ವಿಶ್ವದ ಬಲಾಢ್ಯ ದೇಶದಲ್ಲಿ ಕೊರೊನಾದ ರೌದ್ರನರ್ತನ :24 ಗಂಟೆಯಲ್ಲಿ 3176 ಜನ ಬಲಿ!

ಡೆಡ್ಲಿ ಕೋವಿಡ್-19 ವಿಶ್ವದ ದೊಡ್ಡಣ್ಣನ ನಾಶಕ್ಕೆ ಪಣತೊಟ್ಟು ನಿಂತಂತೆ ಕಾಣುತ್ತಿದೆ. ಕೊರೊನಾ ವೈರಸ್ ಹರಡಿದ ದೇಶಗಳ ಪೈಕಿ ಅಮೆರಿಕಾದಲ್ಲಿ ಸೋಂಕಿತರು ಹಾಗೂ ಸಾವಿನ ಸಂಖ್ಯೆ  ದಿನದಿಂದ ದಿನಕ್ಕೆ ಏರಿಕೆಯಾಗುತ್ತಲಿದೆ. ಕೊರೊನಾ ಚಾಟಿಗೆ ಏಟಿಗೆ ಅಮೆರಿಕಾ ಛಿದ್ರವಾಗಿ ಹೋಗುತ್ತಿದೆ.

ಕಿಲ್ಲರ್ ಕೊರೊನಾ ವೈರಸ್‌ಗೆ ಯುಎಸ್‌ನಲ್ಲಿ ಸಾವಯುತ್ತಿರುವವರ ಸಂಖ್ಯೆ ದೊಡ್ಡ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು ದೊಡ್ಡ ತಲೆ ನೋವಾಗಿ ಪರಿಣಮಿಸಿದೆ. ಸುಮಾರು 8.8 ಲಕ್ಷಕ್ಕೂ ಅಧಿಕ ಜನರಿಗೆ ಯುಎಸ್‌ನಲ್ಲಿ ಕೊವಿಡ್ ಸೋಂಕು ತಗುಲಿದ್ದು, ಸುಮಾರು 49,845  ಜನ ಮೃತಪಟ್ಟಿದ್ದಾರೆ ಎಂದು ವರದಿಗಳು ಹೇಳುತ್ತಿದೆ.

ಅಮೆರಿಕಾದಲ್ಲಿರುವ ಹುಲಿ, ಸಿಂಹ, ಬೆಕ್ಕು ಮೂಖಪ್ರಾಣಿಗಳಿಗೂ ಹರಡಿದ ಕೊರೊನಾ ವೈರಸ್ 24 ಗಂಟೆಯಲ್ಲಿ 3176 ಜನರನ್ನು ಅಮಾನವೀಯವಾಗಿ ಬಳಿತೆಗೆದುಕೊಂಡಿದೆ ಎಂದು ಎಎಫ್ ಪಿ ಸುದ್ದಿ ಸಂಸ್ಥೆ ತಿಳಿಸಿದೆ.

ಆರಂಭದಲ್ಲಿ ಕೊರೊನಾ ಬಗ್ಗೆ ನಿರ್ಲಕ್ಷ್ಯ ಧೋರಣೆ ತೋರಿದ್ದ ಅಮೆರಿಕಾ ಸದ್ಯ  ವೈಸರ್ ಮುಂದೆ ಮಂಡಿಯೂರುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು ನ್ಯೂಯಾರ್ಕ್‌ ನಗರವೊಂದರಲ್ಲೇ 2.68 ಲಕ್ಷ ಕೊರೊನಾ ಸೋಂಕಿತರು ವರದಿಯಾಗಿದೆ. 20,861 ಜನರು ಸೋಂಕಿನಿಂದ ಪ್ರಾಣ ಕಳೆದುಕೊಂಡಿದ್ದರೆ. ಜೊತೆಗೆ ನ್ಯೂ ಜೆರ್ಸಿಯಲ್ಲಿ ಹೆಚ್ಚು ಸೋಂಕಿತರು ಮತ್ತು ಸಾವು ಸಂಭವಿಸಿದೆ. ಇಲ್ಲಿ 1 ಲಕ್ಷ ಸೋಂಕಿತರು ವರದಿಯಾಗಿದ್ದು, 5428 ಜನರು ಪ್ರಾಣ ಕಳೆದುಕೊಂಡಿದ್ದಾರೆ.

ಜಗತ್ತಿನ ಬೇರೆ ದೇಶಗಳಿಗೆ ಹೋಲಿಸಿದರೆ ಅಮೆರಿಕಾದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಜೊತೆಗೆ ಮರಣಮೃಂದಗಕ್ಕೆ  ಅತೀ ಹೆಚ್ಚು ಜನ ಬಲಿಯಾಗುತ್ತಿರುವುದು ವಿಶ್ವವನ್ನೇ ಬೆಚ್ಚಿಬೀಳಿಸಿದೆ. ಅತ್ಯಾಧುನಿಕ ತಂತ್ರಜ್ಞಾನ, ಆರ್ಥಿಕವಾಗಿ ಶ್ರೀಮಂತ, ವಿಶ್ವದಲ್ಲಿ ಬಲಾಢ್ಯ ದೇಶವಾಗಿದ್ದರೂ ಕೊರೊನಾ ವೈರಸ್‌ ವಿರುದ್ಧ ಸಮರ್ಪಕವಾಗಿ ಹೋರಾಡುವಲ್ಲಿ ಯುಎಸ್‌ ವಿಫಲವಾಗಿದೆ. ಇದನ್ನು ಕಂಡು ಇತರೆ ದೇಶಗಳು ಸಹಜವಾಗಿ ಆತಂಕಗೊಂಡಿದ್ದು, ಕೊರೊನಾದಿಂದ ಮುಕ್ತ ಹೊಂದಲು ಹರಸಾಹಸವೇ ಪಡುತ್ತಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights