯಾಗಿ ಓಡಾಡುತ್ತಿರುವವರ ಸಂಖ್ಯೆ ಅಧಿಕವಾಗಿದೆ. ಸಾಮಾಜಿಕ ಅಂತರ ಹಾಗೂ ಮಾಸ್ಕ್ ಧರಿಸದೇ ಓಡಾಡುತ್ತಿರುವುದು ಗಮನಕ್ಕೆ ಬಂದಿದೆ. ಹೀಗಾಗಿ ಪೊಲೀಸರು 11ನೇ ಕ್ರಾಸ್ ಒಳಗೆ ಯಾರಿಗೂ ಎಂಟ್ರಿ ಕೊಡುತ್ತಿಲ್ಲ. ಅಷ್ಟೇ ಅಲ್ಲದೇ ಯಾರೂ ಹೊರಗೆ ಬರದಂತೆ ಬ್ಯಾರಿಕೆಡ್ ಹಾಕಿ ತಡೆಯುತ್ತಿದ್ದಾರೆ.

ಪಾದರಾಯನಪುರದಲ್ಲಿ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಶುಕ್ರವಾರಕ್ಕಿಂತ ಇಂದು ಹೆಚ್ಚಿನ ಭದ್ರತೆ ನಿಯೋಜನೆ ಮಾಡಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights