ಮೈಸೂರು ಅರಮನೆ ಆವರಣದಲ್ಲಿ ಫಿರಂಗಿಗಳ ಜೊತೆ ಪೊಲೀಸರ ತಾಲೀಮು…

ವಿಶ್ವವಿಖ್ಯಾತ ಮೈಸೂರು ದಸರಾ ಹಬ್ಬ ಇನ್ನೇನು ದೂರವಿಲ್ಲ. ಹೀಗಾಗಿ ನಾಡ ಹಬ್ಬದ ಆಚರಣೆಗೆ ಸಕಲ ಸಿದ್ದತೆಗಳು ನಡೆಯುತ್ತಿವೆ. ನಗರ ಸಶಸ್ತ್ರ ಮೀಸಲು ಪಡೆ ಸಿಬ್ಬಂದಿಗಳಿಂದ ಪೂರ್ವಾಭ್ಯಾಸ ಮಾಡಲಾಗುತ್ತಿದೆ.
ಮೈಸೂರು ಅರಮನೆ ಆವರಣದಲ್ಲಿ 3 ಫಿರಂಗಿಗಳ ಜೊತೆ ಪೊಲೀಸರ ತಾಲೀಮು ಮಾಡುತ್ತಿದ್ದಾರೆ.

ಜಂಬೂಸವಾರಿಯಲ್ಲಿ ಪುಷ್ಪಾರ್ಚನೆ ಸಲ್ಲಿಸುವ ವೇಳೆ ರಾಷ್ಟ್ರಗೀತೆ ಮುಗಿಯುವ ಅವಧಿಯ ಒಳಗೆ 21 ಕುಶಲತೋಪು ಹಾರಿಸುವ ಸಂಪ್ರದಾಯ ಇದೆ. ನಿನ್ನೆ ನಗರ ಪೊಲೀಸರಿಗೆ ಹಸ್ತಾಂತರಗೊಂಡ ಫಿರಂಗಿಗಳು, ಈ ಹಿನ್ನಲೆ ಪ್ರಾಮುಖ್ಯತೆ ಪಡೆಯುವ ತಾಲೀಮು ನಡೆಸಲಾಗುತ್ತದೆ.

ಪ್ರತಿದಿನ 3 ಹಂತದಲ್ಲಿ ನಡೆಯುವ ತಾಲೀಮುನಲ್ಲಿ 30 ಕ್ಕೂ ಹೆಚ್ಚು ಸಿಬ್ಬಂದಿಗಳಿಂದ ಪಾಳ್ಗೊಳ್ಳುತ್ತಾರೆ. ಫಿರಂಗಿಗಳ ಮೂಲಕ ಸಿಡಿಮದ್ದುಗಳನ್ನ ಸಿಡಿಸಿ ಗಜಪಡೆ ಗೆ ಭಾರಿ ಶಬ್ಧ ಪರಿಚಯ ಮಾಡಿಸಲಲಾಗುತ್ತಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights