ಮದ್ಯದಂಗಡಿಯಾದ ಚಿಕ್ಕಮಗಳೂರು ಜಿಲ್ಲಾಸ್ಪತ್ರೆ : ಅಧಿಕಾರಿಗಳ ವಿರುದ್ಧ ಜನರ ಆಕ್ರೋಶ

ರೋಗ್ಯಗಳಿಗೆ ಚಿಕಿತ್ಸೆ ನೀಡಬೇಕಾದ ಚಿಕ್ಕಮಗಳೂರು ಜಿಲ್ಲಾಸ್ಪತ್ರೆ ಮದ್ಯ ಸೇವಿಸೋ ಅಡ್ಡೆಯಾಗಿದೆ.

ಹೌದು… ನಿಮಗೆ ಕೇಳಿದ್ರೆ ಆಶ್ಚರ್ಯ ಅನಿಸಬಹುದು ಆದರೂ ಇದು ನಿಜಾನೇ. ಚಿಕ್ಕಮಗಳೂರು ಜಿಲ್ಲಾಸ್ಪತ್ರೆ ಅಕ್ಷರಶ: ಮದ್ಯದಂಗಡಿಯಾಗಿ ಹೋಗಿದೆ. ವಾಷ್ ರೂಂ, ಟಾಯ್ಲೆಟ್ ರೂಂ ಎಲ್ಲೆಂದರಲ್ಲಿ ಹಾಲ್ಕೋಹಾಲ್ ಬಾಟೆಲ್, ಪ್ಯಾಕೇಟ್ ಗಳು ರಾರಾಜಿಸುತ್ತಿರುವ ದೃಶಯಗಳು ಕಂಡು ಬಂದಿವೆ. ಎಣ್ಣೆ ಕುಡಿದ ಕುಡುಕರು ಗೋಡೆ ಮೇಲೆ ಪ್ಯಾಕೇಟ್ ಗಳನ್ನು ಸಾಲಾಗಿ ಜೋಡಿಸಿದ್ದಾರೆ.

ಸರ್ಕಾರಿ ಆಸ್ಪತ್ರೆ ಸಿಬ್ಬಂದಿಗಳ ನಿರ್ಲಕ್ಷ್ಯಕ್ಕೆ ರೋಗಿಗಳು ಹೈರಾಣಾಗಿ ಹೋಗಿದ್ದಾರೆ. ಟಾಯ್ಲೆಟ್, ವಾಷ್ ರೂಂಗೆ ಹೋಗಲು ರೋಗಿಗಳಿಗೆ ಮುಜುಗರ ಉಂಟಾಗುತ್ತಿದ್ದು, ಸಾಮಾಜಿಕ ಜಾಲ ತಾಣಗಳಲ್ಲಿ ಆಸ್ಪತ್ರೆಯ ಮದ್ಯದ ಅವಾಂತರ ವೈರಲ್ ಆಗಿದೆ.

ಸ್ವಚ್ಛತೆಗೆ ಆದ್ಯತೆ ಕೊಡದ ಅಧಿಕಾರಿಗಳ ವಿರುದ್ಧ ಜನರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights