ಮೋದಿ ಘೋಷಿಸಿದ 20 ಲಕ್ಷ ಕೋಟಿ ಯಾರಿಗೆ ಕೊಟ್ಟಿದ್ದಾರೆ- ಲೆಕ್ಕಕೊಡಿ: ಡಿಕೆಶಿ

ಮಾಜಿ ಮುಖ್ಯಮಂತ್ರಿ ದೇವರಾಜ್ ಅರಸು ಜನ್ಮದಿನದ ಭಾಗವಾಗಿ ರಾಜ್ಯದ ಬಿಜೆಪಿ ಸರ್ಕಾರ ಜಾರಿಗೊಳಿಸಿರುವ ಜನವಿರೋಧಿ, ರೈತ ವಿರೋಧಿ ಕಾಯ್ದೆಗಳ ವಿರುದ್ಧ ಕಾಂಗ್ರೆಸ್‌ ಪ್ರತಿಭಟನೆ ನಡೆಸಿದ್ದು, ಕೊರೊನಾ ಸಂಕಷ್ಟಕ್ಕಾಗಿ ಮೋದಿ ಸರ್ಕಾರ ಘೋಷಿಸಿದ 20 ಲಕ್ಷ ಕೋಟಿ ಯಾರಿಗೆ ಸೇರಿದೆ, ಸರ್ಕಾರ ಆ ಮೊತ್ತವನ್ನು ಯಾರಿಗೆ ಕೊಟ್ಟಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ.

ರಾಜೀವ್ ಗಾಂಧಿ ಮತ್ತು ದೇವರಾಜ ಅರಸು ಇಬ್ಬರು ದೊಡ್ಡ ನಾಯಕರು. ಪಂಚಾಯತ್‌ನಿಂದ ಹಿಡಿದು ಸಂಸತ್‌ವರೆಗೂ ನಾಯಕರು ಇರಬೇಕು. ಹಾಗಾಗಿ ಈ ಇಬ್ಬರು ನಾಯಕರು ಸಾಕಷ್ಟು ನಾಯಕರನ್ನು ತಯಾರು ಮಾಡಿದರು. ದೇಶದಲ್ಲಿ ಭವಿಷ್ಯಕ್ಕಾಗಿ ಹೊಸ ನಾಯಕರನ್ನು ತಯಾರು ಮಾಡಬೇಕು ಎಂದು ರಾಜೀವ್ ಗಾಂಧಿ ಹೇಳಿದರು.  ಅವರುಗಳಲ್ಲಿ ನಾನು ಒಬ್ಬ. ದೇವರಾಜ ಅರಸು ಬಡವರಿಗೆ ಭೂಮಿ ಹಂಚುವ ಕೆಲಸ ಮಾಡಿದರು. ಮನೆ ಇಲ್ಲದ ಬಡವರಿಗೆ ಮನೆ ಕೊಡುವ ಕೆಲಸವನ್ನು ಕಾಂಗ್ರೆಸ್ ಮಾಡಿದೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ರಾಜೀವ್ ಗಾಂಧಿ ಕೊಡುಗೆ ಅಪಾರ. ದೇಶದಲ್ಲಿ ಡಿಜಿಟಲ್ ಕ್ರಾಂತಿ ಮಾಡಿದ್ದು ರಾಜೀವ್ ಗಾಂಧಿ. ಭಾರತವನ್ನು ಇವತ್ತು ಇಡೀ ವಿಶ್ವ ನೋಡುತ್ತಾ ಇದೆ ಅಂದರೆ ಅದಕ್ಕೆ ಕಾರಣ ರಾಜೀವ್ ಗಾಂಧಿ ಎಂದು ಡಿಕೆಶಿ ಹೇಳಿದ್ದಾರೆ.

ಜನಧ್ವನಿ ಬಿಜೆಪಿ ಸರ್ಕಾರದ ಬ್ರಹ್ಮಾಂಡ ಭ್ರಷ್ಟಾಚಾರ ವಿರುದ್ಧ ಮೊಳಗಬೇಕು. ರಾಜ್ಯದ 25 ಬಿಜೆಪಿ ಸಂಸದರು ಎಲ್ಲಿ ಹೋಗಿದ್ದಾರೆ. ಕಳೆದ ವರ್ಷದ ನೆರೆ ಪರಿಹಾರ ಕೇಳಿದಷ್ಟು ಬಂದಿಲ್ಲ. ಈ ಬಾರಿಯಾದರೂ ಬಿಜೆಪಿಯ 25 ಸಂಸದರು ಪ್ರಧಾನಿ ಬಳಿ ಪರಿಹಾರ ಕೇಳಲಿ. ಸರ್ಕಾರ ಘೋಷಣೆ ಮಾಡಿದ ಪರಿಹಾರ ಇನ್ನು ಸಿಕ್ಕಿಲ್ಲ. ಚಾಲಕರಿಗೆ 5000 ರೂಪಾಯಿ ಪರಿಹಾರ ಇನ್ನು ಬಂದಿಲ್ಲ. ಪ್ರಧಾನಿ ಘೋಷಣೆ ಮಾಡಿದ 20 ಲಕ್ಷ ಕೋಟಿ ಯಾರಿಗೆ ಕೊಟ್ಟಿದ್ದೀರಾ ಅಂತ ಮಾಹಿತಿ ನೀಡಲಿ. ಯಾರು ಯಾರಿಗೆ ಹಣ ಕೊಟ್ಟಿದ್ದೀರಾ ಅಂತ ದಾಖಲೆ ನೀಡಲಿ. ಕೊರೊನಾದಿಂದ ಸಾಕಷ್ಟು ಜನರು ಸಮಸ್ಯೆ ಅನುಭವಿಸುತ್ತಿದ್ದಾರೆ. ಜನರ ಶಾಪ ಸರ್ಕಾರಕ್ಕೆ ತಟ್ಟುತ್ತೆ ಎಂದು ಡಿಕೆಶಿ ಹೆಳಿದ್ದಾರೆ.


Read Also:  ಒಂದೇ ತಿಂಗಳಿನಲ್ಲಿ 50 ಲಕ್ಷ ಉದ್ಯೋಗ ನಷ್ಟ: 4 ತಿಂಗಳಲ್ಲಿ ಉದ್ಯೋಗ ಕಳೆದುಕೊಂಡವರ ಸಂಖ್ಯೆ 1.89 ಕೋಟಿ


Read Also: Fact Check: ಹಿಂದೂ ರಾಷ್ಟ್ರ ನಿರ್ಮಾಣಕ್ಕೆ ಯೋಗಿ ನೆರವು; ಧನ್ಯವಾದ ಹೇಳಿ ಪತ್ರ ಬರೆದಿದ್ದರೇ ಮೋದಿ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights