IPL Cricket : ಈ ವರ್ಷ ಚುಟುಕು ಕ್ರಿಕೆಟ್ ನಡೆಯುತ್ತೆ, ಹೇಗೆ ಎಲ್ಲಿ ಇಲ್ಲಿದೆ details….

ಖಾಲಿ ಮೈದಾನಗಳಲ್ಲಾದರೂ ಸರಿಯೇ ಐಪಿಎಲ್ ನಡೆಯುತ್ತೆ ಎಂದ ಸೌರವ್ ಗಂಗೂಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧ್ಯಕ್ಷ ಸೌರವ್ ಗಂಗೂಲಿ ವಿಶದವಾಸ ವ್ಯಕ್ತಪಡಿಸಿದ್ದಾರೆ.  ಸೆಪ್ಟೆಂಬರ್-ಅಕ್ಟೋಬರಿನಲ್ಲಿ  ಐಪಿಎಲ್  ಆಯೋಜನೆ ಮಾಡುವ  ಸಾಧ್ಯೆತೆ ಇದೆ ಎಂದು ಅವರು ಹೇಳಿದ್ದಾರೆ…

ಏನೇ ಆದರೂ ಈವರ್ಷದ ಐಪಿಎಲ್ ರದ್ದಾಗುವುದಿಲ್ಲ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧ್ಯಕ್ಷ ಸೌರವ್ ಗಂಗೂಲಿ ಅಭಯ ನೀಡಿದ್ದಾರೆ. ಈ ಬಗ್ಗೆ ರಾಜ್ಯ ಶಾಖೆಗಳಿಗೆ ಪತ್ರ ಬರೆದಿರುವ ಸೌರವ್, ಈ ವರ್ಷವೇ ಐಪಿಎಲ್ ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ ಎಂದಿದ್ದಾರೆ.

ಒಂದು ವೇಳೆ ಖಾಲಿ ಮೈದಾನಗಳಲ್ಲಿ ಪಂದ್ಯಾವಳಿ ನಡೆಸಬೇಕಾದಂತಹ ಪರಿಸ್ಥಿತಿ ಎದುರಾದರೆ ಬಿಸಿಸಿಐ ಅದಕ್ಕೂ ಸಿದ್ಧವಿದೆ ಎಂದು ಸೌರವ್ ಪತ್ರದಲ್ಲಿ ಹೇಳಿದ್ದಾರೆ. ಸುಮಾರು 400 ಕೋಟಿ ರೂ ವಹಿವಾಟಿನ ಈ ಪ್ರತಿಷ್ಠಿತ ಟೂರ್ನಿಯನ್ನು ಕೈಬಿಡುವ ಇಲ್ಲವೇ ಈ ವರ್ಷದ ಮಟ್ಟಿಗೆ ಸ್ಥಿಗತಗೊಳಿಸುವ ಪ್ರಶ್ನೆಯೇ ಇಲ್ಲ.

ಪಂದ್ಯಾವಳಿಯನ್ನು ಸುಸೂತ್ರವಾಗಿ ನಡೆಸಲು ಬೇಕಾದ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಗಂಗೂಲಿ ತಮ್ಮ ಪತ್ರದಲ್ಲಿ ರಾಜ್ಯಗಳಿಗೆ ಆಶ್ವಾಸನೆ ನೀಡಿದ್ದಾರೆ. ಮಾಚ್‌ 29ರಿಂದಲೇ ಐಪಿಎಲ್ ಆರಂಭವಾಗಬೇಕಿತ್ತು. ಆದರೆ ಕೊರೋನಾ ಕಾಟದಿಂದ ತಪ್ಪಿಸಿಕೊಳ್ಳುವ ಸಲುವಾಗಿ ಲಾಕ್‌ಡೌನ್ ಘೋಷಣೆಯಾದ ಕಾರಣ ಪಂದ್ಯವಾಳಿ ಮುಂದೂಡಿಕೆಯಾಗಿತ್ತು.

ಈ ಮಧ್ಯೆ ಒಂದು ವೇಳೆ ಭಾರತಕ್ಕೆ ಕಷ್ಟ ಎನ್ನುವುದಾದರೆ ಐಪಿಎಲ್‌ಗೆ ಆತಿಥ್ಯ ವಹಿಸಲು ದಕ್ಷಿಣ ಆಫ್ರಿಕಾ, ಶ್ರೀಲಂಕಾ ಹಾಗೂ ಯುಎಇ ದೇಶಗಳು ಮುಂದೆ ಬಂದಿವೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights