ಕೋವಿಡ್-19 ಪ್ರಕರಣಗಳನ್ನು ನಿಭಾಯಿಸಲು ಯುಎಸ್ ಆಸ್ಪತ್ರೆಗಳು ಹೈರಾಣ..!

ಜಗತ್ತಿನಾದ್ಯಂತ ಹೊಸ ಕೊರೊನಾವೈರಸ್ ಪ್ರಕರಣಗಳು ಹೆಚ್ಚಾಗುತ್ತಿರುವ ಬೆನ್ನಲ್ಲೆ ಯುನೈಟೆಡ್ ಸ್ಟೇಟ್ಸ್ನ ಕೆಲವು ಭಾಗಗಳಲ್ಲಿ ಕೊರೊನಾ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ತುರ್ತು ಕೋಣೆಗಳಲ್ಲಿ ಬೆಡ್ ಗಳಿಲ್ಲದೇ ಕೆಲವು ರೋಗಿಗಳನ್ನು ಸ್ಥಳಾಂತರಗೊಳಿಸಲಾಗುತ್ತಿದೆ. ಇದರಿಂದ ದಾದಿಯರು ಹೆಚ್ಚುವರಿ ಪಾಳಿಗಳಲ್ಲಿ ಕೆಲಸ ಮಾಡುವಂತಾಗಿದೆ. ಆದರೂ ನರ್ಸ್ ಗಳ ಸಂಖ್ಯೆ ಸಾಕಾಗುತ್ತಿಲ್ಲ. ಇರೋ ನರ್ಸ್ ಗಳೇ ಹಗಲಿರುಳು ಕೆಲಸ ಮಾಡಿ ಹೈರಾಣಾಗಿದ್ದಾರೆ.

ಯುನೈಟೆಡ್ ಸ್ಟೇಟ್ಸ್ನಲ್ಲಿ ಅನೇಕ ಸನ್ಬೆಲ್ಟ್ ರಾಜ್ಯಗಳಲ್ಲಿ ಸೋಂಕುಗಳು ಗಗನಕ್ಕೇರುತ್ತಿವೆ. ತೀವ್ರ ನಿಗಾ ಘಟಕಗಳಲ್ಲಿ ರೋಗಗಳ ಸಂಖ್ಯೆ ಹೆಚ್ಚಾಗಿದ್ದು ಉಸಿರಾಡಲು ಹೆಣಗಾಡುತ್ತಿರುವ ರೋಗಿಗಳನ್ನು ತುರ್ತು ವಾರ್ಡ್‌ಗಳಲ್ಲಿ ಇರಿಸಲಾಗುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ನಿರಂತರ ಎದೆ ನೋವು, ಉಸಿರಾಟ ಮತ್ತು ನಾನಾ ಸಮಸ್ಯೆಗಳನ್ನು ಎದುರಿಸುತ್ತಿರುವುದರಿಂದ ಲಭ್ಯವಿರುವ ನರ್ಸ್ ಗಳು ಸಾಕಾಗುತ್ತಿಲ್ಲ.  ಚಿಕಿತ್ಸೆ ನೀಡಲು ಆಸ್ಪತ್ರೆ ಸಿಬ್ಬಂದಿಗಳನ್ನು ಹೆಚ್ಚಿಸಲಾಗುತ್ತಿದೆಯಾದರು ಇರುವ ನರ್ಸ್ ಗಳು ಹಗಲಿರುಳು ಶ್ರಮಪಡುತ್ತಿದ್ದಾರೆ.

ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾನಿಲಯದ ಪ್ರಕಾರ, ವಿಶ್ವದಾದ್ಯಂತ ದೃಢೀಕರಿಸಿದ ಕೊರೋನವೈರಸ್ ಪ್ರಕರಣಗಳು 14 ಮಿಲಿಯನ್ ಮೀರಿದೆ. ಸಾವುಗಳು 6,00,000 ಕ್ಕೆ ತಲುಪಿದೆ. ಶುಕ್ರವಾರ, ವಿಶ್ವ ಆರೋಗ್ಯ ಸಂಸ್ಥೆ ಹೊಸ ಸೋಂಕುಗಳನ್ನು ಒಂದೇ ದಿನದ ದಾಖಲೆಯನ್ನು 237,000 ಕ್ಕಿಂತ ಹೆಚ್ಚು ವರದಿ ಮಾಡಿದೆ. ಪ್ರಕರಣಗಳ ಪಟ್ಟಿಯಲ್ಲಿ ಯುನೈಟೆಡ್ ಸ್ಟೇಟ್ಸ್, ಬ್ರೆಜಿಲ್ ಮತ್ತು ಭಾರತ ಅಗ್ರಸ್ಥಾನದಲ್ಲಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights