ಸೋನು ಸೂದ್‌ ಸಹಾಯಕ್ಕೆ ರಾಜಕೀಯ ಬಣ್ಣ: ಬಿಜೆಪಿ v/s ಶಿವಸೇನೆ

ಕೊರೋನಾ ಲಾಕ್‌ಡೌನ್‌ ಸಮಯದಲ್ಲಿ ವಲಸೆ ಕಾರ್ಮಿಕರು ಮತ್ತು ಬಡವರಿಗೆ ನೆರವು ನೀಡಿ ಮಾನವೀಯತೆ ಮೆರೆದು ಮೆಚ್ಚುಗೆ ಪಾತ್ರವಾಗಿದ್ದ ಬಾಲಿವುಡ್ ನಟ ಸೋನು ಸೂದ್. ಆದರೆ, ಅವರ ಸಹಾಯಕ್ಕೆ ರಾಜಕೀಯದ ಬಣ್ಣ ಹಚ್ಚಿ ಟೀಕೆ ಮಾಡಲಾಗುತ್ತಿರುವುದು ಇಂದಿನ ದೌರ್ಭಾವೇ ಸರಿ.

ಬೆಜೆಪಿಯ ಸೂಚನೆ ಮೇರೆಗೆ ಸೋನುಸೂದ್‌ ವಲಸೆ ಕಾರ್ಮಿಕರಿಗೆ ಸಹಾಯ ಮಾಡುತ್ತಿದ್ದಾರೆ. ಕೊರೊನಾ ಸೋಂಕನ್ನು ನಿಯಂತ್ರಿಸುವಲ್ಲಿ ಹಾಗೂ ವಲಸೆ ಕಾರ್ಮಿಕರ ಸಂಕಷ್ಟಕ್ಕೆ ನೆರವಾಗುವಲ್ಲಿ ಮಹಾರಾಷ್ಟ್ರ ಸರ್ಕಾರ ವಿಫಲವಾಗಿದೆ ಎಂದು ದೇಶಾದ್ಯಂತ ಪ್ರಚಾರ ಮಾಡುವ ಉದ್ದೇಶದಿಂದ ಬಿಜೆಪಿಯು ಸೋನ್‌ ಸೂದ್‌ ಅವರನ್ನು ಮುಂದೆಬಿಟ್ಟಿರುವ ಸಾಧ್ಯತೆಯಿದೆ.  ಇದು ಬಿಜೆಪಿಯವರು ಹಣ ಕೊಟ್ಟು ನಡೆಸುತ್ತಿರುವ ಕುತಂತ್ರವಿದು ಎಂದು  ಶಿವಸೇನಾ ಸಂಸದ ಸಂಜಯ್ ರಾವತ್ ಆರೋಪಿಸಿದ್ದಾರೆ.

ಅಲ್ಲದೆ, ಶಿವಸೇನೆ ಮುಖವಾಣಿ ಸಾಮ್ನಾದಲ್ಲಿ, ಹೆಚ್ಚಾಗಿ ದುಡ್ಡು ಕೊಡುವ ಪಕ್ಷವನ್ನು ಸೋನು ಸೂದ್ ಪ್ರಚಾರ ಮಾಡುತ್ತಾರೆ. ಸೋನು ಸೂದ್ ಅವರ ವೃತ್ತಿ ನಟನೆ. ಯಾರಾದರೂ ಬರೆದುಕೊಟ್ಟ ಸಂಭಾಷಣೆಯನ್ನು ಹೇಳಿ ಅದರಿಂದ ಹಣ ಸಂಪಾದನೆ ಮಾಡುವುದು ಅವರ ಕೆಲಸ. ಅವರಂಥ ಅನೇಕ ವ್ಯಕ್ತಿಗಳು ನಮ್ಮ ಸುತ್ತಮುತ್ತ ಇದ್ದಾರೆ. ಹೆಚ್ಚಾಗಿ ಹಣ ಯಾರು ಕೊಡುತ್ತಾರೋ ಅವರ ಪರ ಪ್ರಚಾರ ಮಾಡುತ್ತಾರೆ ಎಂಟು ಟೀಕಿಸಿದ್ದರು.

Salute Sonu Sood - Falguni Bhat - Medium

ನಿಸ್ವಾರ್ಥವಾಗಿ ಕಾರ್ಮಿಕರಿಗೆ ನೆರವಾಗಿ ನಿಂತರೂ, ಅಂತಹ ಕೆಲಸಗಳಿಗೂ ರಾಜಕೀಯ ಬಣ್ಣಹಚ್ಚಿ ಇಂತಹ ಟೀಕೆಗಳು ಕೇಳಿಬಂದ ಹಿನ್ನೆಲೆಯಲ್ಲಿ ಸೋನು ಸೂದ್‌ ಅವರು  ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರನ್ನು ಭೇಟಿ ಮಾಡಿ ಮಾತನಾಡಿದ್ದಾರೆ.

ಸಚಿವ ಅಸ್ಲಮ್ ಶೇಖ್ ಮತ್ತು ನನ್ನ ಜೊತೆ ಸೋನು ಸೂದ್ ಅವರು ಸಿಎಂ ಉದ್ಧವ್ ಠಾಕ್ರೆಯವರನ್ನು ಭೇಟಿ ಮಾಡಿದ್ದಾರೆ. ಈ ಸಮಯದಲ್ಲಿ ಒಟ್ಟು ಸೇರಿ ಕೆಲಸ ಮಾಡಿದರೆ ಅನೇಕ ಮಂದಿಗೆ ಸಹಾಯ ಮಾಡಬಹುದು.ಮಹಾರಾಷ್ಟ್ರ ಜನತೆಗೆ ಸಹಾಯ ಮಾಡಲು ಇಂತಹ ಉತ್ತಮ ಹೃದಯವುಳ್ಳ ವ್ಯಕ್ತಿಯನ್ನು ಭೇಟಿ ಮಾಡಿರುವುದು ಒಳ್ಳೆಯದಾಯಿತು ಎಂದು ಸೋನು ಸೂದ್ ಭೇಟಿ ನಂತರ ಆದಿತ್ಯ ಠಾಕ್ರೆ ಟ್ವೀಟ್ ಮಾಡಿದ್ದಾರೆ.

ಉದ್ಧವ್ ಠಾಕ್ರೆಯವರನ್ನು ಭೇಟಿ ಮಾಡಿದ ನಂತರ ಸಂಜಯ್ ರಾವತ್ ಟೀಕೆಗೆ ಪ್ರತಿಕ್ರಿಸಿರುವ ಸೋನು ಸೂದ್, ದೇಶದ ಪ್ರತಿ ಮೂಲೆ ಮೂಲೆಗಳಲ್ಲಿ ತಮ್ಮ ಕೆಲಸಕ್ಕೆ ಜನರು ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಇದು ಒಂದು ಪಕ್ಷ ಅಥವಾ ಒಬ್ಬರಿಗೆ ಮಾತ್ರ ಸಂಬಂಧಪಟ್ಟ ವಿಷಯವಲ್ಲ, ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಸಮಸ್ಯೆಯಲ್ಲಿರುವವರಿಗೆ ನಾವು ಸಹಾಯ ಮಾಡಬೇಕು, ಇಲ್ಲಿ ವ್ಯಕ್ತಿ, ಪಕ್ಷ ಮುಖ್ಯವಾಗುವುದಿಲ್ಲ ಎಂದಿದ್ದಾರೆ.

ನನ್ನ ವಲಸೆ ಸೋದರ, ಸೋದರಿಯರೊಂದಿಗಿನ ನನ್ನ ಪ್ರಯಾಣವು ವಿಶೇಷವಾಗಿದೆ. ಇದು ಹೃದಯದಿಂದ ಹೊಮ್ಮಿದೆ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೂ ನನ್ನ ಸಹಾಯವ್ನು ಯಾರಾದರು ಬಯಸಿದೆ, ನನ್ನ ಸಹಾಯಕ್ಕಾಗಿ ಯತ್ನಿಸಿದರೆ, ಅವರ ಕುಟುಂಬಗಳಿಗೆ ಸಹಾಯ ಮಾಡಲು ನಾನು ಎಲ್ಲಾ ರೀತಿಯಲ್ಲೂ ಪ್ರಯತ್ನಿಸುತ್ತೇನೆ. ಇದನ್ನು ಮುಂದುವರೆಸುತ್ತೇನೆ ಎಂದು ಟ್ವೀಟ್‌ ಮಾಡಿದ್ದಾರೆ.

ಸೋನು ಸೂದ್ ಅವರು ಮುಖ್ಯಮಂತ್ರಿ ಉದ್ದವ್‌ ಠಾಕ್ರೆಯವರನ್ನು ಭೇಟಿ ಮಾಡುತ್ತಿದ್ದಂತೆಯೇ, ಇತ್ತ ಸಂಜಯ್ ರಾವತ್ ತಮ್ಮ ಟ್ವೀಟ್ ಡಿಲೀಟ್ ಮಾಡಿದ್ದಾರೆ.

ಜನಪರವಾಗಿ ಕೆಲಸ ಮಾಡುವವರಿಗೆ ಇಂತಹ ಟೀಕೆಗಳು ಹೊಸತೇನೂ ಅಲ್ಲ. ಅಲ್ಲದೆ, ಸೋನು ಸೂದ್‌ ಕೇಲವ ಮಹಾರಾಷ್ಟ್ರದಲ್ಲಿ ಮಾತ್ರ ವಲಸೆ ಕಾರ್ಮಿಕರಿಗೆ ನರವಾಗಿಲ್ಲ. ಬದಲಾಗಿ ತಮಿಳುನಾಡಿನ ವಲಸೆ ಕಾರ್ಮಿಕರಿಗೂ ನೆರವು ನೀಡಿದ್ದಾರೆ ಎಂಬುದು ಗಮನಾರ್ಹ. ಎಲ್ಲದಕ್ಕೂ ಮಿಗಿಲಾಗಿ, ಒಕ್ಕೂಟ ಸರ್ಕಾರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಬಿಜೆಪಿ ಲಾಕ್‌ಡೌನ್‌ ಸಂದರ್ಭವನ್ನೂ, ಕೊರೊನಾ ಸೋಂಕನ್ನು ನಿಭಾಯಿಸುವಲ್ಲಿ ಸಂಪೂರ್ಣ ವಿಫಲವಾಗಿದ್ದು, ನೂರಾರು ವಲಸೆ ಕಾರ್ಮಿಕರ ದಾರುಣ ಸಾವಿಗೆ ಕಾರಣವಾಗಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights