ಸದ್ದಿಲ್ಲದೆ ನಡೀತಿದೆ ಆಸ್ತಿ ಅಕ್ರಮ : ವಾರಸುದಾರರಿಲ್ಲದ ನಿವೇಶನಗಳೇ ಇವ್ರ ಟಾರ್ಗೆಟ್….

ಮಂಡ್ಯ ಜಿಲ್ಲೆ ಮದ್ದೂರು ಪಟ್ಟಣದ ಪುರಸಭೆಯಲ್ಲಿ ಒಂದಲ್ಲ ಒಂದು ಅಕ್ರಮಗಳು ಬೆಳಕಿಗೆ ಬರ್ತಾನೆ ಇವೆ. ಇದೀಗ ಪುರಸಭೆ ವ್ಯಾಪ್ತಿಯ ಸರ್ಕಾರಿ ಜಾಗಗಳು ಸೇರಿದಂತೆ ವಾರಸುದಾರರು ಇಲ್ಲದೆ ಇರೋ ನಿವೇಶನಗಳನ್ನು ನಕಲಿ ದಾಖಲಾತಿಗಳ ಮೂಲಕ ಬೇನಾಮಿ ಹೆಸರಲ್ಲಿ ಪುರಸಭೆ ಅಧಿಕಾರಿಗಳು ಸೇರಿ ಕೆಲ ಸದಸ್ಯರು ಬೇರೆಯವರ ಹೆಸರಿಗೆ ಖಾತೆ ಮಾಡಿಸ್ತಿರೋ ಆರೋಪ ಕೇಳಿ‌ ಬಂದಿದ್ದು ದಾಖಲೆಗಳ ಜಿಲ್ಲಾಧಿಕಾರಿಗೆ ದೂರು ಹೋಗಿದೆ.

ಹೌದು ! ಮಂಡ್ಯದ ಮದ್ದೂರು ಪಟ್ಟಣ ಪುರಸಭೆಯಲ್ಲಿ ಒಂದಲ್ಲ ಒಂದು ಅಕ್ರಮಗಳು ಬೆಳಕಿಗೆ ಬರ್ತಾನೆ ಇದೆ. ಇದೀಗ ಸರ್ಕಾರಿ ಜಾಗ ಸೇರಿದಂತೆ ವಾರಸುದಾರು ಇಲ್ಲದ ನಿವೇಶನಗಳನ್ನು ಕೆಲ ಪುರಸಭೆ ಸದಸ್ಯರು ಮತ್ತು ಪುರಸಭೆ ಅಧಿಕಾರಿಗಳು ಸೇರಿ ನಕಲಿ‌ ದಾಖಲೆ ಸೃಷ್ಟಿಸಿ ಬೇನಾಮಿ ವ್ಯಕ್ತಿಗಳ ಹೆಸರಲ್ಲಿ‌ ಆಸ್ತಿ ವರ್ಗಾವಣೆ ಮಾಡ್ತಿರೋ ಆರೋಪ ಕೇಳಿ ಬಂದಿದೆ. ಬೇನಾಮಿ ಹೆಸರಿಗೆ ಕೋಟ್ಯಾಂತರ ರೂ ಮೌಲ್ಯದ ಆಸ್ತಿಯನ್ನು ವರ್ಗಾವಣೆ ಮಾಡಿರೋ ಬಗ್ಗೆ ಸ್ಥಳೀಯ RTI ಹೋರಾಟಗಾರ ಪ್ರಸನ್ನ ಕುಮಾರ್ ದಾಖಲೆಗಳ ಸಮೇತ ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ. ಈ ಪ್ರಕರಣವನ್ನು ಸಮಗ್ರ ತನಿಖೆಯ ಮೂಲ ಅಕ್ರಮ ದಂಧೆಯ ಹಿಂದೆ ಇರುವ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ವಿರುದ್ದ ಕ್ರಮ ಒತ್ತಾಯಿಸಿದ್ದಾರೆ.

ಇನ್ನು ಮದ್ದೂರು ಪಟ್ಟಣ ಪುರಸಭೆಯಲ್ಲಿ ಅದೆಷ್ಟೂ ಇಂತಹ ಪ್ರಕರಣಗಳು ನಡೆದಿರುವ ಶಂಕೆ ಇದೆ. ಸರ್ಕಾರಿ ಜಾಗ ಮತ್ತು ವಾರಸುದಾರಿಲ್ಲದ ನಿವೇಶನಗಳು ಬೇನಾಮಿ ಹೆಸರಲ್ಲಿ ಖಾತೆಯಾಗಿ ರಿಯಲ್ ಎಸ್ಟೇಟ್ ನವರ ಕೈ ಸೇರಿದೆ ಅನ್ನೋ ಮಾತು ಕೇಳಿ‌ ಬರ್ತಿದೆ. ಮೈ-ಬೆಂ ಹೆದ್ದಾರಿ ಹಾದು ಹೋಗಿರುವ ಕಾರಣ ಇಲ್ಲಿ ಖಾಲು ನಿವೇಶನಗಳು ಕೋಟ್ಯಾಂತರ ರೂಪಾಯಿ ಬೆಳೆ ಬಾಳುತ್ತಿದ್ದು ಸ್ಥಳೀಯ ಪುರಸಭೆಯಲ್ಲಿ ಕೆಲ ಅಧಿಕಾರಿಗಳು ಈ ಕೆಲ ರಿಯಲ್ ಎಸ್ಟೇಟ್ ಉದ್ಯಮಿ ಮತ್ತು ಜನಪ್ರತಿನಿಧಿಗಳ ಸಹಾತದಿಂದ ನಕಲಿ ದಾಖಲೆ ಸೃಷ್ಟಿಸಿ ಇ-ಸ್ವತ್ತಿನ ಹೆಸರಲ್ಲಿ ಖಾತೆ ಮಾಡಿಸಿ ಮಾರಾಟ ಮಾಡಿದ್ದಾರೆ‌. ಈ ಅಕ್ರಮದಲ್ಲಿ ಬಹುತೇಕ ಪುರಸಭೆಯ ಅಧಿಕಾರಿಗಳು ತಮ್ಮ ಮುಖ್ಯಾಧಿಕಾರಿಗಳ ಗಮನಕ್ಕೆ ಬರದ ರೀತಿ ಅಕ್ರಮ ನಡೆಸಿದ್ದಾರೆ. ಸದ್ಯ ಈ ಅಕ್ರಮ ಬೆಳಕಿಗೆ ಬರುತ್ತಿದ್ದಂತೆ ಪುರಸಭೆ ಮುಖ್ಯಾಧಿಕಾರಿಗಳು ತಮ್ಮ ಕಿರಿಯ ಅಧಿಕಾರಿಗಳ ವಿರುದ್ದ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದು ಅಲ್ದೆ ಈ ಹಿಂದೆ ಯಾವ ಯಾವ ಆಸ್ತಿ ವರ್ಗಾವಣೆ ಆಗಿದೆ ಅನ್ನೊದ್ರ ಬಗ್ಗೆ ಮತ್ತೆ ದಾಖಲೆ ಪರಿಶೀಲನೆ ನಡೆಸ್ತಿದ್ದು ನೊಂದಣಾಧಿಕಾರಿಗೆ ಯಾವುದೇ ಆಸ್ತಿ ನೊಂದಣಿ ಮಾಡದಂತೆ ಮನವಿ ಮಾಡಿದ್ದಾರೆ. ಇನ್ನು ಈ ಸಂಬಂಧ ಸ್ಥಳೀಯ ಶಾಸಕ ಡಿಸಿ ತಮ್ಮಣ್ಣ ಕೂಡ ಜಿಲ್ಲಾಧಿಕಾರಿಗಳ ಮೂಲಕ ತನಿಖೆಗೆ ಆಗ್ರಹಿಸಿದ್ದು ತಪ್ಪಿಸ್ಥರಿಗೆ ಶಿಕ್ಷೆಯಾಗಬೇಕು ಎಂದಿದ್ದಾರೆ.

ಒಟ್ಟಾರೆ ಮದ್ದೂರು ಪಟ್ಟಣ ಪುರಸಭೆಯಲ್ಲಿ ಅಕ್ರಮ ಆಸ್ತಿ ದಂಧೆ ಮಿತಿ ಮೀರಿದ್ದು ಸರ್ಕಾರದ ಸೂಕ್ತ ತನಿಖೆಯಿಂದ ಬಯಲಿಗೆ ಬರಬೇಕಿದ್ದು ಸರ್ಕಾರ ಮತ್ತು ಜಿಲ್ಲಾಡಳಿತ ಸಮಗ್ರ ತನಿಖೆಯ ಮೂಲಕ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights