ಮತ್ತೊಂದು ಹಿರಿಮೆಗೆ ಪಾತ್ರವಾದ ಇಸ್ರೋ : ಪಿಎಸ್‌ಎಲ್‌ವಿ 48 ಉಪಗ್ರಹ ಉಡಾವಣೆ

ದೇಶದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಇಂದು ಮತ್ತೊಂದು ಹಿರಿಮೆಗೆ ಪಾತ್ರವಾಗಿದೆ. ದೇಶೀ ನಿರ್ಮಿತ ದೂರ ಸಂವೇದಿ ಉಪಗ್ರಹ ಆರ್‌ಐಸ್ಯಾಟ್‌ 2 ಬಿಆರ್‌ 1 ಉಪಗ್ರಹ ಉಡಾವಣೆ ಯಶಸ್ವಿಯಾಗಿದೆ. ಇಂದು ಮಧ್ಯಾಹ್ನ 3.25ಕ್ಕೆ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಪಿಎಸ್‌ಎಲ್‌ವಿ 48 ಉಪಗ್ರಹ ಉಡಾವಣೆಯಾಗಿದ್ದು, ವಿಜ್ಞಾನಿಗಳ ಶ್ರಮ ಫಲಿಸಿದೆ.

ಪ್ರತೀಕೂಲ ಹವಾಮಾನದಲ್ಲಿಯೂ ದಿನದ 24 ಗಂಟೆಯೂ ಭೂಮಿ ಚಿತ್ರವನ್ನು ತೆಗೆಯಬಲ್ಲ ಸಾಮರ್ಥ್ಯವನ್ನು ಈ ರೆಡಾರ್‌ ಇಮೆಜಿಂಗ್‌ ನ್ನು ಈ ಉಪಗ್ರಹ ಹೊಂದಿದೆ. ಇದರ ಜತೆಗೆ 9 ಚಿಕ್ಕ ಉಪಗ್ರಹವನ್ನು ಉಡಾವಣೆ ಮಾಡಲಾಗಿದೆ. ಪಿಎಸ್‌ಎಲ್‌ವಿ ರಾಕೆಟ್‌ ಸರಣಿಯ 50ನೇ ರಾಕೆಟ್‌ ಇದಾಗಿದೆ. ಇನ್ನು ಸತೀಶ್‌ ಧವನ್‌ ಕೇಂದ್ರದಿಂದ ಉಡಾವಣೆಯಾದ 75ನೇ ಉಪಗ್ರಹ ಎಂಬುದು ಮತ್ತೊಂದು ಹೈಲೈಟ್. ಈ ಉಪಗ್ರಹವು 628 ಕೆಜಿ ಹೊಂದಿದ್ದು, ಅಮೆರಿಕದ 6 ಉಪಗ್ರಹಗಳು, ಇಟಲಿ, ಜಪಾನ್‌, ಇಸ್ರೇಲ್‌ನ ಉಪಗ್ರಹಗಳನ್ನು ಹೊತ್ತು ಪಿಎಸ್‌ಎಲ್‌ವಿ ನಭಕ್ಕೆ ಜಿಗಿದಿದೆ. ಈ ಉಪಗ್ರಹ ಉಡಾವಣೆಯನ್ನು ಇಸ್ರೋ ಇದೊಂದು ಐತಿಹಾಸಿಕ ಕಾರ್ಯಾಚರಣೆ ಎಂತಲೇ ಬಣ್ಣಿಸಿದೆ.

ಇಸ್ರೋ ಉಡಾವಣೆಗೊಳಿಸಿದ ಈ ಉಪಗ್ರಹ ಬಾಹ್ಯಾಕಾಶದಲ್ಲಿ ಭಾರತದ 2ನೇ ಗುಪ್ತಚರ ಕಣ್ಣು ಎಂದೇ ಕರೆಯಲ್ಪಡುತ್ತಿದೆ. ಕಳೆದ ಮೇ 22 ರಂದು ಉಡಾವಣೆಯಾಗಿದ್ದ ರಿಸಾಟ್ -2 ಬಿ ಈಗಾಗಲೇ ದೇಶದ ಗುಪ್ತಚರ ದೃಷ್ಟಿಗೆ ಕೆಲಸ ಮಾಡುತ್ತಿದೆ. ಮೈಕ್ರೋವೇವ್​ ಫ್ರೀಕ್ವೆನ್ಸಿಯ ಮೂಲಕ ಭೂಮಿಯ ಮೇಲಿನ ಚಿತ್ರಗಳನ್ನು ಸೆರೆಹಿಡಿಯಬಲ್ಲ ಈ ಉಪಗ್ರಹ, ಸೇನೆಗೆ ಅಗತ್ಯ ಬಿದ್ದಾಗಲೆಲ್ಲಾ, ದೇಶದ ಯಾವುದೇ ಗಡಿಯ ಫೋಟೋಗಳನ್ನು ಬೇಕಾದರೂ ತೆಗೆದುಕೊಡಲಿದೆ. ಅಷ್ಟೇ ಅಲ್ಲದೆ ಮೋಡಗಳನ್ನು ತೂರಿಕೊಂಡು, ಪ್ರತಿ ಹಗಲು ಹಾಗೂ ಪ್ರತಿ ರಾತ್ರಿಯು ಇಮೇಜ್​ ಗಳನ್ನು ಸೆರೆಹಿಡಿಯಲಿದೆ. ರಿಸಾಟ್ -2 ಬಿಆರ್ 1 ರಲ್ಲಿ ಸ್ಥಾಪಿಸಲಾದ ವಿಶೇಷ ಸಂವೇದಕದಿಂದಾಗಿ, ಗಡಿಯಾಚೆಗಿನ ಭಯೋತ್ಪಾದಕರ ಸಜ್ಜುಗೊಳಿಸುವಿಕೆಯನ್ನು ಸಹ ಮೊದಲೇ ವರದಿ ಮಾಡಬಹುದಾಗಿದೆ…

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights