ಕಾಂಗ್ರೆಸ್‌ ಬಿಕ್ಕಟ್ಟು: ಆರು ತಿಂಗಳ ಅವಧಿಗೆ ಸೋನಿಯಾ ಗಾಂಧಿ ಎಐಸಿಸಿ ಅಧ್ಯಕ್ಷೆ!

ರಾಷ್ಟ್ರೀಯ ಕಾಂಗ್ರೆಸ್‌ನಲ್ಲಿ ಉದ್ಭವಿಸಿರುವ ಆತಂರಿಕ ಬಿಕ್ಕಟ್ಟನ್ನು ಪರಿಹರಿಸಲು ನಿನ್ನೆ ನಡೆದ ಸಭೆಯು ಕೆಲವು ನಿರ್ಧಾರಗಳೊಂದಿಗೆ ಅಂತ್ಯಗೊಂಡಿದೆ. ನಾಯಕತ್ವ ಬದಲಾವಣೆ ಬಗ್ಗೆ ನಡೆದ ಸುಧೀರ್ಘ ಚರ್ಚೆಯು ಸೋನಿಯಾಗಾಂಧಿಯವರೇ ಆರು ತಿಂಗಳ ಅವಧಿಗೆ ಎಐಸಿಸಿ ಅಧ್ಯಕ್ಷರಾಗಿ ಮುಂದುವರೆಯಬೇಕು. ಆ ವೇಳೆಗೆ ಹೊಸ ನಾಯಕರನ್ನು ಹುಡುಕಬೇಕು ಎಂಬ ನಿರ್ಧಾರದೊಂದಿಗೆ ಅಮತ್ಯ ಗೊಂಡಿದೆ.

ನಾಯಕತ್ವ ಬದಲಾವಣೆಗೆ ಆಗ್ರಹಿಸಿ 23 ಹಿರಿಯ ನಾಯಕರ ಪತ್ರದ ಹಿನ್ನೆಲೆಯಲ್ಲಿ ಸೋನಿಯಾ ಗಾಂಧಿ ರಾಜೀನಾಮೆ ಪ್ರಸ್ತಾಪ ಸಲ್ಲಿಸಿದ್ದರು. ಆದರೆ, ಕಾರ್ಯಕಾರಿಣಿ ಸಭೆಯಲ್ಲಿ ಭಾಗಿಯಾಗಿದ್ದ ಹಿರಿಯ ನಾಯಕರ ಒತ್ತಾಯದಿಂದಾಗಿ ಸೃಷ್ಟಿಯಾದ ಅನಿವಾರ್ಯ ಪರಿಸ್ಥಿತಿ ಹಿನ್ನೆಲೆಯಲ್ಲಿ ಅಧ್ಯಕ್ಷ ಸ್ಥಾನದಲ್ಲಿ ಆರು ತಿಂಗಳ ಅವಧಿಗೆ ಮುಂದುವರಿಸಲಿದ್ದಾರೆ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

ಸಭೆಯಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್‌ ಗಾಂಧಿ ನಾಯಕತ್ವಕ್ಕೆ ಹಲವರು ಬೆಂಬಲ ವ್ಯಕ್ತಪಡಿಸಿದ್ದಾರೆ. ನಾಯಕತ್ವ ಬದಲಾವಣೆಗಾಗಿ ಪತ್ರ ಬರೆದವರನ್ನು ‘ಬಂಡಾಯಕೋರರು’ ಎಂದು ಹೇಳಾಗಿದ್ದು, ಹಿರಿಯ ನಾಯಕರು ಪತ್ರ ಬರೆದದ್ದು ‘ಕ್ರೂರ’, ‘ದುರದೃಷ್ಟಕರ’ ಎಂದು ಅಭಿಪ್ರಾಯ ವ್ಯಕ್ತವಾಗಿದೆ.

”ಕಾಂಗ್ರೆಸ್‌ ಅತ್ಯಂತ ದುರ್ಬಲ ಸ್ಥಿತಿಯಲ್ಲಿದೆ. ರಾಜಸ್ಥಾನ, ಮಧ್ಯ ಪ್ರದೇಶದಲ್ಲಿ ಬಿಕ್ಕಟ್ಟು ಶಮನಕ್ಕೆ ಹೋರಾಡುತ್ತಿದೆ. ಇಂತಹ ಸಮಯದಲ್ಲಿ ಪಕ್ಷದ ನಾಯಕತ್ವವನ್ನು ದೂಷಿಸಿ ಪತ್ರ ಬರೆದಿರುವುದು ದುರದೃಷ್ಟಕರ ಎಂದು ಸಭೆಯಲ್ಲಿ ರಾಹುಲ್‌ ಗಾಂಧಿ,ಹೇಳಿದ್ದಾರೆ.

ಅಲ್ಲದೆ, ವಿವಿಧ ರಾಜ್ಯಗಳ ಕಾಂಗ್ರೆಸ್‌ ನಾಯಕರು ಸೋನಿಯಾ ಗಾಂಧಿ ಹಾಗೂ ರಾಹುಲ್‌ ಗಾಂಧಿಯವರ ನಾಯಕತ್ವಕ್ಕೆ ಬೆಂಬಲ ವ್ಯಕ್ತ ಪಡಿಸಿದ್ದು, ಕರ್ನಾಟಕದ ಕಾಂಗ್ರೆಸ್‌ ಅದ್ಯಕ್ಷ ಡಿಕೆ ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಈಶ್ವರ ಖಂಡ್ರೆ ಸೇರಿದಂತೆ ಹಲವು ನಾಯಕರು ರಾಹುಲ್‌ ಗಾಂಧಿ ನಾಯಕತ್ವಕ್ಕೆ ಒತ್ತಾಯಿಸಿದ್ದರು.


Read Also:  ಕಾಂಗ್ರೆಸ್‌ಗೆ ನಾಯಕತ್ವದ ಸಂಕಷ್ಟ: ಪಕ್ಷದೊಳಗೆ ಭುಗಿಲೆದ್ದ ಭಿನ್ನಮತ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights