ಕೊರೊನಾ ಆಸ್ಪತ್ರೆಗಳಲ್ಲಿ ಅವ್ಯವಸ್ಥೆ; ರೋಗಿಗಳಿಗೆ ಹಳಸಿದ ಅನ್ನವೇ ಗತಿ!

ಕೊರೊನಾ ಆಸ್ಪತ್ರೆಗಳು ಅವ್ಯವಸ್ಥೆಯ ಆಗರಗಳಾಗುತ್ತಿವೆ. ಕೊರೊನಾ ಸೋಂಕಿತರ ಚಿಕಿತ್ಸೆಗಾಗಿ ಮೀಸಲಾಗಿರುವ ಆಸ್ಪತ್ರೆಗಳಿಗೆ ದಾಕಕಲಾದರೆ, ಅಲ್ಲಿಯೇ ಮತ್ತಷ್ಟು ರೋಗಗಳು ಬರುವ ಸಾಧ್ಯತೆಯಿದೆ ಎಂದು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದವರ ಹಾಗೂ ಪಡೆಯುತ್ತಿರುವವರ ಅಭಿಪ್ರಾಯಗಳೂ ಆಗಿವೆ.

ಕೊರೊನಾ ಆಸ್ಪತ್ರೆಗಳ ಅವ್ಯವಸ್ಥೆಗಳ ಬಗ್ಗೆ ಸೋಂಕಿತರು ಸಹಿಸಲಾರದೆ ವಿಡಿಯೋಗಳನ್ನು ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿದ್ದಾರೆ. ಅಂತಹದೊಂದು ವಿಡಿಯೋ ಇಂದು ವೈರಲ್‌ ಆಗಿದೆ.

ಬಾಗಲಕೋಟೆ ಜಿಲ್ಲೆಯ ಕೊರೊನಾ ಸೋಂಕಿತರಿಗಾಗಿ ಮೀಸಲಿರಿಸಲಾಗಿರುವ ಬಾಗಲಕೋಟೆ ಜಿಲ್ಲಾ ಆಸ್ಪತ್ರೆಯಲ್ಲಿ ಸೋಂಕಿತರು ಹಸಿದೇ ಮಲಗುವಂತಹ ದುಸ್ಥಿತಿ ನಿರ್ಮಾಣವಾಗಿದೆ. ಕೊರೊನಾ ಸೋಂಕಿತರನ್ನು ಕ್ವಾರಂಟೈನ್‌ ಮಾಡಲಾಗಿರುವ ಬಾಗಲಕೋಟೆಯ ಜಿಲ್ಲಾ ಆಸ್ಪತ್ರೆಯಲ್ಲಿ ಸೋಂಕಿತರಿಗೆ ಹಳಸಿದ ಅನ್ನವನ್ನು ನೀಡಲಾಗುತ್ತಿದೆ ಎಂದು ವಿಡಿಯೋ ಮಾಡಿ ಸೋಂಕಿತರು ಹರಿ ಬಿಟ್ಟಿದ್ದಾರೆ.

ಕೊರೊನಾ ರೋಗಿಗಳಿಗೆ ಹಳಸಿದ ಅನ್ನ ಹಾಕಿದ ಬಾಗಲಕೋಟೆ ಜಿಲ್ಲಾ ಕೊರೊನಾ ಆಸ್ಪತ್ರೆ.!!

Posted by EnSuddi on Monday, July 20, 2020

ಹಲವಾರು ದಿನಗಳಿಂದ ಆಸ್ಪತ್ರೆಯಲ್ಲಿ ಕ್ವಾರಂಟೈನ್‌ನಲ್ಲಿರುವ ಸೋಂಕಿತರಿಗೆ ಹಳಸಿರುವ ಅನ್ನವನ್ನು ನೀಡಲಾಗುತ್ತಿದ್ದು, ಸಮಯಕ್ಕೆ ಸರಿಯಾಗಿ ಆಹಾರವೂ ಸಿಗುತ್ತಿಲ್ಲ ಎಂದು ಹೇಳಲಾಗಿದೆ. ಇಂದು ಬೆಳಗ್ಗೆ ಉಪಹಾರಕ್ಕಾಗಿ ಚಿತ್ರಾನ್ನವನ್ನು ನೀಡಲಾಗಿದ್ದು, ಅನ್ನ ಹಳಸಿಹೋಗಿದ್ದು, ಯಾವೊಬ್ಬ ಸೋಂಕಿತರು ತಿಂಡಿಯನ್ನು ತಿಂದಿಲ್ಲ ಎಂದು ಹೇಳಿದ್ದಾರೆ.

ಕೊರೊನಾ ಅಸ್ಪತ್ರೆಗಳಲ್ಲಿ ಇದು ಇದೇ ಮೊದಲೇ ಏನೂ ಅಲ್ಲ. ಕಳೆದ ತಿಂಗಳು ಹೊರ ರಾಜ್ಯಗಳಿಂದ ಬೆಂಗಳೂರಿಗೆ ಬಂದವರನ್ನು ಕ್ವಾರಂಟೈನ್‌ ಮಾಡಲು ಮೀಸಲಿಟ್ಟಿದ್ದ ಕಟ್ಟಡದಲ್ಲಿ ನೀರಿನ ಸೌಲಭ್ಯವಿಲ್ಲ, ಆಹಾರ ಸಿಗುತ್ತಿಲ್ಲ ಎಂದು ಹೇಳಿ ಕ್ವರಂಟೈನ್‌ ಸ್ಥಳದ ಟೆರಸ್‌ ಮೇಲೆ ಪ್ರತಿಭಟಿಸಿ ಲೈವ್ ಮಾಡಲಾಗಿತ್ತು. ಇದು ಸರಣಿ ರೀತಿಯಲ್ಲಿ ಎಲ್ಲೆಡೆ ತೆರೆದುಕೊಳ್ಳುತ್ತಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights