ಅಡುಗೆ ಅನಿಲ ಸಿಲಿಂಡರ್‌ನ ಸಬ್ಸಿಡಿಗೆ ಕತ್ತರಿ ಹಾಕಿದ ಕೇಂದ್ರ ಸರ್ಕಾರ

ಅಡುಗೆ ಅನಿಲ (ಎಲ್‌ಪಿಜಿ) ಸಿಲಿಂಡರ್‌ಗಳಿಗೆ ನೀಡಲಾಗುತ್ತಿದ್ದ ಸಬ್ಸಿಡಿಯನ್ನು ಕೇಂದ್ರ ಸರ್ಕಾರ ಸಂಪೂರ್ಣ ಸ್ಥಗಿತಗೊಳಿಸಿದೆ. ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆಗಳ ಕುಸಿತ ಮತ್ತು ಎಲ್ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಕಂಡುಬರುತ್ತಿರುವ ಏರಿಳಿತದಿಂದಾಗಿ ಅಡುಗೆ ಅನಿಲ ಖರೀದಿಯಲ್ಲಿ ಗ್ರಾಹಕರಿಗೆ ನೀಡಲಾಗುತ್ತಿದ್ದ ಸಬ್ಸಿಡಿಯನ್ನು ರದ್ದುಗೊಳಿಸಿರುವುದಾಗಿ ಸರ್ಕಾರ ಹೇಳಿದೆ.

ಇನ್ನು ಮುಂದೆ ನೇರ ಲಾಭ ವರ್ಗಾವಣೆ ಯೋಜನೆ (ಡಿಬಿಟಿ) ಅಡಿಯಲ್ಲಿ ಸಬ್ಸಿಡಿಯನ್ನು ಫಲಾನುಭವಿಗಳ ಖಾತೆಗೆ ವರ್ಗಾವಣೆ ಮಾಡಲಾಗುವುದಿಲ್ಲ ಎಂದು ಹೇಳಿದೆ.

ಲಾಕ್‌ಡೌನ್‌ ಕಾರಣಕ್ಕಾಗಿ 3 ತಿಂಗಳು ಉಚಿತ ಸಿಲಿಂಡರ್‌ ನೀಡುವುದಾಗಿ ಕೇಂದ್ರ ಸರ್ಕಾರವೇ ಘೋಷಿಸಿತ್ತು. ಹಾಗಾಗಿ, ಅಂತಹ ಕುಟುಂಬಗಳಿಗೆ ಖರೀದಿಸಿದ ಹಣವನ್ನು ಅವರ ಖಾತೆಗಳಿಗೆ ಜಮೆ ಮಾಡುವುದಾಗಿ ಹೇಳಿದೆ. ಆದರೆ, ಯಾವ ರೀತಿಯ ಮಾನದಂಡದ ಮೇಲೆ ಹಣ ವಾಪಸ್‌ ನೀಡುತ್ತದೆ ಎಂಬುದೇ ಗೊಂದಲಾಗಿದೆ. ಅಲ್ಲದೆ, ಸರ್ಕಾರ ಕಳೆದ ನಾಲ್ಕು ತಿಂಗಳುಗಳಿಂದ  ಯಾವುದೇ ಫಲಾನುಭವಿಗಳ ಖಾತೆಗಳಿಗೆ ನಗದು ವರ್ಗಾವಣೆ ಮಾಡದಿರುವ ಬಗ್ಗೆ ಗ್ರಾಹಕರು ಕೇಂದ್ರದ ವಿರುದ್ಧ ಕಿಡಿ ಕಾರಿದ್ದಾರೆ. ದೇಶದಲ್ಲಿ  27 ಕೋಟಿ ಎಲ್ ಪಿಜಿ ಗ್ರಾಹಕರಿದ್ದಾರೆ.


Read Also: ಸ್ಯಾಂಡಲ್ ವುಡ್ ನ ಮಾದಕ ದಂಧೆ : ಸಿಸಿಬಿಯಿಂದ ರಾಗಿಣಿ ದ್ವಿವೇದಿ ವಿಚಾರಣೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights