ಜಮಖಂಡಿಯಲ್ಲಿ ಪಾಸಿಟಿವ್ ರಿಪೋರ್ಟ್ ಬಂದ ವ್ಯಕ್ತಿ ನಾಪತ್ತೆ : ಜನರಲ್ಲಿ ಹೆಚ್ಚಿದ ಆತಂಕ!

ಬಾಗಲಕೋಟೆ ಜಮಖಂಡಿಯಲ್ಲಿ ಪಾಸಿಟಿವ್ ರಿಪೋರ್ಟ್ ಬಂದ ವ್ಯಕ್ತಿ ನಾಪತ್ತೆಯಾಗಿದ್ದು, ಆರೋಗ್ಯ ಇಲಾಖೆ ಹಾಗೂ ಪೊಲೀಸರಿಗೆ ದೊಡ್ಡ ತಲೆನೋವಾಗಿದೆ.

ಹೌದು.. ತಪ್ಪು ಅಡ್ರೆಸ್ ಕೊಟ್ಟು ಆರೋಗ್ಯ ಇಲಾಖೆಗೆ ಯಾಮಾರಿಸಿದ ವ್ಯಕ್ತಿಯನ್ನು ಹುಡುಕಲು ಆರೋಗ್ಯ ಇಲಾಖೆ ಹಾಗೂ ಪೊಲೀಸ್ ಸಿಬ್ಬಂದಿಗಳು ಹರಸಾಹಸ ಪಡುತ್ತಿದ್ದಾರೆ. ಕಳೆದ ಎರಡು ದಿನಗಳಿಂದ ಹುಡುಕಾಟ, ಇನ್ನೂ ಪತ್ತೆಯಾಗದ ಸೋಂಕಿತ ವ್ಯಕ್ತಿಯ ಬಗ್ಗೆ ಜನರಲ್ಲಿ ಆತಂಕ ಹೆಚ್ಚಾಗಿದೆ.

ಜುಲೈ 13ರಂದು ಗಂಟಲು ದ್ರವ ಪರೀಕ್ಷೆಗೆ ಸ್ಯಾಂಪಲ್ ಗಾಗಿ ಬಾಗಲಕೋಟೆ ಜಿಲ್ಲೆ ಜಮಖಂಡಿ ನಗರಕ್ಕೆ ಬಂದಿದ್ದ ವ್ಯಕ್ತಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ.  ಸ್ಯಾಂಪಲ್ ಕೊಡುವ ವೇಳೆ ಜಮಖಂಡಿಯ ರಹಮತ್ ನಗರದ ವಿಳಾಸ ಕೊಟ್ಟಿದ್ದ ವ್ಯಕ್ತಿ  ತನ್ನ ಬಳಿ ಮೊಬೈಲ್ ಇಲ್ಲವೆಂದು ಹೇಳಿದ್ದಾನೆ.

ಸ್ಯಾಂಪಲ್ ಪಡೆದು ಮನೆಯಲ್ಲಿರುವಂತೆ ವೈದ್ಯರು ವ್ಯಕ್ತಿಗೆ ಸೂಚಿಸಿದ್ದಾರೆ. ಜುಲೈ 19ರಂದು ಪಾಸಿಟಿವ್ ಬಂದ ವೇಳೆ ಪಿ-61334,45 ವರ್ಷದ ಸೋಂಕಿತ ವ್ಯಕ್ತಿ ವಿಳಾಸ ಹುಡುಕಿಕೊಂಡು ಹೋದವರಿಗೆ ಶಾಕ್ ಆಗಿದೆ.

ವ್ಯಕ್ತಿ ಕೊಟ್ಟ ವಿಳಾಸದಲ್ಲಿ ಸೋಂಕಿತ ವ್ಯಕ್ತಿಯೇ ವಾಸ ಇಲ್ಲ ಎಂದು ತಿಳಿದು ಬಂದಿದೆ. ಸದ್ಯ  ಡಿಎಚ್ ಓ ಅನಂತ್ ದೇಸಾಯಿ ಮಾಹಿತಿ ಪ್ರಕಾರ ಸೋಂಕಿತ ವ್ಯಕ್ತಿಯ ಹುಡುಕಾಟ ನಡೆದಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights