Cricket: ಬುಧವಾರದಿಂದ ಮತ್ತೆ ಶುರುವಾಗಲಿದೆ ಕ್ರಿಕೆಟ್ ಹಂಗಾಮ

ಇಷ್ಟುದಿನ ಹಳೇ ಪಂದ್ಯಗಳನ್ನೇ ಪದೇ ಪದೇ ನೋಡಿ ಸಾಕಾಗಿದ್ದ ಕ್ರಿಕೆಟ್ ಅಭಿಮಾನಿಗಳಿಗೆ ಜು. 8 ರಿಂದ ಲೈವ್ ಕ್ರಿಕೆಟ್ ಸವಿಯುವ ಸೌಭಾಗ್ಯ.. ಕೊರೊನಾ ಜೊತೆಯಲ್ಲೇ ಆಟ ಶುರುವಾಗಲಿದೆ.. ಸೆಲಬ್ರೇಷನ್‌ಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಾಗಿದೆ.. ಇದು ಐಸಿಸಿ ಯ ಕಟ್ಟುನಿಟ್ಟಿನ ನಿಯಮ…

ಕೊರೊನಾದಿಂದ ಕಂಗಾಲಾಗಿದ್ದ ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ದಿನಗಳ ಹತ್ತಿರವಾಗುತ್ತಿವೆ. ಇನ್ನೂ ಕೆಲವೇ ದಿನಗಳಲ್ಲಿ ಕ್ರಿಕೆಟ್ ಮತ್ತೆ ಆರಂಭವಾಗಲಿದೆ.  ಇನ್ನೂ ಲೈವ್ ಮ್ಯಾಚ್ ನೋಡೋಕೆ ಉತ್ಸುಕರಾಗಿದ್ದಾರೆ. ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ನಡುವಣ ಮೂರು ಪಂದ್ಯಗಳ ಟೆಸ್ಟ್ ಸರಣಿ ಜುಲೈ 8 ರಿಂದ ಆರಂಭವಾಗಲಿದೆ. ಇದ್ರೊಂದಿಗೆ ಕೊರೊನಾದಿಂದ ತಾತ್ಕಾಲಿಕ ಬ್ರೇಕ್‌ ಪಡೆದಿದ್ದ ಕ್ರಿಕೆಟ್ ಲೋಕ ಮತ್ತೆ ಆರಂಭವಾಗಲಿದೆ. ಕೊರೋನಾ ಭಯ ಇನ್ನೂ ಮಾಸದ ಕಾರಣ ಒಂದಷ್ಟು ಮುಂಜಾಗ್ರತೆಯೊಂದಿಗೆ ಕ್ರಿಕೆಟಿಗರು ಮೈದಾನಕ್ಕಿಳಿಯಲಿದ್ದಾರೆ.

ಸೌತಾಂಪ್ಟನ್​​ನ ಏಜಸ್ ಬೌಲ್ ಕ್ರೀಡಾಂಗಣ ಕೊರೋನೋತ್ತರದ ಐತಿಹಾಸಿಕ ಟೂರ್ನಿಗೆ ಆತಿಥ್ಯ ವಹಿಸಿದೆ. ಎರಡು ಹಾಗೂ ಮೂರನೇ ಟೆಸ್ಟ್ ಮ್ಯಾಂಚೆಸ್ಟರ್​​ನಲ್ಲಿ ಆಯೋಜನೆಗೊಂಡಿದೆ. ಆಟಗಾರರ ಆರೋಗ್ಯದ ದೃಷ್ಟಿಯಿಂದ ಜೈವಿಕ ಸುರಕ್ಷಿತ ವಾತಾವರಣ ನಿರ್ಮಾಣ‌ ಮಾಡಲಾಗಿದೆ.

ಆಟಗಾರರು ತಮ್ಮ ತಂಡದವರನ್ನ ಬಿಟ್ಟು ಬೇರೆ ಯಾರನ್ನೂ ಭೇಟಿ ಮಾಡುವಂತಿಲ್ಲ. ಶಾಂಪಿಂಗ್ ಇತರೆ ಓಡಾಟ ಎಲ್ಲಕ್ಕೂ ಕತ್ತರಿ. ಮುಖ್ಯವಾಗಿ ಮೈದಾನವನ್ನ ಸುರಕ್ಷಿತಗೊಳಿಸುವುದು. ಆಟಗಾರರ ಓಡಾಟ ಹೊರಗಿನ ಸಂಪರ್ಕಕ್ಕೆ ಸಂಪೂರ್ಣ ನಿಷೇಧ. ಪಂದ್ಯ ಮುಕ್ತಾಯ ಬಳಿಕ ನೇರವಾಗಿ ಹೋಟೆಲ್​​ಗೆ ತೆರಳುವುದು ಹಾಗೂ ಸಂಭ್ರಮಾಚರಣೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights