ಮಲಗಿದ್ದವರ ಮೇಲೆ ಟ್ರಕ್‌ ಹರಿದು ಮೂವರು ಕಾರ್ಮಿಕರ ದುರ್ಮರಣ

ಬಿಹಾರದ ಗೋಪಾಲ್ಗಂಜ್ ಜಿಲ್ಲೆಗೆ ತೆರಳುತ್ತಿದ್ದ ಮೂವರು ವಲಸೆ ಕಾರ್ಮಿಕರು ಶುಕ್ರವಾರ ಉತ್ತರ ಪ್ರದೇಶದ ಮಿರ್ಜಾಪುರ ಜಿಲ್ಲೆಯಲ್ಲಿನ ಖಾಲಿ ರಸ್ತೆಯಲ್ಲಿ ಮಲಗಿದ್ದಾಗ ಟ್ರಕ್ ಅವರ ಮೇಲೆ ಹಾರಿ ಸಾವನ್ನಪ್ಪಿದ್ದಾರೆ.

ಸಾವಿಗೀಡಾಗಿರುವವರನ್ನು ರಾಜು ಸಿಂಗ್ (23), ಅಮಿತ್ ಸಿಂಗ್ (26) ಮತ್ತು ಸೌರಭ್ ಕುಮಾರ್ (23) ಎಂದು ಗುರುತಿಸಲಾಗಿದೆ. ಕಾರ್ಮಿಕರು ಮುಂಬೈನ ಅಂಧೇರಿಯ ತಿಂಗಳಿಗೆ 10,000 ಸಂಬಳಕ್ಕೆ ಕೆಲಸ ಮಾಡುತ್ತಿದ್ದರು.

ಸೋದರಸಂಬಂಧಿಗಳಾಗಿದ್ದ ಮೂವರು ಮುಂಬೈಯಿಂದ ಬಿಹಾರದಲ್ಲಿರುವ ತಮ್ಮ ಮನೆಗೆ ಹೋಗಲು 70,000 ರೂ.ಗೆ ಕಾರನ್ನು ಬಾಡಿಗೆಗೆ ಪಡೆದಿದ್ದರು. ಬಾಡಿಗೆಯ ವೆಚ್ಚ ಭರಿಸುವುದಕ್ಕಾಗಿ ಅವರ ಕುಟುಂಬಗಳು ತಮ್ಮ ಹಳ್ಳಿಯಲ್ಲಿ ಹಣಹೊಂದಿದ್ದವರಿಂದ ಸಾಲವನ್ನು ಪಡೆದು ಹಣ ಹೊಂದಿಸಿದ್ದರು. ಕಾರಿನಲ್ಲಿ ಈ ಮೂವರಲ್ಲದೆ ಇತರ ನಾಲ್ವರು ವಲಸೆ ಕಾರ್ಮಿಕರು ಹಾಗು ಚಾಲಕ ಸೇರಿ ಎಂಟು ಮಂದಿ ಪ್ರಯಾಣಿಸುತ್ತಿದ್ದರು.

“ಬೆಳಿಗ್ಗೆ 5 ರಿಂದ 6 ಗಂಟೆಯ ಸಮಯದಲ್ಲಿ ಅಪಘಾತ ಸಂಭವಿಸಿದ್ದು, ಚಾಲಕ ಬದುಕುಳಿದಿದ್ದಾರೆ. ಮೂವರು ವಲಸೆ ಕಾರ್ಮಿಕರು ಸಾವನ್ನಪ್ಪಿದರು. ಸಾವಿಗೀಡಾದವರು ಮತ್ತು ಬದುಕುಳಿದವರನ್ನು ಪ್ರತ್ಯೇಕ ವಾಹನಗಳಲ್ಲಿ ಆಸ್ಪತ್ರೆಗೆ ರವಾನಿಸಲಾಗಿದೆ. ನಾಲ್ವರು ಗೋಪಾಲ್‌ಗಂಜ್ ಮೂಲದವರು, ಮೂವರು ಬಿಹಾರದ ವೈಶಾಲಿ ಮೂಲದವರಾಗಿದ್ದು, ಗೋಪಾಲ್‌ಗಂಜ್ ಮೂಲದ ನಾಲ್ವರಲ್ಲಿ ಮೂವರು ಮೃತಪಟ್ಟಿದ್ದಾರೆ” ಎಂದು ಮಿರ್ಜಾಪುರ ಎಸ್‌ಪಿ ಧರ್ಮವೀರ್ ಸಿಂಗ್ ಹೇಳಿದ್ದಾರೆ.

ಘಟನೆ ಸಂಭವಿಸಿದಾಗ ಮುಖ್ಯ ರಸ್ತೆಯಿಂದ 40 ಅಡಿ ದೂರದಲ್ಲಿರುವ ಮನೆಯ ಹೊರಗೆ ಕಾರ್ಮಿಕರು ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ಎಸ್‌ಪಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

“ಕಾರಿನಲ್ಲಿ ಮೂವರು ಮಲಗಿದ್ದರೆ, ಹೊರಗೆ ಹುಲ್ಲಿನ ಮೇಲೆ ನಾಲ್ಕು ಜನರು ಮಲಗಿದ್ದರು. ಖಾಲಿ ಟ್ರಕ್ ನಿಯಂತ್ರಣ ಕಳೆದುಕೊಂಡು ಕಾರ್ಮಿಕರ ಮೇಲೆ ಹರಿದಿದೆ. ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದರು. ಆಸ್ಪತ್ರೆಯಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ಆರೋಪಿಯನ್ನು ಬಂಧಿಸಲಾಗಿದೆ” ಎಂದು ಎಸ್‌ಪಿ ತಿಳಿಸಿದ್ದಾರೆ.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಮೃತರ ಕುಟುಂಬಗಳಿಗೆ 2 ಲಕ್ಷರೂ ಪರಿಹಾರ ಘೋಷಿಸಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights