ಮಹಿಳೆಯ ಫೋಟೋಗೆ ಕುಡಿಕೆ, ಯಂತ್ರಕಟ್ಟಿ ವಾಮಾಚಾರ : ಆ ಮಹಿಳೆ ಯಾರು..?

ಮಹಿಳೆಯ ಫೋಟೋಗೆ ಕುಡಿಕೆ, ಯಂತ್ರಕಟ್ಟಿ ವಾಮಾಚಾರ ಮಾಡಿದ ಘಟನೆ ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿ  ನಡೆದಿದೆ.

ಹೌದು.. ಕೋಡಂಬಳ್ಳಿ-ಸಿಂಗರಾಜಿಪುರ ಗ್ರಾಮದ ಮಧ್ಯದಲ್ಲಿರುವ ಜಮೀನಿನಲ್ಲಿ  ಮಹಿಳೆಯ ಫೋಟೋಕ್ಕೆ ವಾಮಾಚಾರ ಮಾಡಿದ ಭಯಾನಕ ದೃಶ್ಯ ಕಂಡು ಬಂದಿದೆ.

ಜಮೀನಿನಲ್ಲಿದ್ದ ಜಗಳಗಂಟಿ ಹೆಸರಿನ ಮರಕ್ಕೆ ಫೋಟೋ ಕಟ್ಟಿ, ಕುಡಿಕೆ, ಯಂತ್ರಕಟ್ಟಿ ವಾಮಾಚಾರ ಮಾಡಲಾಗಿದೆ. ಆ ಮಹಿಳೆ ಯಾರು, ಯಾವ ಊರು ಎಂಬುದು ತಿಳಿದುಬಂದಿಲ್ಲ. ಹೋಲದಲ್ಲಿ ಕಂಡ ಈ ದೃಶ್ಯವನ್ನು ಸೆರೆ ಹಿಡಿದ ಜನ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದು,  ವಾಮಾಚಾರ ಘಟನೆ ತೀವ್ರ ಕುತೂಹಲ ಕೆರಳಿಸಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights