ಹಳ್ಳಿ ಹೊಟೇಲ್ ಗೆ ಮಾರುಹೋದ ಸಿದ್ದಣ್ಣ- ವೀರಣ್ಣ : ಎಂಎಲ್ಎಗಳಿಬ್ಬರು ರುಚಿಚಪ್ಪಿಸಿದರಣ್ಣ!

ರಾಜಕಾರಣಿಗಳು ಫೈವ್ ಸ್ಟಾರ್,ತ್ರಿ ಸ್ಟಾರ್ ಹೊಟೇಲ್ ನಲ್ಲಿ ಊಟ- ಉಪಹಾರ ಮಾಡುವುದು ಸಾಮಾನ್ಯ..
ಆದ್ರೆ ಈಚೆಗೆ ಹೈಫೈ ಹೊಟೇಲ್ ಗಳಿಗಿಂತ ಹಳ್ಳಿ ಹೊಟೇಲ್ ಊಟ -ಉಪಹಾರ ರಾಜಕಾರಣಿಗಳನ್ನು ಸೆಳೆಯುತ್ತಿದೆ.ಬಾಗಲಕೋಟೆ ಜಿಲ್ಲೆಯ ಬಾದಾಮಿ ಶಾಸಕ,ಮಾಜಿ ಸಿಎಂ ಸಿದ್ದರಾಮಯ್ಯ ಹಳ್ಳಿ ಹೊಟೇಲ್ ನಲ್ಲಿ ಊಟಮಾಡಿದ್ದ ಫೋಟೋ ವೈರಲ್ ಆಗಿತ್ತು..ಹಾಗಿಯೇ ಇದೀಗ ಬಾಗಲಕೋಟೆ ಶಾಸಕ ವೀರಣ್ಣ ಚರಂತಿಮಠ ಹಳ್ಳಿಯ ರಸ್ತೆ ಬದಿಯ ಹೊಟೇಲ್ ನಲ್ಲಿ ಉಪಹಾರ ಮಾಡಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ…

ಎಂಎಲ್ ಎ ಗಳಿಬ್ಬರ ಸರಳತೆಗೆ ಸಾಕ್ಷಿ:
ಹೌದು.ಮಾಜಿ ಸಿಎಂ ಹಾಗೂ ಬಾದಾಮಿ ಶಾಸಕ ಸಿದ್ಧರಾಮಯ್ಯ ಬಾಗಲಕೋಟೆ ಜಿಲ್ಲೆಯಲ್ಲಿನ ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ನೀಡುವ ಪ್ರವಾಸದ ವೇಳೆ ಹಳ್ಳಿ ಹೊಟೇಲ್ ನಲ್ಲಿ ಊಟ ಸವಿದು ಗಮನಸೆಳೆದಿದ್ದರು.ಆಗಸ್ಟ್ 21,2019ರಂದು ಸಿದ್ದರಾಮಯ್ಯ ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ನೀಡಲು ಸ್ವಕ್ಷೇತ್ರ ಬಾದಾಮಿಗೆ ಬಂದಾಗ ಬೇಲೂರು ಗ್ರಾಮದ ರಸ್ತೆ ಬದಿಯ ಹೊಟೇಲ್ ವೊಂದರಲ್ಲಿ ಮುಖಂಡರೊಂದಿಗೆ ಸೇರಿ ಊಟ ಹಳ್ಳಿ ಊಟ ಸವಿದು,ತಮ್ಮ ಫೇಸ್ಬುಕ್, ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದರು.ಆ ಬಳಿಕ ಎರಡನೇ ಬಾರಿ ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ನೀಡಲು ಬೆಳಗಾವಿ ಮಾರ್ಗವಾಗಿ ಬಾದಾಮಿಗೆ ಬರುವಾಗ ತಾಲೂಕಿನ ಹೂಲಗೇರಿ ಗ್ರಾಮದ ಬಳಿಯ ಡಾಬಾವೊಂದರಲ್ಲಿ ಊಟ ಸವಿದಿದ್ದರು.ಈ ವೇಳೆ ಪ್ರವಾಹದ ಮಧ್ಯೆಯೂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಮುಖಂಡರು ಮಾಂಸಾಹಾರ ಸೇವಿಸಿದ್ದು ವಿವಾದಕ್ಕೂ ಕಾರಣವಾಗಿತ್ತು.ಇನ್ನು ಬಾಗಲಕೋಟೆ ಬಿಜೆಪಿ ಶಾಸಕ ವೀರಣ್ಣ ಚರಂತಿಮಠ ಖಾಸಗಿ ಕಾರ್ಯಕ್ರಮ ನಿಮಿತ್ತ ಶಿರೂರು ಗ್ರಾಮಕ್ಕೆ ತೆರಳಿದ ವೇಳೆ ರಸ್ತೆ ಬದಿಯಲ್ಲಿರೋ ಹೊಟೇಲ್ ನಲ್ಲಿ ಉಪಹಾರ ಸೇವಿಸಿದ್ದಾರೆ. ಕಳೆದ ನಾಲ್ಕು ತಿಂಗಳ ಹಿಂದೆ ಶಾ‌ಸಕ ವೀರಣ್ಣ ಚರಂತಿಮಠ ಹಳ್ಳಿ ಹೊಟೇಲ್ ನಲ್ಲಿ ಉಪಹಾರ ಸೇವಿಸಿದ್ದ ಫೋಟೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.ಹಳ್ಳಿ ಹೊಟೇಲ್ ನಲ್ಲಿ ಊಟ ಉಪಹಾರ ಮಾಡುವ ಮೂಲಕ ಬಾಗಲಕೋಟೆ ಶಾ‌ಸಕರಿಬ್ಬರ ಸರಳತೆಗೆ ಸಾಕ್ಷಿಯಾಗಿದ್ದಾರೆ..

ಹೈಫೈ ಹೊಟೇಲ್ ನಿಂದ ಹಳ್ಳಿ ಹೊಟೇಲ್ ನತ್ತ
ಹಳ್ಳಿಗರಿಗೆ ಹಳ್ಳಿ ಹೊಟೇಲ್ ನಲ್ಲಿನ ತಿಂಡಿ,ತಿನಿಸು ಎಂದ್ರೆ ಅಚ್ಚುಮೆಚ್ಚು.ಕಾಲ ಬದಲಾದಂತೆ ತ್ರಿ ಸ್ಟಾರ್,ಫೈವ್ ಸ್ಟಾರ್ ಹೊಟೇಲ್ ,ಹೈಫೈ ಹೊಟೇಲ್ ನತ್ತ ಸಿರಿವಂತರು ಮುಖ ಮಾಡತೊಡಗಿದರು..ಹೈಫೈ ಹೊಟೇಲ್ ನಲ್ಲಿ ತಿಂಡಿ ತಿನಿಸುಗಳಿಗೆ ಅಧಿಕವಾಗಿ ಎಣ್ಣೆ ಬಳಕೆ,ರುಚಿಸದ ಆಹಾರಪದಾರ್ಥದಿಂದ ಸಿರಿವಂತರು ಈಗ ಹಳ್ಳಿ ಹೊಟೇಲ್ ನತ್ತ ಮುಖ ಮಾಡುತ್ತಿದ್ದಾರೆ.ಅದ್ರಲ್ಲೂ ರಾಜಕಾರಣಿಗಳು ಹಳ್ಳಿ ಹೊಟೇಲ್ ಊಟ,ಉಪಹಾರದತ್ತ ಮುಖ ಮಾಡ್ತಿರುವುದು ಕಂಡುಬರುತ್ತಿದೆ. ಊಟೋಪಚಾರ ಪದ್ಧತಿಯೂ ಹಿಂದಿನ ಕಾಲದತ್ತ ಹೊರಟಿದೆ.ಫಾ‌ಸ್ಟ್ ಫುಡ್, ಚೈನೀಸ್ ಫುಡ್, ಸೇರಿದಂತೆ ನಾಲಿಗೆ ರುಚಿ ಎಂದು ಸೇವಿಸಿ, ಬೊಜ್ಜು,ಬಿಪಿ,ಶುಗರ್, ನಂತಹ ರೋಗಗಳಿಗೆ ತುತ್ತಾಗುವವರ ಸಂಖ್ಯೆ ಹೆಚ್ಚಾಗಿದೆ.ಹಾಗಾಗಿ ಆಹಾರ ಪದ್ಧತಿಯನ್ನು ಕೆಲವರು ಬದಲಾಯಿಸುತ್ತಿದ್ದಾರೆ. ಮತ್ತೆ ಶುಚಿರುಚಿಯಾದ ಹಳ್ಳಿ ಊಟ,ಉಪಹಾರಕ್ಕೆ ಮಾರುಹೋಗುತ್ತಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights