ಫೇಕ್ ವೆಂಟಿಲೇಟರ್ ವಿವಾದ; ತೀವ್ರ ಮುಜುಗರದಲ್ಲಿ ಗುಜರಾತ್ ಸರ್ಕಾರ

ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾದಿಂದ ಕಡ್ಡಾಯ ಮಾನ್ಯತೆ ಪಡೆಯದೆ ವೆಂಟಿಲೇಟರ್ ಗಳೇ ಅಲ್ಲದ ಆಂಬು ಬ್ಯಾಗ್ ಗಳನ್ನು ವೆಂಟಿಲೇಟರ್ ಗಳೆಂದು ಕರೆದು ಗುಜರಾತಿನ ಆಸ್ಪತ್ರೆಗಳಲ್ಲಿ ಅಡವಳಿಸಿದ್ದಕ್ಕೆ ತೀವ್ರ ಆಕ್ಷೇಪ ಕೇಳಿಬಂದಿದೆ. ದೇಶದಲ್ಲಿ ಅತಿ ಹೆಚ್ಚು ಕೊರೊನ ಸೋಂಕಿತರು ಇರುವ ರಾಜ್ಯಗಳಲ್ಲಿ ಒಂದಾದ ಗುಜರಾತ್ ನ ಈ ನಡೆ ಭ್ರಷ್ಟಾಚಾರದ ಅನುಮಾನಗಳಿಗೂ ಎಡೆ ಮಾಡಿಕೊಟ್ಟಿದೆ.

ಈ ವೆಂಟಿಲೇಟರ್‌ ತಯಾರಿಕ ಕಂಪನಿಯ ಪ್ರಸ್ತುತ ಮತ್ತು ಮಾಜಿ ಪ್ರವರ್ತಕರು ಬಿಜೆಪಿಯ ಉನ್ನತ ನಾಯಕರೊಂದಿಗೆ ನಿಕಟ ಒಡನಾಟವನ್ನು ಹೊಂದಿರುವುದು ಬೆಳಕಿಗೆ ಬಂದಿದೆ. ಇದೇ ಕಂಪನಿಯು ಈ ಹಿಂದೆ ಪ್ರಧಾನಿ ನರೇಂದ್ರ ಮೋದಿಗೆ ವಿವಾದಾತ್ಮಕ ದುಬಾರಿ ಸೂಟ್‌ನ ಉಡುಗೊರೆ ನೀಡಿತ್ತು ಎಂದು ಹಲವು ಮಾಧ್ಯಮಗಳು ವರದಿ ಮಾಡಿವೆ.

ವೆಂಟಿಲೇಟರ್‌ ತರಿಸಿಕೊಳ್ಳುವ ಕೆಲಸವನ್ನು ಸರ್ಕಾರಿ ಸ್ವಾಮ್ಯದ ಎಚ್‌ಎಲ್‌ಎಲ್ ಲೈಫ್‌ಕೇರ್ ಮೂಲಕ ಮಾಡಲಾಗುತ್ತಿದೆ ಎಂದು ಗುಜರಾತ್‌ ಸರ್ಕಾರದ ಪ್ರಧಾನ ಆರೋಗ್ಯ ಕಾರ್ಯದರ್ಶಿ ಜಯಂತಿ ರವಿ ಹೇಳಿದ್ದಾರೆ. ಮೇ ತಿಂಗಳ ಆರಂಭದಲ್ಲಿ ಭಾರತದಲ್ಲಿ ತಯಾರಿಸಿದ 50,000 ವೆಂಟಿಲೇಟರ್‌ಗಳ ಖರೀದಿಗೆ ಪಿಎಂ ಕೇರ್ಸ್ ಫಂಡ್ ನಿಂದ 2,000 ಕೋಟಿ ರೂ ಘೋಷಿಸಲಾಗಿತ್ತು.

ಕಳೆದ ಕೆಲವು ವಾರಗಳಲ್ಲಿ, ಜ್ಯೋತಿ ಸಿಎನ್‌ಸಿ ಆಟೊಮೇಷನ್ ಲಿಮಿಟೆಡ್ ಅಹಮದಾಬಾದ್ ಸಿವಿಲ್ ಆಸ್ಪತ್ರೆಗೆ ಉಚಿತವಾಗಿ ಸರಬರಾಜು ಮಾಡಿದ ಸುಮಾರು ‘ಮೇಡ್ ಇನ್ ಇಂಡಿಯಾ’ ವೆಂಟಿಲೇಟರ್‌ಗಳು ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ ಎಂದು ಅಲ್ಲಿನ ವೈದ್ಯರು ದೂರಿದ್ದಾರೆ. ಇದರ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಪರಕ್ರಮ್‌ ಸಿನ್ಹ ಜಡೇಜಾರವರು ಮುಖ್ಯಮಂತ್ರಿ ವಿಜಯ್ ರೂಪಾನಿಗೆ ತೀರಾ ಹತ್ತಿರದ ಗೆಳೆಯರಾಗಿದ್ದಾರೆ.

ಅಹಮದಾಬಾದ್ ಮಿರರ್ ಮೊದಲ ಬಾರಿಗೆ ಮೇ 19 ರಂದು ವರದಿ ಮಾಡಿದಂತೆ, ಈ “ವೆಂಟಿಲೇಟರ್‌ಗಳು” COVID-19 ರೋಗಿಗಳ ಮೇಲೆ ಬಳಸಿದಾಗ ಅಸಮರ್ಪಕವೆಂದು ಸಾಬೀತಾಗಿದೆ. ಅಹಮದಾಬಾದ್ ಸಿವಿಲ್ ಆಸ್ಪತ್ರೆಯಲ್ಲಿ ಇವುಗಳನ್ನು ಬಳಸದಂತೆ ತುತು ಎಚ್ಚರಿಕೆ ನೀಡಲಾಗಿದೆ ವೈದ್ಯರು ತಿಳಿಸಿದ್ದಾರೆ.

‘ಧಮನ್ -1’ ಎಂಬ ಹೆಸರಿನ ವೆಂಟಿಲೇಟರ್‌ ಯಂತ್ರಗಳನ್ನು ಗುಜರಾತ್ ಸರ್ಕಾರವು ಅತ್ಯುತ್ಸಾಹದಿಂದ ಉತ್ತೇಜಿಸಿತು ಮತ್ತು ಅದನ್ನು “ಅದ್ಭುತ ಸಾಧನೆ” ಎಂದು ಕರೆದಿತ್ತು. ಈ ಅಗ್ಗದ ವೆಂಟಿಲೇಟರ್ ಅನ್ನು 10 ದಿನಗಳಲ್ಲಿ ಉತ್ಪಾದಿಸಲಾಗಿದೆ ಎಂದು ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರು ಬಲವಾಗಿ ಅನುಮೋದಿಸಿದ್ದಾರೆ. ಆದರೆ ರೂಪಾನಿಯ ಉತ್ಸಾಹಕ್ಕೆ ವ್ಯತಿರಿಕ್ತವಾಗಿ ಗುಜರಾತ್‌ನ ಸರ್ಕಾರಿ ವೈದ್ಯರು ಈ ಯಂತ್ರಗಳು ಕಳಪೆ ಎಂದು ದೂರಿದ್ದಾರೆ.

ವಿವಾದ ಭುಗಿಲೆದ್ದ ನಂತರ ಮೇ 20 ರಂದು ಪುದುಚೇರಿ ಮುಖ್ಯಮಂತ್ರಿ ವಿ.ನಾರಾಯಣಸಾಮಿ ತಮ್ಮ ಕೇಂದ್ರಾಡಳಿತ ಪ್ರದೇಶವು ಧಮನ್ -1 ಯಂತ್ರಗಳ ಖರೀದಿ ಆದೇಶಗಳನ್ನು ರದ್ದುಗೊಳಿಸುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ.

ಒಟ್ಟಿನಲ್ಲಿ ದೇಶ ಕೊರೊನಾದಂತಹ ಸಂಕಷ್ಟದ ಕಾಲದಲ್ಲಿ ಹೋರಾಡುತ್ತಿರಬೇಕಾದರೆ ರೋಗಿಗಳ ಸಾವು-ಬದುಕು ನಿರ್ಧರಿಸುವ ವೆಂಟಿಲೇಟರ್‌ಗಳ ವಿಷಯದಲ್ಲಿ ಅವ್ಯವಹಾರ ನಡೆದಿರುವ ಆರೋಪ ಕೇಳಿಬಂದಿದೆ. ಗುಜರಾತ್ ಮಾಡೆಲ್ ನ ಕೊನೆ ಮೊಳೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಇದರ ಬಗ್ಗೆ ಟೀಕಾಪ್ರಹಾರ ನಡೆದಿದೆ.

https://twitter.com/RoxyChhara/status/1263326893283192833?ref_src=twsrc%5Etfw%7Ctwcamp%5Etweetembed%7Ctwterm%5E1263326893283192833%7Ctwgr%5E&ref_url=https%3A%2F%2Fnaanugauri.com%2Ffake-ventilator-scam-of-company-that-gifted-expensive-suit-with-his-name-monogrammed-to-narendra-modi%2F

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights