ಬಿಜೆಪಿ ಚಿಹ್ನೆಯುಳ್ಳ ಮತದಾರರ ಚೀಟಿ ವಿತರಣೆ : ಕೈ-ಕಮಲ ಕಾರ್ಯಕರ್ತರ ನಡುವೆ ವಾಗ್ವಾದ

ಅಥಣಿ‌ ಮತಕ್ಷೇತ್ರದಲ್ಲಿ ಬಿರುಸಿನ ಮತದಾನ ನಡೆಯುತ್ತಿದ್ದು,  ಈವರೆಗೆ ಶೇ. 33.37ರಷ್ಟು ಮತದಾನ ದಾಖಲಾಗಿದೆ. ಆದರೆ ಈ ವೇಳೆ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಧ್ಯೆ ವಾಗ್ವಾದ ಜೋರಾಗಿದೆ.

ಹೌದು… ಅಥಣಿಯಲ್ಲಿ ಚುನಾವಣೆಗೆ ಬಿಜೆಪಿ ಚಿಹ್ನೆಯುಳ್ಳ ಮತದಾರರ ಚೀಟಿ ನೀಡುತ್ತಿದ್ದ ಆರೋಪ ಕೇಳಿ ಬಂದಿದೆ. ಬಿಜೆಪಿ ಕಾರ್ಯಕರ್ತರಿಂದ ಮತಗಟ್ಟೆ ಹೊರಗೆ ಕಮಲದ ಚಿಹ್ನೆಯುಳ್ಳ ಚೀಟಿ ನೀಡುತ್ತಿದ್ದನ್ನು ಕಾಂಗ್ರೆಸ್ ಕಾರ್ಯಕರ್ತರು ವಿರೋಧಿಸಿದ್ದಾರೆ. ಇದರಿಂದ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಧ್ಯೆ ವಾಗ್ವಾದ ನಡೆದಿದೆ. ಇದರಿಂದ ಮತಗಟ್ಟೆಯ ಬಳಿ ಕೆಲಹೊತ್ತು ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು.

ಕೊನೆಗೆ ಚುನಾವಣಾಧಿಕಾರಿಗಳು ಚಿಹ್ನೆಯುಳ್ಳ ಮತದಾರರ ಚೀಟಿಗಳನ್ನು ಜಪ್ತಿ ಮಾಡಿದ್ದು, ಪೊಲೀಸರ ಮಧ್ಯಸ್ಥಿಕೆ ಬಳಿಕ ಪರಿಸ್ಥಿತಿ ತಿಳಿಯಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights