ವಿವಾದಾತ್ಮಕ ಹಾಂಕಾಂಗ್ ಭದ್ರತಾ ಕಾನೂನಿಗೆ ಚೈನಾ ಸಂಸತ್ತು ಒಪ್ಪಿಗೆ; ಹಾಂಕಾಂಗ್ ನಲ್ಲಿ ಆಕ್ರೋಶ

ಹಾಂಕಾಂಗ್ ಮೇಲೆ ವಿವಾದಾತ್ಮಕ ರಾಷ್ಟ್ರೀಯ ಭದ್ರತಾ ಕಾನೂನನ್ನು ಹೇರಲು ಚೈನಾ ಸಂಸತ್ತು ಒಪ್ಪಿಗೆ ಸೂಚಿಸಿದ್ದು, ಬೀಜಿಂಗ್ ನಿಯಂತ್ರಣದಲ್ಲಿ ಇದ್ದರೂ ಪಾರ್ಶ್ವ ಸ್ವಾಯತ್ತತೆ ಹೊಂದಿದ್ದ ಅರ್ಹತೆಯನ್ನೂ ಈಗ ಹಾಂಕಾಂಗ್ ಕಳೆದುಕೊಳ್ಳಲಿದೆ.

ಚೈನಾದ ರಾಷ್ಟ್ರೀಯ ಪೀಪಲ್ಸ್ ಕಾಂಗ್ರೆಸ್ ಗುರುವಾರ ಈ ಹೊಸ ಮಸೂದೆ ಜಾರಿಯಾಗಲು ಕಾರಣವಾಗಿದ್ದು, ಹಾಂಕಾಂಗ್ ನಲ್ಲಿ ದೇಶದ್ರೊಹಿ ವಿರೋಧಿ ಕಾನೂನುಗಳನ್ನು ನೇರವಾಗಿ ಹೇರಲು ಇದು ಸಾಧ್ಯ ಮಾಡುತ್ತದೆ.

ಕಳೆದ ವರ್ಷ ಬೀಜಿಂಗ್ ವಿರುದ್ಧ ಹಾಂಕಾಂಗ್ ನಲ್ಲಿ ಹಲವು ಪ್ರತಿಭಟನೆಗಳು ಜರುಗಿದ್ದವು. ಈಗಿನ ಹೊಸ ಕಾನೂನು ಹಾಂಕಾಂಗ್ ಸ್ವಾಯತ್ತತೆಗೆ ಕೊನೆಯ ಮೊಳೆ ಎನ್ನಲಾಗುತ್ತಿದೆ ಮತ್ತು ಹಾಂಕಾಂಗ್ ನಗರದಲ್ಲಿ ಚೈನಾ ಭದ್ರತ ಪಡೆಗಳಿಗೂ ಅವಕಾಶ ಮಾಡಿಕೊಡುತ್ತದೆ.

ಇದಕ್ಕೆ ಹಾಂಕಾಂಗ್ ನಗರವಾಸಿಗಳಿಂದ ತೀವ್ರ ವಿರೋಧ ಕೇಳಿಬಂದಿದೆ. ಸರ್ಕಾರವನ್ನು ಟೀಕಿಸುವವರನ್ನು ಚೈನಾಕ್ಕೆ ವರ್ಗಾಯಿಸಿ ಶಿಕ್ಷಿಸಲು ಚೈನಾ ಇನ್ನುಮುಂದೆ ಎಗ್ಗಿಲ್ಲದೆ ಮುಂದಾಗುತ್ತದೆ ಎಂಬ ಆತಂಕವನ್ನು ನಾಗರಿಕರು ವ್ಯಕ್ತಪಡಿಸಿದ್ದಾರೆ.

ಒಂದೇ ಒಂದು ವಿರೋಧಿ ಮತ ಬಂದಿದ್ದು ಬಹುಮತದಿಂದ ಈ ಕಾನೂನು ಪಾಸ್ ಆಗಿದೆ. ಚೈನಾ ಸಂಸತ್ತು ರಬ್ಬರ್ ಸ್ಟಾಂಪ್ ಎಂದೇ ಪ್ರಖ್ಯಾತ. ಈ ಕಾನೂನಿನ ವಿವರಗಳನ್ನು ಮುಂದಿನ ಕೆಲವು ವಾರಗಳಲ್ಲಿ ಮಂಡಿಸಲಾಗುತ್ತದೆ ಎಂದಿ ಚೈನಾ ರಾಷ್ಟ್ರ ಮಾಧ್ಯಮ ತಿಳಿಸಿದೆ.

ಗುರುವಾರ ಹಾಂಕಾಂಗ್ ನಲ್ಲಿ ಏಳಬಹುದಾದ ಪ್ರತಿಭಟನೆಗಳನ್ನು ತಡೆಯಲು ಗಲಭೆ ಪೊಲೀಸರನ್ನು ನಿಯೋಜಿಸಲಾಗಿದೆ. ಮುಂಜಾಗ್ರತವಾಗಿ ಬುಧವಾರವೇ ಸುಮಾರು 360 ಜನರನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights