ಬೆಂಗಳೂರಿನಲ್ಲಾದ ಸದ್ದು ಭೂಕಂಪನದ್ದಲ್ಲ: ಹಾಗಿದ್ದರೆ ಮತ್ತೇನು?

ಬೆಂಗಳೂರಿನಲ್ಲಿ ಕೇಳಿಸಿದ ಭಾರೀ ಸದ್ದಿನ ಮೂಲದ ಹಡುಕಾಟ ಇನ್ನೂ ನಡೆಯುತ್ತಿದೆ. ಈ ಮಧ್ಯೆ ಸದ್ದು ಕೇಳಿಸಿದ ಪ್ರದೇಶವೂ ಸೇರಿದಂತೆ ಬೆಂಗಳೂರಿನ ಯಾವುದೇ ಭಾಗದಲ್ಲಿ ಭೂಕಂಪನ ಆಗಿಲ್ಲ ಎಂದು ದೃಢಪಟ್ಟಿದೆ.

ಕಂಪನ ಮಾಪಕಗಳ ಮಾಹಿತಿ ಪ್ರಕಾರ ಬೆಂಗಳೂರಿನಲ್ಲಿ ಭೂಕಂಪಿಸಿದ ಯಾವುದೇ ಘಟನೆ ನಡೆದಿಲ್ಲ. ನಗರದ ಬಹಳಷ್ಟು ಪ್ರದಶಗಳಲ್ಲಿ ಕೇಳಿ ಬಂದ ಸದ್ದು ಭೂಕಂಪನದಿಂದ ಬಂದದ್ದಲ್ಲ ಎಂದು ನೈಸರ್ಗಿಕ ಪ್ರಕೃತಿ ವಿಕೋಪ ಇಲಾಖೆ ಸ್ಪಷ್ಟಪಡಿಸಿದೆ.

ಇದೇ ವೇಳೆ ಬೆಂಗಳೂರಿನಲ್ಲಿ ಯಾವುದೇ ಪ್ರಬಲ ಸ್ಫೋಟ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇವೆರಡೂ ಅಲ್ಲ ಎಂದಾದ ಮೇಲೆ ಸದ್ದಿನ ಮೂಲ ಏನು ಎಂಬುದೇ ಯಕ್ಷ ಪ್ರಶ್ನೆಯಾಗಿದೆ.

ಬೆಂಗಳೂರಿನ ವೈಟ್ ಫೀಲ್ಡ್, ಕೋರಮಂಗಲ, ಜಯನಗರ, ಬಸವನಗುಡಿ, ಎಚ್.ಎಸ್.ಆರ್.ಲೇಔಟ್, ಕೆ.ಆರ್.ಪುರಂ, ಬನ್ನೇರುಘಟ್ಟ ರಸ್ತೆ ಮುಂತಾದ ಕಡೆ ಭೂಕಂಪದಂತೆ ಭಾರಿ ಶಬ್ದ ಕೇಳಿಸಿತ್ತು.

ಶಬ್ದದ ತೀವ್ರತೆಗೆ ಕಟ್ಟಡಗಳು, ಕಿಟಕಿಗಳು ಅಲುಗಾಡಿದವು ಎಂದು ಕೆಲವು ನಾಗರಿಕರು ಟ್ವಿಟರ್‌ನಲ್ಲಿ ಹೇಳಿಕೊಂಡಿದ್ದಾರೆ.

ಬೆಂಗಳೂರಿನಲ್ಲಾದ ಶಬ್ದ ಭೂಕಂಪದ್ದೇ….ನೈಸರ್ಗಿಕ ಪ್ರಕೃತಿ ವಿಕೋಪ ಇಲಾಖೆಯ ಮಾಜಿ ನಿರ್ದೇಶಕ ಪ್ರಕಾಶ್ ಅವರು ಅತಿ‌ಮುಖ್ಯ ಮಾಹಿತಿ ನೀಡಿದ್ದಾರೆ ನೋಡಿ

Posted by EnSuddi on Wednesday, May 20, 2020

ಈ ಶಬ್ದ ಕೇಳುತ್ತಿದ್ದಂತೆಯೇ ಅದರ ಮೂಲದ ಬಗ್ಗೆ ಹಲವು ಜನರು ಹಲವಾರು ರೀತಿ ಮಾತನಾಡಿದರು. ಕೆಲವರು ಭೂಕಂಡ ಎಂದರೆ, ಇನ್ನೂ ಕೆಲರು ವಿಮಾನಗಳ ಡಿಕ್ಕಿ, ಮಿರಾಜ್ ಪತನ, ನಿಗೂಢ ಸ್ಫೋಟ ಎಂದೆಲ್ಲ ವ್ಯಾಖ್ಯಾನಿಸಿದರು.

ಈ ಬಗ್ಗೆ ವಿಮಾನ ನಿಲ್ದಾನದ ಅಧಿಕಾರಿಗಳಿಮದ ಮಾಹಿತಿ ಕೇಳಲಾಗಿದೆ ಎಂದು ಬೆಂಗಳುರು ಪೊಲೀಸ್ ಆಯುಕ್ತ ಭಾಸ್ಕರ್‍ ರಾವ್ ಹೇಳಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights