ಧಾರ್ಮಿಕ ವಿಭಜನೆಯಿಂದ ಜಮ್ಮು ಕಾಶ್ಮೀರದಲ್ಲಿ ಹಿಂದೂ ಪ್ರಾಬಲ್ಯ ಹೆಚ್ಚಿಸಲು ಬಿಜೆಪಿ ಮುಂದಾಗಿದೆ: ಫಾರೂಕ್ ಅಬ್ದುಲ್ಲಾ

ಕೇಂದ್ರ ಸರ್ಕಾರವು ಕ್ಷೇತ್ರಗಳನ್ನು ಮರು ವಿಂಗಡಣೆ ಮಾಡುವ ಮೂಲಕ, ಮುಸ್ಲಿಂ ಬಹುಸಂಖ್ಯಾತ ಪ್ರದೇಶದಲ್ಲಿ ಹಿಂದೂ ಪ್ರಾಬಲ್ಯ ವನ್ನು ಸೃಷ್ಟಿಸಲು ಮತ್ತು ಕೇಂದ್ರಾಳಿತ ಪ್ರದೇಶವನ್ನು ಧಾರ್ಮಿಕ ದೃಷ್ಟಿಯಿಂದ ವಿಭಜಿಸಲು ಭಾರತೀಯ ಜನತಾ ಪಕ್ಷ (ಬಿಜೆಪಿ) ಯತ್ನಿಸುತ್ತಿದೆ ಎಂದು ಬಿಜೆಪಿ ಟೀಕೆ ಮಾಡಿದ್ದಕ್ಕಾಗಿ ಮೇ ತಿಂಗಳಿನಲ್ಲಿ ಡಿಲಿಮಿಟೇಶನ್ ಆಯೋಗದಿಂದ ತಮ್ಮ ನ್ಯಾಷನಲ್ ಕಾನ್ಫರೆನ್ಸ್‌ (ಎನ್‌ಸಿ) ಪಕ್ಷವನ್ನು ಹೊರಗಿಡಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಆರೋಪಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರ, ಅಸ್ಸಾಂ, ಅರುಣಾಚಲ ಪ್ರದೇಶ, ಮಣಿಪುರ ಮತ್ತು ನಾಗಾಲ್ಯಾಂಡ್‌ ರಾಜ್ಯಗಳಲ್ಲಿ ಇತ್ತೀಚೆಗೆ ನಡೆದ ಜನಗಣತಿಯ ಆಧಾರದ ಮೇಲೆ ಸಂಸತ್ತು ಮತ್ತು ವಿಧಾನಸಭಾ ಕ್ಷೇತ್ರಗಳನ್ನು ಪುನರ್ರಚಿಸಲು ಕೇಂದ್ರವು ಮಾರ್ಚ್‌ನಲ್ಲಿ ಆಯೋಗವನ್ನು ಸ್ಥಾಪಿಸಿತು. ಆಯೋಗದ ಸದಸ್ಯರಾಗಿ ಹೆಸರಿಸಲಾದ ಮೂವರು ಎನ್‌ಸಿ ಸಂಸದರಲ್ಲಿ ಓಮರ್ ಅಬ್ದುಲ್ಲಾ ಕೂಡ ಇದ್ದರು.

ಆ ಸಂದರ್ಭದಲ್ಲಿ, “ನಿಮ್ಮ ಡಿಲಿಮಿಟೇಶನ್ ಅನ್ನು ನಾವು ನಂಬುವುದಿಲ್ಲ.  ಬಿಜೆಪಿಗೆ ಒಂದು ನಿರ್ದಿಷ್ಟ ಉದ್ದೇಶವಿದೆ. ಕ್ಷೇತ್ರಗಳನ್ನು ಮರು ವಿಂಗಡಣೆ ಮಾಡುವುದರಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಂದೂ ಬಹುಮತವು ಹೊರಹೊಮ್ಮುತ್ತದೆ ಮತ್ತು ಮುಸ್ಲಿಂ ಬಹುಮತ ಕಡಿಮೆಯಾಗುತ್ತದೆ ಎಂದು ಅದು ಬಯಸಿದೆ”ಎಂದು ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಹೇಳಿದ್ದರು.

ಫಾರೂಕ್ ಅಬ್ದುಲ್ಲಾ ಅವರು ಮುಖ್ಯಮಂತ್ರಿಯಾಗಿದ್ದಾಗ, ಜಮ್ಮು ಮತ್ತು ಕಾಶ್ಮೀರದ ವಿಧಾನಸಭೆಯು 2026ರ ಚುನಾವಣೆ ಸಂದರ್ಭದಲ್ಲಿ ದೇಶದ ಉಳಿದ ಭಾಗಗಳೊಂದಿಗೆ ಕ್ಷೇತ್ರ ಮರ ಹಂಚಿಕೆ ಪ್ರಕ್ರಿಯೆ ನಡೆಸಲು ನಿರ್ಧರಿಸಲಾಗಿತ್ತು. ಆದರೆ, ಕೇಂದ್ರವು ಇದ್ದಕ್ಕಿದ್ದಂತೆ ಅದನ್ನು ಈಗ ಏಕೆ ಮುಂದಕ್ಕೆ ತಂದಿದೆ? ಅವರು ನಮ್ಮನ್ನು ಹಿಂದೂ-ಮುಸ್ಲಿಂ ಧರ್ಮದ ಆಧಾರದಲ್ಲಿ ವಿಭಜಿಸಿ ಹಿಂದೂ ಪ್ರಾಬಲ್ಯವನ್ನು ಸೃಷ್ಟಿಸಲು ಬಯಸುತ್ತಾರೆ. ಅದು ಎಂದಿಗೂ ಸಾಧ್ಯವಿಲ್ಲ” ಎಂದು ಅವರು ಹೇಳಿದರು.

Kashmir Article 370 abrogation: Why are Kashmiris opposing the government's move - NewsX

ಜಮ್ಮು ಮತ್ತು ಕಾಶ್ಮೀರವನ್ನು ಅದರ ವಿಶೇಷ ಸ್ಥಾನಮಾನದಿಂದ ದೂರವಿರಿಸಲು ಮತ್ತು ಅದನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸಲು ಕಳೆದ ವರ್ಷ ಆಗಸ್ಟ್‌ನಲ್ಲಿ ತಂದ ಸಾಂವಿಧಾನಿಕ ಬದಲಾವಣೆಗಳ ಉತ್ಪನ್ನ ಎಂದು ಡಿಲಿಮಿನೇಷನ್ ಆಯೋಗವನ್ನು ಸಂಸದ ಒಮರ್ ಅಬ್ದುಲ್ಲಾ ಕರೆದಿದ್ದಾರೆ.

“ಆಯೋಗದ ಸದಸ್ಯತ್ವವು ಒಬ್ಬರಿಗೆ ವೀಟೋ ಅಧಿಕಾರವನ್ನು ನೀಡುವುದಿಲ್ಲ. ನಮ್ಮ ಮೂವರು ಸಂಸದರು [ಸಂಸತ್ತಿನ ಸದಸ್ಯರು] ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಸಮರ್ಥವಾಗಿರಬಹುದು. ಆದರೆ ಅವರ ಅಭಿಪ್ರಾಯಗಳಿಗೆ ಆಯೋಗ ಬದ್ಧವಾಗಿರಲಿಲ್ಲ. ನಮ್ಮ ಭಾಗವಹಿಸುವಿಕೆಯನ್ನು ರಬ್ಬರ್ ಸ್ಟಾಂಪ್ ಆಗಿ ಬಳಸಲಾಗುತ್ತಿತ್ತು” ಎಂದು ಎಂದು ಒಮರ್ ಅಬ್ದುಲ್ಲಾ ಹೇಳಿದ್ದಾರೆ.

ಒಂದು ವರ್ಷದ ನಂತರ ಜಮ್ಮು ಮತ್ತು ಕಾಶ್ಮೀರದ ರಾಜಕೀಯ ವಾತಾವರಣವು ಮತ್ತೆ ಮುನ್ನೆಲೆ ಬರುತ್ತಿದೆ. ಕಳೆದ ವರ್ಷ ರಾಜ್ಯದ ವಿಶೇಷ ಸ್ಥಾನಮಾನವನ್ನು ಕಸಿದುಕೊಂಡ ನಂತರ ಎದುರಾದ ಪ್ರತಿಭಟನೆಗಳನ್ನು ನಿಂತ್ರಿಸಲು ನೂರಾರು ಜನರನ್ನು ಕೇಂದ್ರವು ಬಂಧಿಸಿತ್ತು. ಅವರಲ್ಲಿ ಫಾರೂಕ್ ಅಬ್ದುಲ್ಲಾ ಅವರೂ ಒಳಗೊಂಡಂತೆ ಮೂವರು ಮಾಜಿ ಮುಖ್ಯಮಂತ್ರಿಗಳನ್ನೂ ಬಂಧಿಸಲಾಗಿತ್ತು. ನಂತರ, ರಚನೆಯಾದ ಆರು ಪ್ರಾದೇಶಿಕ ಪಕ್ಷಗಳ ಒಕ್ಕೂಟದಲ್ಲಿ ಅಬ್ದುಲ್ಲಾ ಅವರ ಪಾತ್ರ ಹೆಚ್ಚಿನದ್ದಾಗಿದ್ದು, ಕೇಂದ್ರಕ್ಕೆ ಸವಾಲುವೊಡ್ಡಿ ನಿಂತಿದ್ದಾರೆ. ಒಕ್ಕೂಟ ರಚನೆಗೆ ಕಾರಣ, ಜಮ್ಮು ಮತ್ತು ಕಾಶ್ಮೀರಕ್ಕೆ ಮತ್ತೆ ವಿಶೇಷ ಸ್ಥಾನಮಾನ ಪುನಃಸ್ಥಾಪನೆಯ ಬೇಡಿಕೆಯಾಗಿದೆ.

ಪ್ರಧಾನಿ ನರೇಂದ್ರ ಮೋದಿ ತಮ್ಮ ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ, ಜಮ್ಮು ಮತ್ತು ಕಾಶ್ಮೀರದಲ್ಲಿ ಡಿಲಿಮಿಟೇಶನ್ ಪ್ರಕ್ರಿಯೆಯು ನಡೆಯಲಿದೆ. ನಂತರದಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ ಎಂದು ಹೇಳಿದ್ದಾರೆ. ಮುಂದಿನ ಚುನಾವಣೆಯಲ್ಲಿ ನ್ಯಾಷನಲ್ ಕಾನ್ಫರೆನ್ಸ್‌ ಪಕ್ಷ ಸ್ಪರ್ಧಿಸುವುದು ಪಕ್ಷದ ಮೇಲೆ ಅವಲಂಬಿತವಾಗಿದೆ. ನಾವು ಪರಿಸ್ಥಿತಿಯನ್ನು ಗಮನಿಸಿ ಕರೆ ತೆಗೆದುಕೊಳ್ಳುತ್ತೇವೆ. ಪಕ್ಷಗಳ ಒಕ್ಕೂಟದಲ್ಲಿ ಈ ಪ್ರಕ್ರಿಯೆ ಬಗ್ಗೆ ಮಾತನಾಡುತ್ತೇವೆ. ನಾವು ಒಂದಾಗಿ ನಿರ್ಧರಿಸುತ್ತೇವೆ” ಎಂದು ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ.

ಫಾರೂಕ್ ಅಬ್ದುಲ್ಲಾ ಮತ್ತು ಒಮರ್ ಅಬ್ದುಲ್ಲಾ ಅವರನ್ನು ಮಾರ್ಚ್‌ನಲ್ಲಿ ಬಿಡುಗಡೆ ಮಾಡಲಾಗಿದೆ. ಮತ್ತೊಬ್ಬ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರನ್ನು ಕಠಿಣ ಸಾರ್ವಜನಿಕ ಸುರಕ್ಷತಾ ಕಾಯ್ದೆಯಡಿ ಬಂಧನದಲ್ಲಿರಿಸಲಾಗಿದೆ. ಇದು ಎರಡು ವರ್ಷವೂ ವಿಚಾರಣೆಯಿಲ್ಲದೆ ಜೈಲುವಾಸ ಅನುಭವಿಸಲು ಪರಿಸ್ಥಿತಿಯನ್ನು ನಿರ್ಮಿಸಿದೆ.


ಇದನ್ನೂ ಓದಿ: ಸ್ಥಗಿತಗೊಂಡಿರುವ NRC ಮರುಪರಿಶೀಲನೆ: 19 ಲಕ್ಷ ಜನರು ಸಂಕಷ್ಟದಲ್ಲಿದ್ದಾರೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights