ದುಬೈ ಮತ್ತು ಅಭುದಾಬಿ ಸ್ಫೋಟಗಳಲ್ಲಿ ಮೂವರು ಸಾವು : ಹಲವರಿಗೆ ಗಾಯ!

ದುಬೈ ಆಂಡ್ ಅಭುದಾಬಿ ಎರಡು ಪ್ರತ್ಯೇಕ ಸ್ಫೋಟಗಳಲ್ಲಿ ಮೂವರು ಬೆಂಕಿಗಾಹುತಿಯಾಗಿ ಹಲವರು ಗಾಯಗೊಂಡಿದ್ದಾರೆ.

ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ರಾಜಧಾನಿ ಅಬುಧಾಬಿ ಮತ್ತು ಅದರ ಪ್ರವಾಸಿ ಕೇಂದ್ರವಾದ ದುಬೈನಲ್ಲಿ ಸೋಮವಾರ ನಡೆದ ಎರಡು ಪ್ರತ್ಯೇಕ ಸ್ಫೋಟಗಳಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಹಲವಾರು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಪೊಲೀಸರು ಮತ್ತು ಸ್ಥಳೀಯ ಮಾಧ್ಯಮಗಳು ಈ ಬಗ್ಗೆ ಮಾಹಿತಿ ನೀಡಿವೆ. ರಾಜಧಾನಿ ಅಬುಧಾಬಿಯಲ್ಲಿ ನಡೆದ ಸ್ಫೋಟದಲ್ಲಿ ಇಬ್ಬರು ಮೃತಪಟ್ಟಿದ್ದಾರೆ ಎಂದು ಅಬುಧಾಬಿ ಸರ್ಕಾರಿ ಮಾಧ್ಯಮ ಕಚೇರಿ ತಿಳಿಸಿದೆ.

ನಗರದ ರಶೀದ್ ಬಿನ್ ಸಯೀದ್ ರಸ್ತೆಯಲ್ಲಿರುವ ಕೆಎಫ್‌ಸಿ ಮತ್ತು ಹಾರ್ಡಿಸ್ ರೆಸ್ಟೋರೆಂಟ್‌ಗಳಲ್ಲಿ ಸ್ಫೋಟಗಳು ನಡೆದಿವೆ ಎಂದು ರಾಷ್ಟ್ರೀಯ ಪತ್ರಿಕೆ ವರದಿ ಮಾಡಿದೆ. ಈ ರಸ್ತೆ ವಿಮಾನ ನಿಲ್ದಾಣಕ್ಕೆ ಹೋಗುವ ಮಾರ್ಗವಾಗಿದೆ ಎಂದು ವಿವರಿಸಿವೆ. ಶೀಘ್ರದಲ್ಲೇ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕೂಡ ಶೀಘ್ರದಲ್ಲೇ ಈ ರಸ್ತೆಯ ಮೂಲಕ ಹಾದು ಹೋಗಲಿದ್ದಾರೆ. ವಿಶೇಷವೆಂದರೆ, ಯುಎಇ ಮತ್ತು ಇಸ್ರೇಲ್ ನಡುವಿನ ಸಂಬಂಧಗಳು ಈಗ ಸಾಮಾನ್ಯವಾಗಿದೆ. ಉಭಯ ದೇಶಗಳು ಇತ್ತೀಚೆಗೆ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿವೆ.

ಅಬುಧಾಬಿಯಲ್ಲಿ ನಡೆದ ಘಟನೆಯಲ್ಲಿ ಹಲವಾರು ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಕಟ್ಟಡ ಮತ್ತು ಸುತ್ತಮುತ್ತಲಿನ ಪ್ರದೇಶಗಳ ನಿವಾಸಿಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ ಎಂದು ಮಾಧ್ಯಮಗಳಿಗೆ ವರದಿ ಮಾಡಿವೆ. ಇಂಧನ ತುಂಬಿದ ನಂತರ ಗ್ಯಾಸ್ ಕಂಟೇನರ್ ಅಳವಡಿಸುವಲ್ಲಿನ ದೋಷದಿಂದಾಗಿ ಸ್ಫೋಟ ಸಂಭವಿಸಿದೆ ಎಂದು ಅಬುಧಾಬಿಯ ಸರ್ಕಾರಿ ಮಾಧ್ಯಮ ಕಚೇರಿ ವರದಿ ಮಾಡಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights