ಬ್ರಾಹ್ಮಣರ ಬಗ್ಗೆ ಪ್ರಶ್ನೆ ಕೇಳಿ ಸರ್ಕಾರವನ್ನು ಮುಜುಗರಕ್ಕೀಡು ಮಾಡಿದ ಬಿಜೆಪಿ ಶಾಸಕ

ಕಳೆದ ಮೂರು ವರ್ಷಗಳಲ್ಲಿ ಕೊಲ್ಲಲ್ಪಟ್ಟ ಬ್ರಾಹ್ಮಣರ ಸಂಖ್ಯೆಗೆ ಸಂಬಂಧಿಸಿ, ಮುಂಬರುವ ವಿಧಾನಸಭಾ ಅಧಿವೇಶನಕ್ಕೆ ಪ್ರಶ್ನೆ ಹಾಕುವ ಮೂಲಕ ತಮ್ಮದೇ ಪಕ್ಷದ ಸರ್ಕಾರವನ್ನು ಉತ್ತರ ಪ್ರದೇಶದ ಸುಲ್ತಾನಪುರದ ಬಿಜೆಪಿ ಶಾಸಕ ದೇವ್ಮಣಿ ದ್ವಿವೇದಿ ಮುಜುಗರಕ್ಕೀಡು ಮಾಡಿದ್ದಾರೆ.

ಶಾಸಕರು ತಮ್ಮ ‘ಅಲ್ಪಸೂಚಿತ’ (ಅಲ್ಪಾವಧಿಯ) ಪ್ರಶ್ನೆಯನ್ನು ವಿಧಾನಸಭಾ ಸಚಿವಾಲಯಕ್ಕೆ ಭಾನುವಾರ ಸಲ್ಲಿಸಿದರು. ಅಸೆಂಬ್ಲಿ ಅಧಿವೇಶನವು ಆಗಸ್ಟ್ 20 ರಂದು ಪ್ರಾರಂಭವಾಗಲಿದೆ ಎನ್ನಲಾಗಿತ್ತು ಆದರೆ ಕಾರಣಾತರಗಳಿಂದ ಆಗಸ್ಟ್ 21 ಕ್ಕೆ ಮುಂದೂಡಲ್ಪಟ್ಟಿತ್ತು.

ದ್ವಿವೇದಿ ತಮ್ಮ ಪ್ರಶ್ನೆಯಲ್ಲಿ ಕಳೆದ ಮೂರು ವರ್ಷಗಳಲ್ಲಿ ಎಷ್ಟು ಬ್ರಾಹ್ಮಣರನ್ನು ಕೊಲ್ಲಲಾಗಿದೆ ಮತ್ತು ಈ ಅವಧಿಯಲ್ಲಿ ಎಷ್ಟು ಆರೋಪಿಗಳನ್ನು ಬಂಧಿಸಲಾಗಿದೆ ಹಾಗೂ ಎಷ್ಟು ಪ್ರಕರಣದಲ್ಲಿ ಆರೋಪಿಗಳನ್ನು ಶಿಕ್ಷೆಗೊಳಪಡಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ತಿಳಿಯಬೇಕೆಂದು ಒತ್ತಾಯಿಸಿದ್ದಾರೆ.

ರಾಜ್ಯ ಸರ್ಕಾರವು ಬ್ರಾಹ್ಮಣರಿಗೆ ಭದ್ರತೆ ಒದಗಿಸುವ ಯೋಜನೆಯನ್ನು ರೂಪಿಸಿದೆಯೆ? ಹಾಗೂ ಬ್ರಾಹ್ಮಣರಿಗೆ ಆದ್ಯತೆಯ ಆಧಾರದ ಮೇಲೆ ಶಸ್ತ್ರಾಸ್ತ್ರ ಪರವಾನಗಿಗಳನ್ನು ನೀಡುತ್ತದೆಯೇ ಎಂದು ತಿಳಿಯಲು ಶಾಸಕರು ಒತ್ತಾಯಿಸಿದ್ದಾರೆ.

ಶಸ್ತ್ರಾಸ್ತ್ರ ಪರವಾನಗಿಗಾಗಿ ಅರ್ಜಿ ಸಲ್ಲಿಸಿದ ಬ್ರಾಹ್ಮಣರ ಸಂಖ್ಯೆ ಮತ್ತು ಅವರಲ್ಲಿ ಎಷ್ಟು ಜನರಿಗೆ  ಪರವಾನಗಿ ನೀಡಲಾಗಿದೆ ಎಂಬ ಬಗ್ಗೆಯೂ ಅವರು ಸರ್ಕಾರವನ್ನು ಕೇಳಿದ್ದಾರೆ.

ಶಾಸಕಾಂಗದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಶಾಸಕರೊಬ್ಬರು ಈ ರೀತಿ ಜಾತಿ ಆಧಾರಿತವಗಿ ಪ್ರಶ್ನೆಯನ್ನು ಕೇಳಿದ್ದಾರೆ. ರಾಜ್ಯ ವಿಧಾನಸಭೆಯಲ್ಲಿ ಸಲ್ಲಿಸಲಾದ ಶಾಸಕರ ಪ್ರಶ್ನೆಯಿಂದಾಗಿ ರಾಜ್ಯ ಸರ್ಕಾರದ ಮೇಲೆ ಪ್ರತಿಪಕ್ಷಗಳು ದಾಳಿ ನಡೆಸಿದ್ದಾರೆ.


ಇದನ್ನೂ ಓದಿPM Cares ನಿಧಿಯಿಂದ NDRFಗೆ ಹಣ ವರ್ಗಾವಣೆ ಮಾಡುವಂತಿಲ್ಲ: ಸುಪ್ರೀಂ ಕೋರ್ಟ್‌

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights