ಜನರನ್ನು ಮೂರ್ಖರನ್ನಾಗಿಸುವ (ಪ್ರಾಂಕ್) ಅನೇಕ ಶೋಗಳನ್ನು ಟಿವಿಯಲ್ಲಿ ನೋಡಿರುತ್ತೀರ. ರಸ್ತೆಯಲ್ಲಿ ಹೋಗುವ ಜನರನ್ನು ನಂಬಿಸಿ ಬಕ್ರಾ ಮಾಡುವ ಮೂಲಕ ಮನರಂಜನೆ ನೀಡುವ ಕೆಲವರು ಅದನ್ನು ಸಾಮಾಜಿಕ ಜಾಲತಾಣಗಳಾದ ಫೇಸ್​ಬುಕ್, ಇನ್​ಸ್ಟಾಗ್ರಾಂ ಹಾಗೂ ಯೂಟ್ಯೂಬ್​ನಲ್ಲಿ ಅಪ್​ಲೋಡ್ ಮಾಡುತ್ತಾರೆ. ಇದೇ ರೀತಿ ಮಾಡಲು ಹೋದ ಯುವಕರು ಬೆಂಗಳೂರಿನ ಪೊಲೀಸರ ಕೈಗೆ ಸಿಕ್ಕಿಬಿದ್ದ ಸಿನಿಮೀಯ ಘಟನೆ ನಡೆದಿದೆ.

ದೆವ್ವದ ಮುಖವಾಡ ಧರಿಸಿ ನಿನ್ನೆ ಮಧ್ಯರಾತ್ರಿ ರಸ್ತೆಯಲ್ಲಿ ಓಡಾಡುತ್ತಿದ್ದ ಯುವಕರು ತಮ್ಮ ವೇಷ ನೋಡಿ ಬೆಚ್ಚಿ ಬೀಳುವವರ ವಿಡಿಯೋವನ್ನು ಟಿಕ್​ಟಾಕ್ ಮಾಡುವ ಉದ್ದೇಶ ಹೊಂದಿದ್ದರು. ಬೆಂಗಳೂರಿನ ಯಶವಂತಪುರದಲ್ಲಿ ಬಿಳಿ ಬಟ್ಟೆ ತೊಟ್ಟು, ಉದ್ದನೆಯ ಕೂದಲಿನ ಟೋಪನ್ ಹಾಕಿಕೊಂಡು, ಮುಖವಾಡದೊಂದಿಗೆ ಓಡಾಡುತ್ತಿದ್ದ ಯುವಕನ್ನು ನೋಡಿ ಹೆದರುವ ಜನರ ಪ್ರತಿಕ್ರಿಯೆಯನ್ನು ಆ ಯುವಕನ ಸ್ನೇಹಿತರು ವಿಡಿಯೋ ಮಾಡಿಕೊಳ್ಳುತ್ತಿದ್ದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights