ಸರ್ಕಾರಿ ಬಂಗಲೆಯನ್ನು ಖಾಲಿ ಮಾಡುವಂತೆ ಕಾಂಗ್ರೆಸ್‌ ಮುಖಂಡೆ ಪ್ರಿಯಾಂಕ ಗಾಂಧಿಗೆ ನೋಟಿಸ್

‌ ಕಾಂಗ್ರೆಸ್ ಮುಖಂಡೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಆಗಸ್ಟ್ 1 ರೊಳಗೆ ದೆಹಲಿಯಲ್ಲಿರುವ ತನ್ನ ಸರ್ಕಾರಿ ಬಂಗಲೆ ಖಾಲಿ ಮಾಡುವಂತೆ ಕೋರಲಾಗಿದೆ. ಸರ್ಕಾರದ ನೋಟಿಸ್‌ನಲ್ಲಿ ಅವರಿಗೆ ನೀಡಲಾಗಿದ್ದ ಬಂಗಲೆಯ ಸೌಲಭ್ಯವನ್ನು ಇಂದು (ಬುಧವಾರ) ರದ್ದುಗೊಳಿಸಲಾಗಿದೆ ಹಾಗೂ ಅವರು 3.46 ಲಕ್ಷ ರೂ.ಗಳನ್ನು ಬಾಕಿ ಉಳಿಸಿಕೊಂಡಿದ್ದಾರೆಂದು ಹೇಳಿದೆ.

ನೋಟಿಸ್‌ನಲ್ಲಿ, ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಪ್ರಿಯಾಂಕಾ ಗಾಂಧಿ ಅವರಿಗೆ ವಿಶೇಷ ರಕ್ಷಣಾ ಸಮೂಹ ಭದ್ರತೆ ಇಲ್ಲದಿರುವುದರಿಂದ, ಅವರಿಗೆ 1997ರಲ್ಲಿ ಲೋಡಿ ಎಸ್ಟೇಟ್‌ನಲ್ಲಿ ನೀಡಲಾಗಿರುವ ಬಂಗಲೆ (35) ರಿಂದ ನಿರ್ಗಮಿಸಬೇಕು ಎಂದು ಹೇಳಿದೆ.

ಗೃಹ ಸಚಿವಾಲಯವು ಪ್ರಿಯಾಂಕ ಅವರಿಗೆ ಭದ್ರತೆಯ ಆಧಾರದ ಮೇಲೆ ವಿನಾಯಿತಿ ನೀಡದ ಹೊರತು ಆಕೆಗೆ ಬಂಗಲೆಯಲ್ಲಿ ಉಳಿಯುವ ಅರ್ಹತೆ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

“ಗೃಹ ಸಚಿವಾಲಯವು ಎಸ್‌ಪಿಜಿ ರಕ್ಷಣೆ ಮತ್ತು Z+ ಸೆಕ್ಯುರಿಟಿ ಕವರ್ ಅನ್ನು ಹಿಂತೆಗೆದುಕೊಂಡ ನಂತರ, ನಿಮಗೆ ಭದ್ರತಾ ನೆಲೆಯಲ್ಲಿ ಸರ್ಕಾರಿ ವಸತಿ ಸೌಕರ್ಯಗಳನ್ನು ಪಡೆಯುವ ಅವಕಾಶವಿಲ್ಲ. ಹಾಗಾಗಿ 01/07/2020 ರಿಂದ ದೆಹಲಿಯ ಲೋದಿ ಎಸ್ಟೇಟ್‌ನ  ಟೈಪ್ 6ಬಿ ಮನೆ ಸಂಖ್ಯೆ 35ರಿಂದ ವಸತಿ ಸೌಲಭ್ಯವನ್ನು ರದ್ದುಪಡಿಸಲಾಗಿದೆ”ಎಂದು ಸಚಿವಾಲಯದ ನೋಟಿಸ್‌ನಲ್ಲಿ ತಿಳಿಸಲಾಗಿದೆ.

ಪ್ರಿಯಾಂಕಾ ಗಾಂಧಿ ಅವರು ಆಗಸ್ಟ್ 1 ರ ನಂತರವೂ ಅದೇ ಮನೆಯಲ್ಲಿ ಉಳಿದಿದ್ದರೆ, ಅವರು ದಂಡವನ್ನು ಪಾವತಿಸಬೇಕಾಗುತ್ತದೆ ಎಂದು ತಿಳಿಸಲಾಗಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights