ವಂಚನೆ ಆರೋಪದ ಹಿನ್ನೆಲೆ ಮಾಜಿ ಭಕ್ತೆಯಿಂದ ನಿತ್ಯಾನಂದನ ವಿರುದ್ಧ ದೂರು….!
ಸ್ವಯಂ ಘೋಷಿತ ದೇವಮಾನವ ನಿತ್ಯಾನಂದನಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ವಂಚನೆ ಆರೋಪದ ಹಿನ್ನೆಲೆಯಲ್ಲಿ ನಿತ್ಯನ ಮಾಜಿ ಭಕ್ತೆ ಫ್ರ್ಯಾನ್ಸ್ ಪೊಲೀಸರಿಗೆ ದೂರು ನೀಡಿದ್ದು, ಈ ಹಿನ್ನೆಲೆಯಲ್ಲಿ ಎಮ್ಯಾನುಯೆಲ್ ಮ್ಯಾಕ್ರನ್ ನೇತೃತ್ವದ ಫ್ರೆಂಚ್ ಸರ್ಕಾರ ನಿತ್ಯಾನಂದನ ವಿರುದ್ಧ ತನಿಖೆ ಕೈಗೊಂಡಿದೆ.
ನಿತ್ಯಾನಂದನ ಮಾಜಿ ಭಕ್ತೆ ಹಾಗೂ ಫ್ರೆಂಚ್ ಪ್ರಜೆ ನಿತ್ಯಾನಂದ ತನಗೆ 285 ಕೋಟಿ ರೂ. ವಂಚನೆ ಮಾಡಿದ್ದಾರೆ ಎಂದು ತನ್ನ ದೂರಿನಲ್ಲಿ ತಿಳಿಸಿದ್ದಾರೆ. ಹೀಗಾಗಿ ಫ್ರಾನ್ಸ್ ನ ಆಂತರಿಕ ಸಚಿವಾಲಯವು ನಿತ್ಯಾನಂದನ ವಿರುದ್ಧ ವಂಚನೆಯ ವಿವರಗಳನ್ನು ಸಂಗ್ರಹಿಸುತ್ತಿದೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ. ಇನ್ನು ತನಿಖೆಯ ಭಾಗವಾಗಿ, ಫ್ರೆಂಚ್ ಸರ್ಕಾರವು ನಿತ್ಯಾನಂದನ ಬ್ಯಾಂಕ್ ಖಾತೆಯ ವಿವರಗಳನ್ನು ಸಹ ಕೋರಿದೆ ಎಂದು ತಿಳಿದುಬಂದಿದೆ. ಫ್ರಾನ್ಸ್ ಮೂಲದ ಅನೇಕ ಭಕ್ತರು ದೂರು ನೀಡಿದ ನಂತರ, ಎಮ್ಯಾನುಯೆಲ್ ಮ್ಯಾಕ್ರೋನ್ ಸರ್ಕಾರವು ತನಿಖೆ ಆರಂಭಿಸಿದೆ.