ಸಿಲಿಕಾನ್ ಸಿಟಿಯ 40 ವಾರ್ಡ್ ಗಳಲ್ಲಿ ಸೋಂಕು : 158 ವಾರ್ಡ್ ಗಳಲ್ಲಿ ಸೋಂತರ ಸಂಖ್ಯೆ ಶೂನ್ಯ

ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನಕಳೆದಂತೆ ಹೆಚ್ಚಾಗುತ್ತಿದ್ದು, ರೆಡ್ ಜೋನ್ ಎಂದು ಘೋಷಿಸಲಾದ ಸಿಲಿಕಾನ್ ಸಿಟಿಯಲ್ಲಿ 40 ವಾರ್ಡ್ ಗಳಲ್ಲಿ ಮಾತ್ರ ಸೋಂಕಿತರಿರುವುದು ಪತ್ತೆಯಾಗಿದೆ.

ಹೌದು… ಕೋವಿಡ್-19 ಎಥೇಚ್ಚವಾಗಿ ಹರಡುತ್ತಿರವ ಈ ಸಂದರ್ಭದಲ್ಲಿ ಒಂದು ಸಣ್ಣ ಖುಷಿ ವಿಚಾರ ಕಿವಿಗೆ ಬಿದ್ದಂತಾಗಿದೆ. ಬೆಂಗಳೂರಿನ ಒಟ್ಟು ವಾರ್ಡ್ ಗಳ ಪೈಕಿ ಕೇವಲ 40 ವಾರ್ಡ್ ಗಳಲ್ಲಿ 30 ವಾರ್ಡ್ ಗಳಲ್ಲಿ ತಲಾ ಒಂದರಂತೆ ಸೋಂಕಿತರಿರುವುದು ಪತ್ತೆಯಾಗಿದ್ದು ಇನ್ನುಳಿದ 158 ವಾರ್ಡ್ ಗಳಲ್ಲಿ ಸೋಂಕಿತರು ಇಲ್ಲದಿರುವ ವಿಚಾರವನ್ನು ಇಂದು ತಿಳಿದು ಬಂದಿದೆ.

ಬೆಂಗಳೂರಿನಲ್ಲಿ ಒಟ್ಟು 78 ಕೊರೊನಾ ಸೋಂಕಿತರ ಸಂಖ್ಯೆ ದಾಖಲಾಗಿದ್ದು,ಪಾದಾರಾಯನಪುರ, ಬಾಪೂಜಿ ನಗರದಲ್ಲಿ ಮಾತ್ರ 7 ಕೊರೊನಾ ಕೇಸ್ ಪತ್ತೆಯಾಗಿವೆ. ಹಾಗಾಗಿಯೇ ಆ ಎರಡು ವಾರ್ಡ್​ಗಳನ್ನ ಸೀಲ್ ಡೌನ್ ಮಾಡಲು ನಿರ್ಧರಿಸಲಾಗಿರುವುದು. ಬೆಂಗಳೂರಿನಲ್ಲಿ 78 ಕೊರೊನಾ ಕೇಸ್ ದಾಖಲಾದರೂ ಕೊರೊನಾ ಸ್ವಲ್ಪ ಹಿಡಿತದಲ್ಲಿದೆ. ಇದರಲ್ಲಿ 27 ಜನ ಚಿಕಿತ್ಸೆ ನೀಡಿ ಮನೆಗೆ ಕಳುಹಿಸಲಾಗಿದ್ದು, 49 ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಇಬ್ಬರು ಮೃತಪಟ್ಟಿದ್ದಾರೆ. ದೇಶದ ಬೇರೆ ನಗರಗಳಿಗೆ ಹೋಲಿಸಿದರೆ ಬೆಂಗಳೂರು ಈ ಕ್ಷಣದವರೆಗೂ ಸೇಫ್ ಜೋನ್‍ನಲ್ಲೇ ಇದೆ.

ಇನ್ನೂ ಬೆಂಗಳೂರಿನಲ್ಲಿ ಸೋಂಕಿತರಿರುವ ವಾರ್ಡ್ ಗಳ ವಿವರ ಇಲ್ಲಿದೆ.

ರಾಧಾಕೃಷ್ಣ ಟೆಂಪಲ್ ವಾರ್ಡ್, ಅರಮನೆ ನಗರ, ಮಲ್ಲೇಶ್ವರಂ, ಜೆಸಿ ನಗರ, ಹೂಡಿ, ಸಿವಿ ರಾಮನ್ ನಗರ, ಹೊಯ್ಸಳ ನಗರ, ಗಾಂಧಿ ನಗರ, ದೊಮ್ಮಲೂರು, ಸಂಪಂಗಿರಾಮನಗರ, ಹಗ್ಡೂರ್, ಜ್ಞಾನ ಭಾರತಿ, ಬಾಪೂಜಿ ನಗರ, ಪಾದಾರಾಯನಪುರ, ಜೆ.ಪಿ ನಗರ, ವಿವಿ ಪುರಂ, ಹೊಂಬೇಗೌಡ ನಗರ, ಆಡುಗೋಡಿ, ಸುದ್ದಗುಂಟೆ ಪಾಳ್ಯ, ಆರ್.ಆರ್ ನಗರ, ಕತ್ರಿಗುಪ್ಪೆ, ಗೊರಗುಂಟೆ ಪಾಳ್ಯ, ಮಡಿವಾಳ, ಹೆಚ್‍ಎಸ್‍ಆರ್ ಲೇಔಟ್, ಶಾಕಾಂಬರಿ ನಗರ, ಚಿಕ್ಕಲಸಂದ್ರ, ಕೋಣನಕುಂಟೆ, ಅಂಜನಾಪುರ, ಹೆಮ್ಮಿಗೆಪುರ, ಗರುಡಾಚಾರ್ ಪಾಳ್ಯ, ಸಂಜಯನಗರ, ಮಾರುತಿ ಸೇವಾನಗರ, ರಾಮಸ್ವಾಮಿ ಪಾಳ್ಯ, ವಸಂತ್ ನಗರ ಮತ್ತು ಸುಧಾಮ ನಗರ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights