ಸ್ಮಾರ್ಟ್ ಕ್ಯಾಮೆರಾದ ಸ್ಮಾರ್ಟ್ ಕೆಲಸಕ್ಕೆ ಪೋಲಿಸರಿಗೂ ಅಚ್ಚರಿ…!

ತುಮಕೂರು ನಗರಕ್ಕೆ ಕಾಲಿಟ್ರೇ ಸಾಕು ಜನ್ರು ಧೂಳಿನ ಮಯವಾಗ್ತಾರೆ..ಸ್ಮಾರ್ಟ್ ಸಿಟಿ ಕಾಮಗಾರಿಗೆ ಸುಸ್ತಾಗಿರೋ ಜನ್ರು ಸ್ಮಾರ್ಟ್ ಸಿಟಿ ಅಧಿಕಾರಿಗಳಿಗೆ ಹಿಡಿ ಶಾಪ ಹಾಕ್ತಿದ್ದಾರೆ. ಅದ್ರಲ್ಲೂ ರಸ್ತೆಗಳನ್ನ ಎಲ್ಲಂದ್ರಲ್ಲಿ ಅಗೆದು ಬಗೆದು ಬಿಸಾಡಿರೋದು ಜನರ ಕೋಪ ನೆತ್ತಿಗೇರಿಸಿದೆ.

ಇದೆಲ್ಲದರ ನಡುವೆಯೇ ಸ್ಮಾರ್ಟ್ ಸಿಟಿ ಅಧಿಕಾರಿಗಳು ಜನ್ರಿಂದ ಬೇಶ್ ಎನಿಸಿಕೊಳ್ಳೋ ಕೆಲಸವನ್ನ ಮಾಡಿದ್ದಾರೆ.. ಅಷ್ಟಕ್ಕೂ ಏನದು ಅಂತಿರಾ ಈ ಸ್ಟೋರಿ ನೋಡಿ.. ಸ್ಮಾರ್ಟ್ ಸಿಟಿ‌ ವತಿಯಿಂದ ನಗರಕ್ಕೆ ಹೊಸ ಹೊಸ ತಂತ್ರಜ್ಞಾನಗಳು ಕಾಲಿಡುತ್ತಿವೆ.. ಅದ್ರಲ್ಲೂ ಈಗ ಬರುತ್ತಿರೋ ಎಲ್ಲಾ ತಂತ್ರಜ್ಞಾನಗಳೂ ಪೊಲೀಸರ ಕೆಲಸಕ್ಕೆ ಶೇಕಡ ನೂರರಷ್ಟು ಉಪಯುಕ್ತವಾಗಿವೆ..

ಹೌದು ತುಮಕೂರು ಸ್ಮಾರ್ಟ್ ಸಿಟಿವತಿಯಿಂದ ತುಮಕೂರು ನಗರ ಪೊಲೀಸರಿಗೆ ಮೂರು ವಿಶೇಷ ವಾಹನಗಳನ್ನ ನೀಡಲಾಗಿದೆ.. ನೋಡಿ ಇದೇ ಎಂ ಎಸ್ ವಿ ವಾಹನ ಅಂತಾ..ಇದೇ ರೀತಿಯ ಮೂರು ವಾಹನಗಳನ್ನ ಸ್ಮಾರ್ಟ್ ಸಿಟಿಯವರು ನಗರ ಪೊಲೀಸರಿಗೆ ನೀಡಿದ್ದಾರೆ.. ಈ ವಾಹನದಲ್ಲಿರುವ ವಿಶೇಷತೆಗಳನ್ನ ನೋಡ್ತಾ ಹೋದ್ರೆ ಅಬ್ಬಬ್ಬಾ ಅನ್ಸುತ್ತೆ.. ಈ ವಾಹನದಲ್ಲಿ ನಾಲ್ಕೂ ದಿಕ್ಕಿಗೆ ನಾಲ್ಕು ಕ್ಯಾಮೆರಾಗಳನ್ನ ಅಳವಡಿಸಲಾಗಿದೆ. ಇನ್ನೊಂದು ಕ್ಯಾಮೆರಾ ಇದೆ ಅದು ಹತ್ತು ಅಡಿ ಮೇಲ್ಕಕೆ ಹೋಗಿ ಸುತ್ತಲೂ ಅಂದ್ರೆ 360 ಡಿಗ್ರಿ ಅಳತೆಯಲ್ಲಿ ಸುಮಾರು 300 ಮೀಟರ್ ವರೆಗೂ ಕ್ಯಾಪ್ಚರ್ ಮಾಡುತ್ತೆ. ಅಲ್ಲದೇ ಇದೇ ವಾಹನದಲ್ಲಿ ಒಂದು ಮಾನಿಟರ್ ಕೂಡಾ ಇದೆ ಅದ್ರಲ್ಲಿ ನಾಲ್ಕು ವಿಂಡೋಗಳಿದ್ದು ನಾಲ್ಕು ದಿಕ್ಕಿಗೂ ರೊಟೆಟ್ ಮಾಡುವಂತ ಒಂದು ಲಿವರ್ ಇದೆ..

ಒಂದು ಪೊಲೀಸ್ ಜೀಪಿಗೆ ಏನೆಲ್ಲಾ ವ್ಯವಸ್ಥೆ ಬೇಕೋ ಎಲ್ಲವನ್ನೂ ಮಾಡಲಾಗಿದೆ.. ಇಷ್ಟುದಿನ ಪ್ರತಿಭಟನೆ ವೇಳೆ ಅಥವಾ ಯಾವುದಾದ್ರೂ ಮೆರವಣಿಗೆ ವೇಳೆ ಏನಾದ್ರೂ ದುರಂತ ಸಂಭವಿಸಿದ್ರೆ. ಆ ಬಗ್ಗೆ ತನಿಖೆ ಮಾಡ್ಬೇಕು ಅಂದ್ರೆ ಪೊಲೀಸರಿಗೆ ಇನ್ನಿಲ್ಲದ ಸಮಸ್ಯೆ ಎದಿರಾಗುತ್ತಿತ್ತು. ಯಾಕಂದ್ರೆ ಘಟನಾ ಸ್ಥಳದಲ್ಲಿ ಸರಿಯಾದ ಸಿಸಿಟಿವಿ ಫುಟೇಜ್ ಸಿಗದ ಕಾರಣ ಗೊಂದಲವಾಗುತ್ತಿತ್ತು..

ಆದ್ರೆ ಈ ಹೊಸಾ ಎಂಎಸ್ ವಿ ವೆಹಿಕಲ್ ಬಂದಿರೋದ್ರಿಂದ ತನಿಖೆಯ ಹಾದಿ ಸುಲಭವಾಗಿದೆ… ಸಧ್ಯ ಕರ್ನಾಟಕದಲ್ಲಿ ಇದೇ ಮೊದಲಬಾರಿಗೆ ತುಮಕೂರಿನಲ್ಲಿ ಈ ಸೇವೆಯನ್ನ ಸ್ಮಾರ್ಟ್ ಸಿಟಿ ಅಧಿಕಾರಿಗಳು ಪರಿಚಯಿಸಿದ್ದಾರೆ..ತುಮಕೂರು ನಗರದ ಒಟ್ಟು ಮೂರು ಪೊಲೀಸ್ ಠಾಣೆಗಳಿಗೆ ಈ ವಾಹನಗಳನ್ನ ನೀಡಲಾಗಿದ್ದು ಪೊಲೀಸರು ಇದರ ಕಾರ್ಯ ವೈಖರಿಗೆ ಸೈ ಅಂದಿದ್ದಾರೆ..ಈ ಮೂಲಕ ಇನ್ಮುಂದೆ ತುಮಕೂರು ಪೊಲೀಸರು ಸಹ ಸ್ಮಾರ್ಟ್ ಆಗ್ತಿದ್ದಾರೆ..

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights