ಕೊಳ್ಳುವವರ ವಿವರ ಪಡೆಯದೆ ಔಷಧಿ ಮಾರಟ ಮಾಡಿದ 110 ಮೆಡಿಕಲ್ ಸ್ಟೋರ್‌ಗಳ ಪರವಾನಗಿ ರದ್ದು!

ಕೊರೊನಾ ಸಂಬಂಧಿ ರೋಗ ಲಕ್ಷಣಗಳಾದ ನೆಗಡಿ, ಕೆಮ್ಮು, ಜ್ವರ ಇನ್ನಿತರ ಸಮಸ್ಯೆಗಳಿಗೆ ಔಷಧ ಖರೀದಿಸುವವರ ವಿವರಗಳನ್ನು ಪಡೆದು ಫಾರ್ಮಾ ಪೋರ್ಟ್‍ನಲ್ಲಿ ಭರ್ತಿ ಮಾಡದೆ ನಿರ್ಲಕ್ಷ ತೋರಿಸಿರುವ ಮೆಡಿಕಲ್ ಸ್ಟೋರ್‌ಗಳ ಪರವಾನಗಿಗಳನ್ನು ರದ್ದುಗೊಳಿಸಲಾಗಿದೆ.

ಕೊರೊನಾ ಲಕ್ಷಣಗಳಂತಹ ಆರೋಗ್ಯ ಸಮಸ್ಯಗಳಿಗೆ ಮೆಡಿಕಲ್ ಶಾಪ್‍ಗಳಲ್ಲಿ ಔಷಧಿ ಖರೀದಿಸುವವರ ವಿವರಗಳನ್ನು ಪಡೆದುಕೊಳ್ಳುವುದನ್ನು ಕಡ್ಡಾಯ ಮಾಡಲಾಗಿದ್ದರೂ, ವಿವಿರಗಳನ್ನು  ಪಡೆಯದೆ ಔಷಧಿ ಮಾರಾಟ ಮಾಡಲಾಗುತ್ತಿದೆ. ಕೊರೊನಾ ಸಂದಿಗ್ದ ಪರಿಸ್ಥಿತಿಯಲ್ಲಿ ಇಂತಹ ಬೇಜವಾಬ್ದಾರಿ ತೋರಿರುವ ಔಷಧಿ ಮಳಿಗೆಗಳ ಪರಾವನಿಗೆ ರದ್ದು ಪಡಿಸಿ ಅಮಾನತಿನಲ್ಲಿಡಲು ಸರ್ಕಾರ ಸೂಚಿಸಿದೆ.

ಸರ್ಕಾರವು ಆರೋಗ್ಯ ಅಗತ್ಯತೆಗಳನ್ನು ತಲುಪಿಸಲು ಮತ್ತು ಹೆಚ್ಚಿನ ಅಪಾಯದಲ್ಲಿರುವವರನ್ನು ರಕ್ಷಿಸಲು ಹಾಗೂ ಸಾಂಕ್ರಾಮಿಕ ರೋಗದ ಪ್ರಾಥಮಿಕ ಲಕ್ಷಣಗಳನ್ನು ಗುರುತಿಸಲು ಔಷಧಿ ಅಂಗಡಿಗಳಿಂದ ಖರೀದಿಸಿದ ಮಾಹಿತಿಯು ಮಹತ್ವದ್ದಾಗಿದೆ.

ಇದಕ್ಕಾಗಿ ಆರೋಗ್ಯ ಮತ್ತು ಕುಟುಂಬ ಇಲಾಖೆಯು ಔಷಧಿ ಖರೀದಿಸುವವರ ಮಾಹಿತಿಯನ್ನು ವೆಬ್‍ಗೆ ಹಾಕಲು ತಿಳಿಸಿತ್ತು. ಇದರಲ್ಲಿ ವಿಫಲವಾಗಿರುವ 110 ಮೆಡಿಕಲ್ ಶಾಪ್‍ಗಳನ್ನು ನಿರ್ದಿಷ್ಟ ಅವಧಿಗೆ ಅಮಾನತು ಮಾಡಲಾಗಿದೆ.

ಕಲಬುರಗಿ- 70, ಬೆಂಗಳೂರು -03, ಬೀದರ್ – 4, ವಿಜಯಪುರ – 15, ಮೈಸೂರು- 4, ರಾಯಚೂರು- 9, ಬಾಗಲಕೋಟೆ- 5 ಒಟ್ಟು 110 ಔಷಧಿ ಅಂಗಡಿಗಳ ಪರವಾನಗಿ ಅಮಾನಪಡಿಸಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights