ಬೆಂಗಳೂರಿಗೆ ಸಿಎಂ ಬಾಸ್, ಬೆಳಗಾವಿಗೆ ಶೆಟ್ಟರ್ ಉಸ್ತುವಾರಿ, listನಲ್ಲಿ ರಮೇಶ್ ಜಾರಕಿಹೊಳಿ ಇಲ್ಲ..

ಇತ್ತೀಚಿನ ದಿನಗಳಲ್ಲಿ ಅಷ್ಟಾಗಿ ಸುದ್ದಿಯಲ್ಲಿನ ಇಲ್ಲದ ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರಿಗೆ ಯಾವುದೇ ಜಿಲ್ಲೆಯ ಉಸ್ತುವಾರಿಯನ್ನು ಸಹ ನೀಡದೇ ಸಿಎಂ ಯಡಿಯೂರಪ್ಪ ಸಾಕಷ್ಟು ಕುತೂಹಲಕ್ಕೆ ಎಡೆಮಾಡಿಕೊಟ್ಟಿದ್ದಾರೆ. ಪೂರ್ಣ ಪ್ರಮಾಣದಲ್ಲಿ ಮಂತ್ರಿಮಂಡಲ ರಚನೆಯಾಗಿ ದಿನಗಳೇ ಕಳೆದಿದ್ದರೂ ಈವರೆಗೆ ಜಿಲ್ಲೆಗಳಿಗೆ ಉಸ್ತುವಾರಿಗಳ ನೇಮಕವಾಗಿರಲಿಲ್ಲ. ಆದರೆ ಗುರುವಾರ ರಾತ್ರಿ ಜಿಲ್ಲಾ ಉಸ್ತುವಾರಿಗಳನ್ನು ನೇಮಿಸಿ ಸಿಎಂ ಆದೇಶ ಹೊರಡಿಸಿದ್ದಾರೆ.

ಕುತೂಹಲದ ವಿಷಯವೆಂದರೇ ನಾಲ್ವರು ಮಂತ್ರಿಗಳನ್ನು ಹೊಂದಿರುವ ಬೆಳಗಾವಿ ಜಿಲ್ಲೆಯ ಉಸ್ತುವಾರಿಯನ್ನು ಅವರಾರಿಗೂ ನೀಡದೇ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಅವರಿಗೆ ವಹಿಸಲಾಗಿದೆ. ಕೊರೋನಾ ವಿಚಾರವಾಗಿ ರಮೇಶ್ ಜಾರಕಿಹೊಳಿ ಜಿಲ್ಲಾ ಪ್ರವಾಸ ಕೈಗೊಳ್ಳಲು ಹಿಂದೇಟು ಹಾಕಿದ್ದರು ಎಂಬ ವರದಿಗಳ ನಡುವೆಯೇ ಅವರಿಗೆ ಯಾವುದೇ ಜಿಲ್ಲೆಯ ಉಸ್ತುವಾರಿ ಸಹ ನೀಡದಿರುವುದು ನಾನಾ ಊಹಾಪೂಗಳಿಗೆ ಕಾರಣವಾಗಿದೆ.

ರಮೇಶ್ ಜೊತೆಗೆ ಇತರ ಇಬ್ಬರು ಪಕ್ಷಾಂತರಿ ಸಚಿವರಾದ ಗೋಪಾಲಯ್ಯ ಮತ್ತು ಶ್ರೀಮಂತ್ ಪಾಟೀಲ್‌ ಅವರಿಗೂ ಯಾವುದೇ ಉಸ್ತುವಾರಿ ನೀಡಲಾಗಿಲ್ಲ. ಈ ಮಧ್ಯೆ ಯಡಿಯೂರಪ್ಪನವರು ಬೆಂಗಳೂರು ಹೊಣೆಗಾರಿಕೆಯನ್ನು ತಮ್ಮಲ್ಲಿಯೇ ಇಟ್ಟುಕೊಂಡಿದ್ದು ಅಶೋಕ ಅವರಿಗೆ ಗ್ರಮಾಂತರ ಹಾಗೂ ಅಶ್ವತ್ಥ ನಾರಾಯಣ ಅವರಿಗೆ ರಾಮನಗರದ ಉಸ್ತುವಾರಿ ನೀಡಿದ್ದಾರೆ.

ಮೈಸೂರು ಮತ್ತು ಕೊಡಗು ಜಿಲ್ಲೆಗಳನ್ನು ನೋಡಿಕೊಳ್ಳುತ್ತಿದ್ದ ಸೋಮಣ್ಣ ಇನ್ನು ಕೊಡಗಿಗೆ ಮಾತ್ರ ಉಸ್ತುವಾರಿಯಾಗಲಿದ್ದು, ಮೈಸೂರು ಹೊಣೆ ಸೋಮಶೇಖರ್‍ ಅವರ ಹೆಗಲೇರಿದೆ.

ಉಸ್ತುವಾರಿಗಳ ಪಟ್ಟಿ ಇಂತಿದೆ

ಬೆಂಗಳೂರು ನಗರ – ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ
ರಾಮನಗರ – ಡಾ.ಸಿಎಸ್ ಅಶ್ವಥ್ ನಾರಾಯಣ
ರಾಯಚೂರು – ಲಕ್ಷ್ಮಣ್ ಸವದಿ
ಬಾಗಲಕೋಟೆ ಮತ್ತು ಕಲಬುರ್ಗಿ – ಗೋವಿಂದ ಎಂ ಕಾರಜೋಳ
ಶಿವಮೊಗ್ಗ – ಕೆ ಎಸ್ ಈಶ್ವರಪ್ಪ
ಬೆಂಗಳೂರು ಗ್ರಾಮಾಂತರ – ಆರ್ ಅಶೋಕ್
ಬೆಳಗಾವಿ ಮತ್ತು ಧಾರವಾಡ- ಜಗದೀಶ್ ಶೆಟ್ಟರ್
ಚಿತ್ರದುರ್ಗ – ಬಿ ಶ್ರೀರಾಮುಲು
ಚಾಮರಾಜನಗರ – ಎಸ್ ಸುರೇಶ್ ಕುಮಾರ್
ಕೊಡಗು – ವಿ ಸೋಮಣ್ಣ
ಚಿಕ್ಕಮಗಳೂರು – ಸಿ.ಟಿ.ರವಿ
ಹಾವೇರಿ ಮತ್ತು ಉಡುಪಿ – ಬಸವರಾಜ್ ಬೊಮ್ಮಾಯಿ
ದಕ್ಷಿಣ ಕನ್ನಡ – ಕೋಟಾ ಶ್ರೀನಿವಾಸ ಪೂಜಾರಿ
ತುಮಕೂರು ಮತ್ತು ಹಾಸನ – ಜೆ ಸಿ ಮಾಧುಸ್ವಾಮಿ
ಗದಗ – ಸಿಸಿ ಪಾಟೀಲ್
ಕೋಲಾರ – ಹೆಚ್ ನಾಗೇಶ್
ಬೀದರ್ ಮತ್ತು ಯಾದಗಿರಿ – ಪ್ರಭು ಚೌವ್ಹಾಣ
ವಿಜಯಪುರ – ಶಶಿಕಲಾ ಜೊಲ್ಲೆ
ಉತ್ತರ ಕನ್ನಡ – ಶಿವರಾಂ ಹೆಬ್ಬಾರ್
ಮೈಸೂರು – ಎಸ್ ಟಿ ಸೋಮಶೇಖರ್
ಚಿಕ್ಕಬಳ್ಳಾಪುರ – ಡಾ.ಕೆ.ಸುಧಾಕರ್
ಮಂಡ್ಯ – ಕೆಸಿ ನಾರಾಯಣ ಗೌಡ
ಬಳ್ಳಾರಿ – ಆನಂದ್ ಸಿಂಗ್
ದಾವಣಗೆರೆ – ಬಿಎ ಬಸವರಾಜು
ಕೊಪ್ಪಳ – ಬಿಸಿ ಪಾಟೀಲ್

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights